ಅಮವಾಸ್ಯೆ ಪ್ರಯುಕ್ತ ವಿಶೇಷ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.24: ಪಟ್ಟಣದ ಬಲುಕುಂದಿ ಗ್ರಾಮದ ಶ್ರೀ ಬನ್ನಿ ಮಹಾಂಕಾಳಮ್ಮ ದೇವಿ ದೇವಸ್ಥಾನದ ಅವರಣದಲ್ಲಿ ಅಮವಾಸೆ ಪ್ರಯುಕ್ತ ಶ್ರೀ ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾನಿಲಯ ವತಿಯಿಂದ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಆಧ್ಯಾತ್ಮ ಮತ್ತು ಜ್ಞಾನ ಚಿಂತನೆಯ ಬಗ್ಗೆ ಅರಿವು ಮೂಡಿಸಲಾಯಿತು.
 ಈ ಕಾರ್ಯಕ್ರಮವನ್ನು ಸೇವಾ ಸಮಿತಿ ಶ್ರೀ ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನ ಬಲಕುಂದಿ ಇವರ ವತಿಯಿಂದ ಆಯೋಜಿಸಲಾಯಿತು.
ಸಿರುಗುಪ್ಪ ಬ್ರಹ್ಮ ಕುಮಾರಿ ಸಂಸ್ಥೆಯ ಪೂರ್ಣಿಮಾ ಮತ್ತು ಗುರುರಾಜ, ರಾಮಚಂದ್ರ, ಹನುಮಂತಪ್ಪ, ಕಬ್ಬೇರು ಕಾಳಪ್ಪ, ಮುತ್ತಯ್ಯ, ಕೋರಿ ಪಿಡ್ಡಯ್ಯ,ಎಚ್ ಈರಣ್ಣ ಇದ್ದರು.