ಅಮಿತಾಬ್ ಬಚ್ಚನ್ ನಿವಾಸಕ್ಕೆ ಪೊಲೀಸ್ ಸರ್ಪಗಾವಲು


ಮುಂಬೈ, ಸೆ16 -ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮನೆಯ ಹೊರಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಬಾಲಿವುಡ್ ನಲ್ಲಿ ಡ್ರಗ್ಸ್ ಕುರಿತು ಮಾತನಾಡಿದ್ದ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರ ವಿರುದ್ಧ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಹೇಳಿಕೆ ನೀಡಿ, ಆಕ್ರೋಶ ವ್ಯಕ್ತಪಡಿಸಿದ ಮರುದಿನ ಮುಂಬೈ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ.

ಮಂಗಳವಾರ ಸಂಸತ್ತಿನಲ್ಲಿ ಬಿಜೆಪಿ ಸಂಸದ ರವಿ ಕಿಶನ್ ಮಾತಿಗೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್,”ಕೆಲವೇ ಜನರ ಕಾರಣದಿಂದಾಗಿ ನೀವು ಇಡೀ ಉದ್ಯಮವನ್ನು ಕೆಡಿಸಲು ಸಾಧ್ಯವಿಲ್ಲ.
ಮನರಂಜನಾ ಕ್ಷೇತ್ರದ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗುತ್ತಿದೆ.
ಈ ಕ್ಷೇತ್ರದಿಂದ ಹೆಸರು ಗಳಿಸಿದವರು ಅದನ್ನು ‘ಗಟಾರ’ ಎಂದು ಕರೆದಿದ್ದಾರೆ. ಇದನ್ನು ನಾನು ಸ್ವಲ್ಪವೂ ಒಪ್ಪುವುದಿಲ್ಲ. ಇಂತಹ ಭಾಷೆ ಬಳಸದಂತೆ ಸರಕಾರ ಜನರಿಗೆ ಹೇಳಬೇಕು ಎಂದು ಪರೋಕ್ಷವಾಗಿ ನಟಿ ಕಂಗನಾ ರಣಾವತ್ ಅವರನ್ನು ಟೀಕಿಸಿದ್ದರು. ನಂತರ ಈ ಸಹೊ ಬೆಳವಣಿಗೆ ಜರುಗಿದೆ.