ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ

ಬೀದರ:ಜ.2: ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘ ಬೀದರ ವತಿಯಿಂದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆಯನ್ನು ದಿನಾಂಕ 01/01/2021 ರಂದು ಸಮಯ 10.00 ಗಂಟೆಗೆ ಚೌಳಿ ರಸ್ತೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಸದರಿ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ವಿಶ್ವಕರ್ಮ ಕೋನ-ಮೆಳಕುಂದಾ ಸಭೆಯ ಅಧ್ಯಕ್ಷತೆ ವಹಿಸಿದರು, ಉದ್ಘಾಟಕರಾಗಿ ಶ್ರೀ ಶೆಂಕರರಾವ ಪಂಚ್ಯಾಳ ನಿವೃತ ಜಿಲ್ಲಾ ಕೌಶಲ್ಯ ಅಭಿವೃಧಿ ಅಧಿಕಾರಿಗಳು ಕಲಬುರ್ಗಿ, ಮುಖ್ಯ ಅತಿಥಿಗಳಾಗಿ ಶ್ರೀ ಬಿ.ಕೆ. ಬಡಿಗೇರ ಹಿರಿಯ ಚಿತ್ರಕಲಾ ಉಪನ್ಯಾಸಕರು ಹಾಗೂ ಶ್ರೀ ರಮೇಶ ಚೆಟ್ನಳಿ ಜಿಲ್ಲಾ ಕೌಶಲ್ಯ ತರಬೇತಿದಾರರು ಬೀದರ. ಆಗಮಿಸಿದರು ಸದರಿ ಸಭೆಯಲ್ಲಿ ಶ್ರೀ ಶಂಕರರಾವ ಪಂಚ್ಯಾಳ ಮಾತನಾಡಿ ಬೀದರನಲ್ಲಿ ಇರುವ ಕೌಶಲ್ಯು ಜನಾಂಗದವರಾದ ವಿಶ್ವಕರ್ಮದವರಿಗೆ ಸ್ವಲ್ಪ ಅಧುನಿಕ ಕೌಶಲ್ಯ ತರಬೇತಿ ನೀಡಿದರೆ ಸ್ವಂತ ಉದ್ದಿಮೆ ಮಾಡಲು ಇಂದಿನ ತಾಂತ್ರಿಕ ಯುಗದಲ್ಲಿ ಸಮರ್ಥರಾಗುತ್ತಾರೆ. ವಿವಿಧ ಕೌಶಲ್ಯಗಳ ಬಗ್ಗೆ ಸವಿಸ್ತಾರವಾಗಿ ಸಮಜದ ಕುಶಲ ಕರ್ಮಿಗಳಿಗೆ ಮನದಟ್ಟಾಗುವಂತೆ ವಿವರಿಸಿದರು. ಹಾಗೂ ನಿನ್ನೆ ಸರಕಾರಿ ಸೇವೆಯಿಂದ ನಿವೃತರಾದ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯತಿಧಿಗಳಾದ ಬಿ.ಕೆ. ಬಡಿಗೇರ ಇವರು ಅಮರ ಶಿಲ್ಪಿ ಜಕಣಚಾರಿ ಇವರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ಮಾಡಿದರು ಹಾಗೂ ಶ್ರಿ ರಮೇಶ ಚಟ್ನಳ್ಳಿ ಇವರು ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರದ ಕೌಶಲ್ಯ ತರಬೇತಿ ಯೋಜನೆಗಳ ಬಗ್ಗೆ ಸಹಕಾರ ನೀಡುವ ಬಗ್ಗೆ ಮನವರಿಕೆ ಮಾಡಿದರು ಈ ಸಂದರ್ಭದಲ್ಲಿ ಶ್ರೀ ಆರ್. ಕೆ. ಪೆಂಟರ ಇವರಿಗೆ ಅಮರ ಶಿಲ್ಪಿ ಜಕಣಚಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸದರಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಸಂಘದ ಅಧ್ಯಕ್ಷರು ತಿಳಿಸಿದರು ಶ್ರೀ ಸುಭಾಷ ಪಂಚ್ಯಾಳ ಅತಿವಾಳ ಕಾರ್ಯದರ್ಶಿ ಸ್ವಾಗತಿಸಿದರು ಹಾಗೂ ಶ್ರೀ ರಮೇಶ ಸೋನಾರ ಸಂಚಾಲನೆ ಮಾಡಿದರು ಸದರಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀ ಶ್ರೀನಿವಾಸ ಪೊದ್ದಾರ, ಶ್ರೀ ಬಲಭೀಮರಾವ ಚಳಕಾಪೂರ, ಶ್ರೀ ರಘುನಾಥರಾವ ವಿಶ್ವಕರ್ಮ ಎಮ್.ಇ.ಎಸ್. ಶ್ರೀ ಜಿ. ಪ್ರಭಾಕರ, ಶ್ರೀ ದತ್ತಾತ್ರಿ ಹಿಪ್ಪಳಗಾಂವ, ಶ್ರೀ ವಿಠಲ ಬಕಚೌಡಿ, ಶ್ರೀ ಚಾರಿ ಪಂಚ್ಯಾಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.