ಅಮಲಿನಲ್ಲಿ ಯುವಕರ ಬಡಿದಾಟ

ಬೆಂಗಳೂರು:ನಿನ್ನೆ ತಡರಾತ್ರಿ ೧೧ ಗಂಟೆ ಸುಮಾರಿಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಯುವಕರ ಗುಂಪೊಂದು ಮದ್ಯದ ಅಮಲಿನಲ್ಲಿ ಬಡಿದಾಡಿಕೊಂಡ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿ ಬಡಿದಾಡಿಕೊಂಡ ಯುವಕರುಬೆಂಗಳೂರು : ನಗರದಲ್ಲಿ ವಾರಾಂತ್ಯದ ವೇಳೆಗೆ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಮದ್ಯದ ನಶೆಯಲ್ಲಿದ್ದ ಯುವಕರ ಗುಂಪೊಂದು ನಡು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ಭಾನುವಾರ ತಡರಾತ್ರಿ ೧೧ ಗಂಟೆ ಸುಮಾರಿಗೆ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದು ಪಬ್‌ನಿಂದ ಹೊರಬಂದ ನಾಲ್ಕೈದು ಜನ ಯುವಕರ ಗುಂಪು ಗಲಾಟೆ ಮಾಡಿಕೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದ್ದಾರೆ.
ಅಷ್ಟೇ ಅಲ್ಲದೇ, ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಧಾನಸೌಧ ಠಾಣೆ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.ಮದ್ಯದ ಮತ್ತಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಘಟನೆ ಕಳೆದ ಶನಿವಾರ ರಾತ್ರಿ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದಿತ್ತು. ಬುದ್ಧಿ ಹೇಳಲು ಹೋದವರ ಮೇಲೆಯೇ ಮುಗಿ ಬೀಳುತ್ತಿದ್ದ ಯುವತಿಯನ್ನು ಸಂಭಾಳಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು. ಕೊನೆಗೆ ಸ್ಥಳದಲ್ಲಿದ್ದ ಇತರೆ ಯುವತಿಯರ ನೆರವಿನಿಂದ ಆಕೆಯನ್ನು ಮನೆಗೆ ತಲುಪಿಸಲಾಗಿತ್ತು.