ಅಮರ ಶಿಲ್ಪಿ ಜಕಣಾಚಾರಿ ಜಯಂತ್ಯೋತ್ಸವ

?????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ:ಜ.3: ಇಡೀ ಜಗತ್ತಿಗೆ ವಾಸ್ತು ಶಿಲ್ಪವನ್ನು ದೇಶದ ಸಂಸ್ಕøತಿ, ಪರಂಪರೆಗಳನ್ನು ತನ್ನ ಕೆತ್ತನೆ ಮೂಲಕ ಹೆಚ್ಚೇಚ್ಚು ಪ್ರವಾಸಿಗರನ್ನು ಭಾರತದತ್ತ ಸೆಳೆಯುವಂತೆ ಮಾಡಿದ ಕೀರ್ತಿ ಅಮರ ಶಿಲ್ಪಿ ಜಕಣಾಚಾರಿಯವರಿಗೆ ಸಲ್ಲುತ್ತದೆ. ಕಾರಣ ಅವರ ಶಿಲ್ಪ ಕಲೆಯನ್ನೇ ವಿಶ್ವಕರ್ಮ ಸಮಾಜದ ಬಾಂಧವರು ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವೃತ್ತಿಯನ್ನು ಮುಂದುವರೆಸಿಕೊಂಡು ಜಕಣಾಚಾರಿಯವರಂತೆ ಶ್ರೇಷ್ಠತೆ ಮೆರೆಯಬೇಕು ಎಂದು ತಹಶಿಲ್ದಾರ ಎಂ ಎಚ್ ಅರಕೇರಿ ಹೇಳಿದರು.

ಪಟ್ಟಣದ ಇಲ್ಲಿನ ಮಿನಿ ವಿಧಾನ ಸೌಧ ಆವರಣದಲ್ಲಿ ಶುಕ್ರುವಾರ ಇದೇ ಪ್ರಥಮ ಬಾರಿಗೆ ರಾಜ್ಯ ಸರಕಾರದಿಂದ ಅಮರ ಶಿಲ್ಪಿ ಜಕಣಾಚಾರಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಜಕಣಾಚಾರಿ ಅವರ ಭಾವ ಚಿತ್ರಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜದ ಪಂಚಕಸುಬುಗಳಿಂದ ಸಂಸ್ಕøತಿ ಪರಂಪರೆಯನ್ನು ಎತ್ತಿಹಿಡಿಯುವ ಮೂಲಕ ಇಡಿ ಜಗತ್ತಿಗೆ ಅನನ್ಯ ಕೋಡುಗೆ ನೀಡಿದೆ ಮಾತ್ರವಲ್ಲದೇ ಮಾದರಿಯ ಸಮಾಜವಾಗಿದೆ. ಇಂತಹ ಸಮಾಜದಲ್ಲಿ ಜನಿಸಿದ ಅಮರ ಶಿಲ್ಪಿ ಜಕಣಾಚಾರಿಯವರ ಸಾಧನೆ ಅಪಾರವಾಗಿದೆ.

ಹಾಗಾಗಿ ತಮ್ಮ ಮೂಲ ಕಸುಬಿನೊಂದಿಗೆ ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣವಾಗಿ ಸುದಾರಣೆಯಾಗಲು ಸಾಧ್ಯ ಇದರಿಂದ ಸಮಾಜದ ಅಭಿವೃದ್ಧಿಯತ್ತ ಕೊಂಡ್ಯೋಯ್ಯಬಹುದಾಗಿದೆ. ಸಧ್ಯ ಕೋವಿಡ್ 19 ಕೋರೊನಾ ವೈರಸ್ ನಿಂದ ಇಡಿ ಜಗತ್ತೇ ತತ್ತರಿಸಿ ಹೋಗಿದ್ದರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಕೋವಿಡ್ ನಿಯಮ ಜಾರಿಯಲ್ಲಿರುವ ಕಾರಣ ಸಧ್ಯ ಸರಕಾರ ಘೋಶಿಸಿದ ಅಮರ ಶಿಲ್ಪಿ ಜಕಣಾಚಾರಿಯವರ ಜಯಂತ್ಯೋತ್ಸವವು ಅದ್ದೂರಿಯಾಗಿ ಆಚರಿಸದೇ ಕೇವಲ ಸಾಂಕೇತಿಕವಾಗಿ ಆಚರಿಸುವಂತೆ ಸರಕಾರ ಆದೇಶಿಸಿದ್ದರಿಂದ ಸಾಂಕೇತಿ ಆಚರಿಸವ ಮೂಲಕ ಗೌರವಿಸಲಾಗುತ್ತಿದೆ ಎಂದರು.

ಈ ವೇಳೆ ವಿಶ್ವಕರ್ಮ ಮಹಾಸಭಾದ ತಾಲೂಕಾ ಅಧ್ಯಕ್ಷ ಮಲ್ಲಣ್ಣ ಪತ್ತಾರ(ತಾರನಾಳ), ಮುದ್ದೇಬಿಹಾಳ ಘಟಕದ ಅಧ್ಯಕ್ಷ ನಾರಾಯಣ ದೋಟಿಹಾಳ, ಉಪಾಧ್ಯಕ್ಷ ಮನೋಜ ಬಡಿಗೇರ, ಕಾರ್ಯದರ್ಶಿ ಚಂದ್ರಶೇಖರ ಪತ್ತಾರ, ಖಜಾಂಚಿ ಈರಣ್ಣ ಬಡಿಗೇರ(ಕೆ ಎಸ್ ಆರ್ ಟಿ ಸಿ) ಮನೋಹರ ಶಿರವಾಳ, ಅಶೋಕ ಪತ್ತಾರ(ಬಳಬಟ್ಟಿ), ಮಳಿಯಪ್ಪ ಪತ್ತಾರ, ಬ್ರಹ್ಮಾನಂದ ನಂದರಗಿ, ವಿಜಯ ಬಡಿಗೇರ, ಮುತ್ತು ಬಡಿಗೇರ (ತಂಗಡಗಿ)ವಿರುಪಾಕ್ಷೀ ಪತ್ತಾರ(ಇಟಗಿ)ಮಧುಕರ ದೋಟಿಹಾಳ, ಆನಂದ ಪತ್ತಾರ, ಸುರೇಶ ಕುಂಟೋಜಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕಾಳಪ್ಪ ಹಳ್ಳೂರ, ಮೌನೇಶ ಕೋಳೂರ, ಶ್ರೀಶೈಲ ಬಳಬಟ್ಟಿ, ಈರಣ್ಣ ಹಂದ್ರಾಳ, ಈರಣ್ಣ ಶಿರವಾಳ, ಶಿವು ನಂದರಗಿ, ರಾಘು ಜಾಯವಾಡಗಿ, ಈರಣ್ಣ ಕೋಡಿಹಾಳ,ಜೀವನ ನಂದರಗಿ, ಬಸವರಾಜ ಬಡಿಗೇರ(ಹಡಲಗೇರಿ) ಸೇರಿದಂತೆ ಹಲವರು ಇದ್ದರು.