ವಿದ್ಯಾರ್ಥಿಗಳಿಗೆ ಮಹಿಳಾ ವಾರ್ಡನ್ ಕಿರುಕುಳ
ಲಿಂಗಸೂಗೂರು,ಜು.೧೩-
ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಸತಿ ನಿಲಯ ವಿದ್ಯಾರ್ಥಿಗಳು ಇಂದು ಬೆಳಗ್ಗೆಯಿಂದ ತಿಂಡಿ ಉಪಹಾರ ಮಾಡದೆ ಈ ವಸತಿ ನಿಲಯ ಮಹಿಳಾ ವಾರ್ಡನ್ ನಾಗರತ್ನ ಇವರಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ವಿನಃ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ವಾರ್ಡನ್ ವಿರುದ್ಧ ವಸತಿ ನಿಲಯದಲ್ಲಿ ಪ್ರತಿಭಟನೆ ನಡೆಸಿ ಕೂಡಲೆ ನಿಲಯ ಪಾಲಕರನ್ನು ಅಮಾನತು ಮಾಡಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಆಗ್ರಹ ಮಾಡಿದ್ದಾರೆ.
ಲಿಂಗಸ್ಗೂರು ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ಪದವಿ ವಸತಿ ನಿಲಯ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ.
ಹಟ್ಟಿ ಲಿಂಗಸ್ಗೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ(ಪದವಿ) ಹಾಸ್ಟೇಲ್ ನಲ್ಲಿ ಕನಿಷ್ಟ ಅಗತ್ಯ ಮೂಲಭೂತ ಸೌಕರ್ಯಗಳೂ ಇಲ್ಲದೆ ಹಂದಿಯ ಗೂಡಿನಂತಾಗಿದೆ. ನಿಲಯದಲ್ಲಿ ಮೇನು ಚಾಟ್ ಹಾಕದೆ ಸರಿಯಾದ ಸಮಯಕ್ಕೆ ಊಟ ನೀಡಿಲ್ಲ. ಊಟ, ಸ್ವಚ್ಛತೆ ಮೂಲಭೂತ ಸೌಕರ್ಯ ಕೇಳಿದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಮೂಲಕ ಮಕ್ಕಳನ್ನು ಹವಾಮಾನ ಮಾಡಿ ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ವಾರ್ಡನ್ ಮತ್ತು ಇಲಾಖೆಯು ಈ ನೀತಿಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ತೀವ್ರವಾಗಿ ಖಂಡಿಸುತ್ತದೆ.
ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಶೋಷಿತ ಸಮುದಾಯಗಳ ಮಕ್ಕಳು ಅನೇಕ ಭವಿಷ್ಯದ ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಕಡೆ ಮುಖ ಮಾಡುತ್ತಾರೆ. ಆದರೆ ಈ ಹಾಸ್ಟಲ್ ವ್ಯವಸ್ಥೆ ಮತ್ತೊಂದು ರೀತಿಯಲ್ಲಿ ಶೋಷಣೆ ಮಾಡಿ ಅವರ ಕನಸುಗಳಿಗೆ ಬ್ರೇಕ್ ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸ್ಟೆಲ್‌ನಲ್ಲಿ, ಸ್ನಾನಗೃಹ, ಟಾಯ್ಲೆಟ್ ಶುದ್ದ ಕುಡಿಯುವ ನೀರು ವ್ಯವಸ್ಥೆಯಂತೂ ಕೇಳಲೇಬೇಡಿ.
ಇನ್ನೂ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದೇ ಅನಿವಾರ್ಯವಾಗಿ ಹಾಸ್ಟೆಲ್‌ನಲ್ಲಿ ದಿನಗಳೆಯುವಂತಾಗಿದೆ. ಹಾಸ್ಟೆಲ್ ವಾರ್ಡನ್ ನಾಗರತ್ನಾ ಹಾಸ್ಟೆಲ್‌ಗೆ ವಾರಕೊಮ್ಮೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳ ಕರೆ ಸ್ವೀಕರಿಸುತ್ತಿಲ್ಲ. ಸೌಲಭ್ಯ ಕೇಳಿದ ವಿದ್ಯಾರ್ಥಿಗಳಿಗೆ ವಾರ್ಡನ್ ದಮ್ಕಿ ಹಾಕುತ್ತಿದ್ದಾರೆ. ಅಥವಾ ಸೌಲಭ್ಯ ಕೇಳುವ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ತಣ್ಣಗಾಗಿಸುವ ಪ್ರಯತ್ನ ಮಾಡಿ ಸೌಲಭ್ಯ ನೀಡದೇ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಆದ್ದರಿಂದ ಈ ಕೂಡಲೇ ಈ ಬೇಜವಾಬ್ದಾರಿ ವಾರ್ಡನ್‌ನ್ನು ಕೆಲಸದಿಂದ ವಜಾ ಮಾಡಬೇಕು ಎಂಬುದು ಎಸ್‌ಎಫ್‌ಐ ಆಗ್ರಹಿಸಿದೆ.
ಹಾಸ್ಟೆಲ್‌ಗೆ ಫುಡ್ ಚಾರ್ಟ್ ಹಾಕಿಲ್ಲ. ತಮಗೆ ಇಚ್ಛೆ ಬಂದಂತೆ ವಿದ್ಯಾರ್ಥಿಗಳಿಗೆ ಊಟ ನೀಡುತ್ತಾರೆ. .ಹಾಸ್ಟೆಲನ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಮಳೆ ಬಂದಾಗ ಸಂಪೂರ್ಣವಾಗಿ ಸೋರುತ್ತಿದೆ.
ಹಾಸ್ಟೆಲ್ ಒಳಗಡೆ ನುಗ್ಗಿ ಸ್ಥಳೀಯ ಪುಡಾರಿಗಳು ಕೋಣೆ ಒಳಗಡೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದರೂ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಿಲ್ಲ. ಪ್ರಶ್ನಿಸಿದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನೇಕ ಬಾರಿ ದಮ್ಕಿಯಾಕಿದ್ದು ಇದೆ. ಆದರೆ ಈ ಬಗ್ಗೆ ವಾರ್ಡನ್ ಆಗಲಿ ಇಲಾಖೆಯಾಗಲಿ, ತಲೆ ಕೆಡಿಸಿಕೊಳ್ಳುತ್ತಿಲ್ಲ.
ಕೊಠಡಿ ಸಂಪೂರ್ಣವಾಗಿ ಸೋರುತ್ತಿದೆ. ಬೇಕಾಬಿಟ್ಟಿಯಾಗಿ ಹಾಸ್ಟೆಲ್‌ನ ರಿಪೇರಿ, ಪೇಂಟಿಂಗ್ ಎಲೆಕ್ಟ್ರಿಕಲ್ ವರ್ಕ್ ಅನೇಕ ಸಮಸ್ಯೆಗಳು ಇವೆ. ವಾಸ್ತವದಲ್ಲಿ ಕೆಲಸಗಳೇ ಆಗಿಲ್ಲ. ಹಾಸ್ಟೆಲ್ ನಿರ್ವಹಣೆ ಹೆಸರಲ್ಲಿ ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥ ವಾರ್ಡನ್ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ತಾಲೂಕು ಎಸ್‌ಎಫ್‌ಐ ತಾಲೂಕ ಘಟಕ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ
ರಮೇಶ್ ವೀರಾಪೂರ್ ಪವನ್ ಕಮದಾಳ ಬಸಮ್ಮ ಅಶ್ವಿನಿ ಅನು. ರಂಗಮ್ಮ ಪ್ರಿಯಾಂಕ ಉಷಾ ಇನ್ನಿತರರು ಉಪಸ್ಥಿತರಿದ್ದರು.