ಅಮರೇಶ್ವರ ನಾಯಕರಿಗೆ ಮತ್ತೆ ಮಣೆ

(ಸಂಜೆವಾಣಿ ವಾರ್ತೆ)
ರಾಯಚೂರು, ಮಾ.೨೫- ೨೦೧೯ರ ಲೋಕಸಭಾ ಕಲಾಪ ಅವಧಿಯಲ್ಲಿ ರಾಯಚೂರು ಕ್ಷೇತ್ರದ ಅಭಿವೃದ್ಧಿಪರ ವಿಷಯಗಳಲ್ಲಿ ಪಾರ್ಲಿಮೆಂಟ್‌ನಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದವರಲ್ಲಿ ಭಾರತದಲ್ಲಿಯೇ ೯ನೆಯ ಸಂಸದರಾಗಿದ್ದು ಹಾಗೂ ರಾಜ್ಯದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ್ತೊಮ್ಮೆ ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಭಾರೀ ವಿವಾದ ಮದ್ಯೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ರೈಲ್ವೆ ಸಲಹಾ ಸಮತಿ ಸದಸ್ಯ ಹಾಗೂ ಸಮಾಜ ಸೇವಕ ಡಾ. ಬಾಬುರಾವ್ ತಿಳಿಸಿದ್ದಾರೆ.
ರಾಜ ಅಮರೇಶ ನಾಯಕ ಅಧಿಕಾರ ಅವಧಿಯಲ್ಲಿ ಕಲ್ಬುರ್ಗಿ ಯಾದಗಿರಿ, ರಾಯಚೂರು ಮತ್ತು ಮಂತ್ರಾಲಯ ಮೂಲಕ ಬೆಂಗಳೂರು ವರೆಗೂ ರೈಲ್ ಸಂಚಾರದ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹುಬ್ಬಳ್ಳಿ – ಬೆಳಗಾಂ ಮತ್ತು ಹೈದ್ರಾಬಾದ್ ವರೆಗೂ ರೈಲ್ ಸಂಪರ್ಕ ವ್ಯವಸ್ಥೆ ಮಾಡಿದ್ದಾರೆ. ಬಹುದಶಕಗಳ ಬೇಡಿಕೆ ವಂದೇ ಭಾರತ್ ರೈಲ್ ಸಂಚಾರದಲ್ಲಿ ಸಂಸದ ಪಾತ್ರ ಅತ್ಯಂತ ಪ್ರಮುಖ. ರಾಯಚೂರು ಮತ್ತು ಯಾದಗಿರಿ ರೈಲ್ ನಿಲ್ದಾಣದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರೈಲ್ ನಿಲ್ದಾಣ ಅಭಿವೃದ್ಧಿಯಲ್ಲಿ ರಾಜ ಅಮರೇಶ ನಾಯಕ ಅವರ ಕೊಡುಗೆ ಅಪಾರ. ಅದಲ್ಲದೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ನಿರ್ಮಿಸಿ ಅಂತರಾಷ್ಟ್ರಿಯ ಪ್ರದೇಶಗಳಿಗೆ ತೆರಳು ಅನುಕೂಲ ಮಾಡಿಕೊಟ್ಟಿದ್ದು,
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಪರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಹೈಕಮಾಂಡ್ ಮತ್ತೊಮ್ಮೆ ಟಿಕೆಟ್ ನೀಡಿದೆ.
ಭಾರತೀಯ ಜನತಾ ಪಕ್ಷದ ರಾಷ್ಟ್ರ ಅಧ್ಯಕ್ಷ ನಡ್ದಾಜೀ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭಾರತೀಯ ಜನತಾ ಪಕ್ಷ ಕರ್ನಾಟಕ, ಶ್ರೀ ಸಂತೋಷ್ ಬಿ ಎಲ್, ಬಿ ಎಸ್ ಯಡಿಯೂರಪ್ಪ,ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ , ನಳಿನ್ ಕುಮಾರ್ ಕಟೀಲ್ ಎಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ರಾಯಚೂರು ಲೋಕಸಬೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ ಎಂದು ಹಾಲಿ ಸಂಸದ ರಾಜ ಅಮರೇಶ ನಾಯಕ ತಿಳಿಸಿದ್ದಾರೆ.