ಅಮರ್ ಜವಾನ್ ಸ್ಮಾರಕ ಅನಾವರಣ

ಕಲಬುರಗಿ ಜು 27: ಇಲ್ಲಿನ ಗೋದುತಾಯಿ ನಗರದಲ್ಲಿ ಕಾರ್ಗಿಲ ಯುದ್ಧ ವಿಜಯೋತ್ಸವದ ಪ್ರಯುಕ್ತ ಅಮರ್ ಜವಾನ್ ಸ್ಮಾರಕವನ್ನು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ನಿರಗುಡಿ ಹವಾ ಮಲ್ಲಿನಾಥ ಮಹಾರಾಜರುÀ್ಮತ್ತು ಪೂಜ್ಯ ಲಿಂಗರಾಜಪ್ಪಾ ಅಪ್ಪಾ ಅವರು ಅನಾವರಣಗೊಳಿಸಿದರು.
ದೇಶದ ಜನತೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿರಬೇಕಾದರೆ ಯೋಧರು ನಿದ್ರೆಯಿಲ್ಲದೆ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಗಡಿಯಲ್ಲಿ ನಿಂತಿರುವುದರಿಂದ ನಾವು ನೀವು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ಯೋಧರಿಗೆ ಗೌರವ ಕೊಡಬೇಕು. ಮಠ ಕಟ್ಟುವುದಕ್ಕಿಂತ ದೇಶ ಕಟ್ಟುವುದು ಮುಖ್ಯ. ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹವಾ ಮಲ್ಲಿನಾಥ ಮಹಾರಾಜರು ನುಡಿದರು
ಶರಣಬಸವೇಶ್ವರ ಸಂಸ್ಥಾನದ ಪೂಜ್ಯಲಿಂಗರಾಜಪ್ಪ ಅಪ್ಪ ಅವರು ಮಾತನಾಡಿ, ಗಡಿಯಲ್ಲಿ ನಿಂತು ದೇಶ ಕಾಯುವ ವೇಳೆ ಮಡಿದ ಯೋಧರಿಗೆ, ಯುದ್ಧದಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸಬೇಕು ಎಂಬ ದಶಕಗಳ ಕನಸು ಈಡೇರಿದೆ. ಸರ್ಕಾರವೊಂದು ಮಾಡಬೇಕಾದ ಕಾರ್ಯವನ್ನ ಗೋದುತಾಯಿ ಕಾಲೋನಿಯ ದೇಶಪ್ರೇಮಿಗಳು ಮಾಡಿದ್ದಾರೆ.
ಶಿಕ್ಷಕರು, ಸೈನಿಕರು, ಕೃಷಿಕರು ದೇಶದ ಬಹುಮುಖ್ಯ ಅಂಗವಾಗಿದ್ದಾರೆ. . ವಿಶೇಷವಾಗಿ ಜನಪ್ರತಿನಿಧಿಗಳು ಕನಿಷ್ಠ ತಿಂಗಳಾದರೂ ಸೈನ್ಯದ ತರಬೇತಿಯನ್ನು ಪಡೆದು ಬರಬೇಕು.ಆಗ ಮಾತ್ರ ದೇಶದ ಅದರ ರಕ್ಷಣೆಯ ಮಹತ್ವದ ಅರಿವಾಗುತ್ತದೆ ಎಂದು ಹೇಳಿದರು.
ನಿವೃತ್ತ ಸೈನಿಕ ಮಲ್ಲಿಕಾರ್ಜುನ ಮಡಿವಾಳ, ನೇತಾಜಿ ಸುಭಾಷಚಂದ್ರ ಸೈನಿಕರ ಸಂಘದ ಅಧ್ಯಕ್ಷ ಕ್ಯಾ.ಶರಣಪ್ಪ ಭೋಗಶೆಟ್ಟಿ, ನಿವೃತ್ತ ಯೋಧ ಶಿವಶರಣಪ್ಪ ತಾವರಖೇಡ ಅವರು ಮಾತನಾಡಿದರು. ದೀಪಾಲಿ ಲಿಂಗರಾಜಪ್ಪ ಅಪ್ಪಾ ಯುದ್ದ ಸ್ಮಾರಕಕ್ಕೆ ಪುಷ್ಫ ನಮನ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ, ಜೈ ಭಾರತ ಮಾತ ಸೇವಾ ಸಮಿತಿಯ ವಕ್ತಾರ ವೈಜನಾಥ ಜಳಕಿ, ತಾತ ಗೌಡ ಪಾಟೀಲ್ ಕೂಡಿ,ಮಹಾದೇವಿ ಹರವಾಳ, ಮಾಲಾ ಕಣ್ಣಿ , ಡಾ ಎಸ್‍ಎಸ್ ಗುಬ್ಬಿ, ಪ್ರಹ್ಲಾದ ಜೋಶಿ, ಮಲ್ಲಿಕಾರ್ಜುನ ಸಾರವಾಡ, ಪೀರಪ್ಪಯಾತನೂರ ,ಸಂದೇಶ ಪವಾರ,ಹಲವಾರು ಮಾಜಿಯೋಧರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.