ಅಮರ್ ಜವಾನ್ ಸ್ಮಾರಕ ಉದ್ಯಾನವನದಲ್ಲಿ ಕಾರ್ಗಿಲ್ ವಿಜಯೋತ್ಸವ

ದಾವಣಗೆರೆ.ಜು.೨೬; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ವತಿಯಿಂದ.  ನಗರದ ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ ಚಿಗಟೇರಿ   ಮಾರ್ಗದರ್ಶನದಂತೆ ಅಮರ್ ಜವಾನ್ ಸ್ಮಾರಕ  ಉದ್ಯಾನವನದಲ್ಲಿ 20 ರೋವರ್ಸ್ ಮತ್ತು 28 ರೇಂಜರ್ಸ್ ವಿದ್ಯಾರ್ಥಿಗಳೊಂದಿಗೆ “ಗಡಿಯೊಳಗಿನ ಪುಟ್ಟ ಕೈಗಳಿಂದ ಗಡಿ ಕಾಯುವ ಯೋಧರಿಗೆ ನಮ್ಮದೊಂದು ಸಲಾಂ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಕಾರ್ಗಿಲ್ ವಿಜಯೋತ್ಸವವನ್ನು  ದೇಶಭಕ್ತಿಯೊಂದಿಗೆ ಆಚರಿಸಲಾಯಿತು . ಅತಿಥಿಗಳಾಗಿ ಜಿಲ್ಲಾ ಖಜಾಂಚಿ ಬೂಸನೂರು ವಿಶ್ವನಾಥ್ ಕಾರ್ಗಿಲ್ ವಿಜಯೋತ್ಸವ ಕುರಿತು ಮಾತನಾಡಿದರು ಹಾಗೂ ಶ್ರೀಮತಿ ಮಧುಮಾಲತಿ ರೇಂಜರ್ ಲೀಡರ್ ಮತ್ತು ಗಣೇಶ್ ರೋವರ್ ಸ್ಕೌಟ್ ಲೀಡರ್ ಉಪಸ್ಥಿತರಿದ್ದರು.