ಅಮಾನತು ರದ್ದುಗೊಳಿಸಿ ಶಿಕ್ಷಕರ ನಿಯೋಜನೆ ಮಾಡುವಂತೆ ವಿಶ್ವನಾಥ ಗೋಗಿ ಒತ್ತಾಯ

ಜೇವರ್ಗಿ :ಜೂ.28: ಹರನೂರ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಕರು ಮಕ್ಕಳಿಗೆ ಸರಿಯಾದ ಪಾಠದ ಜೋತೆಗೆ ಇನ್ನುಳಿದ ಚಟುವಟಿಕೆಗಳನ್ನ ಮಾಡಿಸಿ ಮಕ್ಕಳ ಬುದ್ದಿಮಟ್ಟವನ್ನು ಹೆಚ್ಚಿಸುತ್ತಿದ್ದರು. ಅಂತಹ ಶಿಕ್ಷಕರನ್ನು ಅಮಾನತು ಮಾಡಿರುವುದು ನಮ್ಮ ಗ್ರಾಮದ ಸರ್ವರು ಕಂಡಿಸುತ್ತೆವೆ. ಆ ಶೀಕ್ಷಕರನ್ನ ಮತ್ತೆ ನಮ್ಮುರ ಶಾಲೆಗೆ ನೀಯೋಜನೆ ಮಾಡಬೇಕೆಂದು ಗ್ರಾಮಸ್ತ ವಿಶ್ವನಾಥ ಆಗ್ರಹಿಸಿದರು.

ತಾಲೂಕಿನ ಹರನೂರ ಗ್ರಾಮದಲ್ಲಿ ಶಿಕ್ಷಕರ ಅಮಾನತು ಖಂಡಿಸಿ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳು ಮತ್ತು ಪಾಲಕರ ಜೋತೆಗೆ ಗ್ರಾಮಸ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ವಿಶ್ವನಾಥ ಗೋಗಿ ಮಾತನಾಡಿ ಶಾಲೆಯಲ್ಲಿ ಚೆನ್ನಾಗಿ ಪಾಠ ಮಾಡುತ್ತಿರುವ ಶಿಕ್ಷಕರನ್ನು ಯಾವುದೇ ಕಾರಣವಿಲ್ಲದೆ ಅಮಾನತುಗೊಳಿಸುರುವದು ಖಂಡಿಸುತ್ತೇವೆ. 4 ಶಿಕ್ಷಕರಗೆ ನೋಟಿಸ್ ಕಳಿಸಿದ್ದೀರಿ ಆದರೆ ಒಬ್ಬ ಶಿಕ್ಷಕನಿಗೆ ಅಮಾನತು ಮಾಡಿರುವುದು ವಿಷಾಧನೆಯ. ಕೂಡಲೇ ಅಮಾನತ್ತು ಮಾಡಿದ ಶಿಕ್ಷಕರನ್ನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ನಿಯೋಜನೆ ಮಾಡಬೇಕು. ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳು ಆ ಶಿಕ್ಷಕನಿಗೆ ಅಮಾನತ್ತು ಮಾಡಿದ್ದಕ್ಕಾಗಿ ಕಾರಣ ಕೊಡಬೇಕು. ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವ ನಮ್ಮೂರ ಶಾಲೆ, ಇದ್ದ ಶಿಕ್ಷಕರನ್ನು ಅಮಾನತುಗೊಳಿಸುವುದು ಯಾವ ನ್ಯಾಯ.

ನಮ್ಮುರ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೋತೆಗೆ ಇನಿತರ ಚಟುವಟಿಕೆಗಳಿಂದ ಮಕ್ಕಳ ಬುದ್ದಿಮಟ್ಟವನ್ನು ಹೆಚ್ಚಿಸುತ್ತಿದ್ದರು. ಅಂತಹ ಶಿಕ್ಷಕರು ಪ್ರತಿಯೋದು ಶಾಲೆಯಲ್ಲಿರಬೇಕು. ನಮ್ಮುರ ಶಾಲೆಗೆ ಅವರನ್ನ ಮತ್ತೆ ನಿಯೋಜನೆ ಮಾಡಬೇಕು. ಅದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ತಾಲೂಕ ದಂಡಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲೆಗೆ ಶಿಕ್ಷಕರನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಶಾಲೆ ಪ್ರಾರಂಭವಾದ ದಿನದಿಂದ ಈ ರೀತಿ ಸಮಸ್ಯೆ ಆದರೆ ಮುಂದಿನ ಮಕ್ಕಳ ಭವಿಷ್ಯ ರೂಪಿಸುವರು ಯಾರು. ಶಿಕ್ಷಕರ ನಿಯೋಜಿಸಿ ನಮ್ಮ ಮಕ್ಕಳ ವಿದ್ಯಾಭ್ಯಾಸ ಹೇಗೆ ಅನುಕೂಲ ಮಾಡಿಕೊಡಬೇಕು ಎಂದು ಹರನೂರ ಗ್ರಾಮಸ್ಥರು ದಂಡಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಪ್ರತಿಭಟನೆ ಸ್ಥಳಕ್ಕೆ ತಾಲೂಕ ದಂಡಾಧಿಕಾರಿ ಶ್ರೀಮತಿ ರಾಜೇಶ್ವರಿ ಎಸ್ ಪಿ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಭೀಮರಾಯ ಫರತಾಬಾದ್, ಸಕ್ರಪ್ಪ , ಪರಮಾನಂದ ಗೌಡ, ಮಾಳಪ್ಪ ಪೂಜಾರಿ, ಯಲ್ಲಾಲಿಂಗ ಸುಭೆದಾರ, ಉಸ್ಮಾನ್ ಅಲಿ, ಸಿದ್ದಣ್ಣ ಜೈನ್, ಶಿವಮಾನಪ್ಪ ಬೈಲಾಪುರ, ಮಲ್ಕನ ಗೌಡ ಆಲೂರ, ಸಕ್ಕರಣ್ಣ ಗೌಡ ಹಾಲಗಡ್ಡಿ, ಮಲ್ಲಣ್ಣ ಮಾಸ್ತರ್ ಹೊಸಮನಿ, ಬಸವರಾಜ್ ಸಾಸಾಬಾಳ, ಮಹಾದೇವ ಸಾಸಾಬಾಳ, ಸಿದ್ದಪ್ಪ ಯಳವಾರ, ಮರಲಿಂಗಪ್ಪ ಗೋಗಿ, ಶರಣಪ್ಪ ಫರತಾಬಾದ್, ಗ್ರಾಮಸ್ಥರು ಉಪಸ್ಥಿತರಿದ್ದರು.