ಅಮಾನವೀಯತೆಗೆ ಬಲಿಯಾದ ಕುಟುಂಬ

ಚಾಮರಾಜನಗರ, ಜೂ.03: ಇತ್ತೀಚೆಗೆ “ಪ್ರಾಣಿಗಳೇ ಗುಣದಲಿ ಮೇಲು, ಮಾನವನು ಅದಕ್ಕಿಂತ ಕೀಳು” ಎಂಬ ಡಾ|| ರಾಜ್‍ಕುಮಾರ್ ಹಾಡಿದ ಹಾಡು ಪ್ರಸ್ತುತವೆನಿಸಿದೆ.
ಜನರಲ್ಲಿ ಮಾನವೀಯತೆ, ಮನುಷ್ಯತ್ವ ಎಂಬುದು ಮರೆಯಾಗಿ, ಇನ್ನೂ ಮೌಡ್ಯ, ಅಸ್ಪøಶ್ಯತೆ, ಅನಾಗರೀಕತೆ, ದ್ವೇಷ, ವಂಚನೆ ತುಂಬಿ ತುಳುಕುತ್ತಿದೆ. ಅದರಲ್ಲೂ ಕೋವಿಡ್‍ನಂತ ಸಂಕಷ್ಟದ ಸಮಯದಲ್ಲಿ ಇದು ಯಥೇಚ್ಛವಾಗಿ ಕಂಡು ಬರುತ್ತಿದೆ. ಇದಕ್ಕೆ ನಿನ್ನೆ ಚಾಮರಾಜನಗರ ತಾಲೂಕಿನ ಹೆಚ್.ಮೂಕಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯು ಸಾಕ್ಷಿಯಾಗಿದೆ.
ಗ್ರಾಮದ ಮಹಾದೇವಪ್ಪ ರವರಿಗೆ ಕಳೆದ 20 ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾಮಾನ್ಯ ಗುಣ ಲಕ್ಷಣಗಳು ಇದ್ದ ಕಾರಣ ಮನೆಯಲ್ಲಿಯೇ ಆರೈಕೆಗೊಂಡು ಗುಣಮುಖರಾಗಿದ್ದರು.
ಕುಟುಂಬದ ಜೀವನ ನಿರ್ವಹಣೆಗೆ ಬೇರೆಯವರುಗಳ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲದೆ ಹಸು ಸಾಕಾಣಿಕೆ ಮಾಡಿಕೊಂಡು ಹಾಲನ್ನು ಕರೆದು ಗ್ರಾಮದಲ್ಲಿಯೇ ಮನೆ ಮನೆಗಳಿಗೆ ಹಾಕುತ್ತಿದ್ದರು. ಇದರಿಂದ ಇವರ ಕುಟುಂಬದ ಜೀವನ ಸಾಗುತ್ತಿತ್ತು.
ಆದರೆ ಕೊರೋನ ಸೋಂಕು ತಗುಲಿದ ಗುಣಮುಖರಾದ ನಂತರವೂ ಸಹ ಗ್ರಾಮದ ಜನರು ಅಮಾನವೀಯವಾಗಿ ನಡೆದುಕೊಂಡು ಇವರು ಕುಟುಂಬದವರನ್ನು ಮಾತನಾಡಿಸದೇ ದೂರ ಇಟ್ಟರು. ಗುಣಮುಖರಾದ ನಂತರವೂ ಸಹ ಇವರನ್ನು ಗ್ರಾಮದ ಯಾರೂ ಸಹ ಕೂಲಿಗೆ ಕರೆಯುತ್ತಿರಲಿಲ್ಲ. ಅಲ್ಲದೆ ಹಾಲನ್ನು ಸಹ ಪಡೆದುಕೊಳ್ಳದೆ ನಿಷ್ಕøಷ್ಠವಾಗಿ ನಡೆದುಕೊಂಡು ಒಂದು ರೀತಿ ಅಸ್ಪøಶ್ಯರಂತೆ ಕಾಣತೊಡಗಿದರು. ಲಾಕ್‍ಡೌನ್‍ನಿಂದಾಗಿ ಬೇರೆ ಕಡೆ ಕೂಲಿಗೂ ಸಹ ಹೋಗಲಾಗಲಿಲ್ಲ. ಇದರಿಂದ ಆರ್ಥಿಕ ಕೊರತೆ ಉಂಟಾಗಿ ಇವರ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಯಿತು.
ಗ್ರಾಮದವರ ಅಸಹಕಾರದಿಂದ ಬೇಸತ್ತು ಹಾಗೂ ಕುಟುಂಬ ನಿರ್ವಹಣೆಗೆ ಆರ್ಥಿಕ ತೊಂದರೆ ಉಂಟಾದಾಗ ಮುಂದೆ ಜೀವನ ನಿರ್ವಹಿಸಲು ಕಷ್ಟವೆಂದು ತಿಳಿದು ಮನನೊಂದ ಮಹದೇವಪ್ಪ ಮತ್ತು ಅವರ ಪತ್ನಿ ಮಂಗಳಮ್ಮ, ಮಕ್ಕಳಾದ ಗೀತಾ ಮತ್ತು ಶೃತಿ ನೇಣಿಗೆ ಶರಣಾಗಿದ್ದಾರೆ.
ಜನರು ಗ್ರಾಮದಲ್ಲಾಗಲೀ ಅಥವಾ ನಗರದಲ್ಲಾಗಲೀ ತಮ್ಮ ನೆರೆಹೊರೆಯ ಜನರಿಗೆ ಕೋವಿಡ್ ಸೋಂಕು ತಗುಲಿದಾಗ ನಾವು ಅವರಿಗೆ ಆರ್ಥಿಕವಾಗಿ ನೆರವಾಗದಿದ್ದರೂ ಕೇವಲ ಅವರಲ್ಲಿ ಆತ್ಮಸ್ಥೈರ್ಯ ತುಂಬಿ, ತಮಗೆ ಸಾಧ್ಯವಾದಷ್ಟು ಸಹಾಯ ಮಾಡಿದಾಗ ಅವರು ರೋಗದ ಭಯದಿಂದ ಹೊರಬರಲು ಸಾಧ್ಯವಾಗುತ್ತದೆ.
ಆದರೆ ಈಗ ನಡೆಯುತ್ತಿರುವುದೇ ಬೇರೆ, ತಮ್ಮ ನೆರೆಹೊರೆಯವರಿಗೆ ಸೋಂಕು ಕಂಡು ಬಂದರೆ ಅವರನ್ನು ಮಾತನಾಡಿಸುವುದಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ನಡೆಯುತ್ತಿಲ್ಲ. ಇದು ಎಲ್ಲಾ ಕಡೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದರಿಂದ ಸೋಂಕಿತರಿಗೆ ಒಂಟಿ ಎಂಬ ಭಾವನೆ ಕಾಡಿ, ಭಯಭೀತರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.