ಅಮರೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು

ಔರಾದ : ಆ.21:ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಯುಕ್ತ ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ, ನಾಗರ ಪಂಚಮಿ ಹಾಗೂ ಶ್ರಾವಣ ಮಾಸದ ಮೊದಲ್ ಸೋಮವಾರ ನಿಮಿತ್ತ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಭಕ್ತರು ವಿಶೇಷ ಪೂಜೆ ಸಲ್ಲಿಸಿ ನಾಗ ದೇವತೆಗೆ ಹಾಲು ನೈವೇದ್ಯ ಅರ್ಪಿಸಿದರು.