ಅಮಾನತ್ತು ಹಿನ್ನೆಲೆ:ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ

ಇಂಡಿ :ಜ.7:ಪಟ್ಟಣದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಾರ್ ಶೆಡ್ಯೂಲ್ಡ ಡ್ಯೂಟಿ ಮಾಡಲು ಹಿಂದೇಟು ಹಾಕಿದಕ್ಕೆ ನಿರ್ವಾಹಕ ನೊರ್ವನಿಗೆ ಅಮಾನತ್ತುಗೊಳಿಸಿದಕ್ಕೆ ನಿರ್ವಾಹಕ ಮಾನಸಿಕ ಮಾಡಿಕೊಂಡು ಡಿಪೆÇದ ಗೇಟ್ ಮುಂದೆ ಪೆಟ್ರೋಲ್ ಸುರಿವಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು,ಪಕ್ಕದಲ್ಲಿಯೇ ಇದ್ದ ನೌಕರರು ತಡೆದಿರುವ ಘಟನೆ ಬುಧವಾರ ನಡೆದಿದೆ.ಸರ್ಪರಾಜ ಪಟೇಲ ಆತ್ಯಹತ್ಯೆಗೆ ಯತ್ನಿಸಿದ ನಿರ್ವಾಹಕನಾಗಿದ್ದಾನೆ.

ಪೆಟ್ರೋಲ್ ಸುರಿವಿಕೊಂಡ ನಿರ್ವಾಹಕನ ಬಾಯಿ,ಕಣ್ಣಿನಲ್ಲಿ ಪೆಟ್ರೋಲ್ ಹೋಗಿದ್ದು,ನೋವಿನಿಂದ ಒದ್ದಾಡುತ್ತಿದ್ದು ಚಿಕಿತ್ಸೆಗಾಗಿ ಇಂಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು,ಪ್ರಾಥಮಿಕ ಚಿಕಿತ್ಸೆ ನೀಡಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ವಿವರ:

ಪಟ್ಟಣದ ಸಾರಿಗೆ ಘಟಕದಿಂದ ಸೋಮವಾರ (ಜ.4) ನಿರ್ವಾಹಕ ಸರ್ಪರಾಜ ಪಟೇಲ ಬುಯ್ಯಾರ ಗ್ರಾಮದ ವಸತಿಗೆ ಹೋಗುವ ಬಸ್ಸಿಗೆ ಕರ್ತವ್ಯ ನಿರ್ವಹಿಸುದ್ದು,ಕರ್ತವ್ಯ ಮುಗಿಸಿ ಹೋಗಬೇಕು ಎನ್ನುವಷ್ಟರಲ್ಲಿ ಇದು ಬಾರ್ ಶೆಡ್ಯೂಲ್ಡ ಡ್ಯೂಟಿ ಇದೆ. ಇನ್ನೊಂದು ಟ್ರೀಪ್ ಹೋಗಿಬರಲು ಘಟಕ ವ್ಯವಸ್ಥಾಪಕರು ಸೂಚಿಸಿದ್ದಾರೆ. ಅಂದು 10 ಮಾರ್ಗದ ಬಸ್‍ಗಳು ಬಾರ್ ಶೆಡ್ಯೋಲ್ಡ ಹೋಗದೆ ನಿಲ್ಲಿಸಲಾಗಿತ್ತು. ಅಂದು ಬಸ್ ನಿಲ್ದಾಣಕ್ಕೆ ವಿಭಾಗೀಯ ನಿಯಂತ್ರಣಾ„ಕಾರಿ,ಡಿಟಿಒ ಭೇಟಿ ನೀಡಿದ್ದು,ನಿಲ್ದಾಣದಲ್ಲಿ ಬಸ್ ನಿಂತಿರುವ ಕುರಿತು ಪರಿಶೀಲಿಸಿದರು. ಬಾರ್ ಶೆಡ್ಯೋಲ್ಡ ಡ್ಯೂಟಿಗೆ ಹೋಗುವುದಿಲ್ಲ ಎಂದು ಚಾಲಕ,ನಿರ್ವಾಹಕರು ತಕರಾರು ತಗೆದಿದ್ದಾರೆ ಎಂದು ಘಟಕ ವ್ಯವಸ್ಥಾಪಕರು ಮೇಲಾ„ಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಕರ್ತವ್ಯಕ್ಕೆ ಹೋಗಲು ಹಿಂದೇಟು ಹಾಕಿದ 10 ಬಸ್‍ಗಳ ಚಾಲಕ,ನಿರ್ವಾಹಕರ ಮೇಲೆ ಘಟಕ ವ್ಯವಸ್ಥಾಪಕ ಮೇಲಾ„ಕಾರಿಗಳಿ ವರದಿ ಸಲ್ಲಿಸಿದ್ದರು.ವರದಿ ಆಧರಿಸಿ ವಿಭಾಗೀಯ ನಿಯಂತ್ರಣಾ„ಕಾರಿಗಳು 10 ಜನರಿಗೆ ಅಮಾನತ್ತು ಮಾಡಬಹುದಿತ್ತು.ಇಲ್ಲವೆ ದಂಡ ಹಾಕಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ನಿರ್ವಾಹಕ ಸರ್ಪರಾಜ ಪಟೇಲ ಎಂಬುವವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಕಾರ್ಮಿಕ ಸಂಘದ ಮುಖಂಡರು ಆರೋಪಿಸಿದ್ದಾರೆ.

ಕೊರೋನಾ ಬಂದ ಮೇಲೆ ಬಾರ್ ಡ್ಯೂಟಿ ನೀಡುವುದು,ಹೆಚ್ಚುವರಿ ಕೆಲಸಕ್ಕೆ ನೀಡುವ ಸಂಬಳ(ಒಟಿ) ನೀಡದೆ ಇರವುದು ಹೀಗೆ ಹಲವಾರು ಕಿರುಕುಳ ಅ„ಕಾರಿಗಳು ನೀಡುತ್ತಲೆ ಇದ್ದಾರೆ.ಉದ್ದೇಶಪೂರ್ವಕವಾಗಿ ಅಮಾನತ್ತು ಮಾಡಿದ ನಿರ್ವಾಹಕನಿಗೆ ಮರು ಆದೇಶ ನೀಡಬೇಕು. ನಿರ್ವಾಹಕನ ಪ್ರಾಣಕ್ಕೆ ಅಪಾಯವಾದರೆ ಅದಕ್ಕೆ ಅ„ಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಕಾರ್ಮಿಕ ಸಂಘದ ಮುಖಂಡರು ಆರೋಪಿಸಿದರು.ಸ್ಥಳಕ್ಕೆ ಇಂಡಿ ಶಹರ ಪೆÇಲೀಸರು ಭೇಟಿ ನೀಡಿದ್ದು,ಪರಿಶೀಲನೆ ನಡೆಸಿದ್ದಾರೆ.