ಅಮರೇಶ್ವರ ದೇಗುಲ ಅಭಿವೃದ್ಧಿ ನಿರ್ಲಕ್ಷ್ಯ ಖಂಡನೆ

ಔರಾದ : ಜು.29:ಪಟ್ಟಣದ ಆರಾಧ್ಯ ದೈವ ಶ್ರೀ ಉದ್ಭವಲಿಂಗ ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ತಾಲೂಕಾಡಳಿತ ನಿರ್ಲಕ್ಷ ವಹಿಸುತ್ತಿರುವುದನ್ನು ಖಂಡಿಸಿ ಅಮರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹೋರಾಟ ಸಮಿತಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅಮರೇಶ್ವರ ಮತ್ತು ಆಂಜನೇಯ ದೇವಸ್ಥಾನ ಕಮಿಟಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ ಅವರು ಮಾತನಾಡಿ ಅಮರೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ತಾಲೂಕಾಡಳಿತ ನಿರ್ಲಕ್ಷ ವಹಿಸುತ್ತಿರುವುದು ಖಂಡನೀಯ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣಾ ರಾಜ್ಯಗಳಿಂದಲೂ ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರೇಶ್ವರ ದೇವರ ದರ್ಶನ ಪಡೆಯುತ್ತಾರೆ. ಈ ದೇವಸ್ಥಾನದ ಅಭಿವೃದ್ಧಿಯಿಂದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗಲಿದೆ ಈ ಹಿಂದೆಯೂ ಹಲವು ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನದ ತಾಲೂಕು ಆಡಳಿತ ಇದು ಹೀಗೆ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಾವು ಸರ್ಕಾರದ ಯಾವುದೇ ಅನುದಾನ ಕೇಳುತ್ತಿಲ್ಲ ದೇವಸ್ಥಾನ ಸಮಿತಿಯಲ್ಲಿ 1.35 ಕೋಟಿ ರೂಪಾಯಿ ಇದೆ, ಭಕ್ತರು ನೀಡಿದ ಕಾಣಿಕೆ ಹಣದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಎಂದು ಕೇಳುತ್ತಿದ್ದೇವೆ. ಮೇ ತಿಂಗಳಿನಲ್ಲಿ ಸಚಿವ ಪ್ರಭು ಚವಾಣ್ ಅವರು ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಗುದ್ದಲಿ ಪೂಜೆ ಮಾಡಿ ಹೋಗಿದ್ದಾರೆ ಅದರೆ ಇಲ್ಲಿವರೆಗೆ ಯಾವುದೇ ರೀತಿ ಕಾಮಗಾರಿ ಪ್ರಾರಂಭಿಸಿಲ್ಲ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ದೇವಸ್ಥಾನ ಗೂಡೆಗಳು ಶೀತಲಗೊಂಡು ಬೀಳುವ ಸ್ಥಿತಿಯಲ್ಲಿದೆ, ತಾಲೂಕು ಆಡಳಿತ ದೇವಸ್ಥಾನ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದೆ ಎರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡದೆ ಇದ್ದಲ್ಲಿ ಔರಾದ ಬಂದ್ ಕರೆಕೊಟ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಚ್ಯಾರೆ, ಬಸವರಾಜ ಶೆಟಕಾರ, ವೀರೆಶ ಅಲ್ಮಾಜೆ, ರಾಜಕುಮಾರ ಏಡವೆ, ಪ್ರಶಾಂತ ಫೂಲಾರಿ, ಸಂತೋಷ ಶೆಟಕಾರ, ರಾಜಕುಮಾರ ಮುಧಾಳೆ, ಅನಿಲ ಬೆಲೂರೆ, ಬಾಲಾಜಿ ದಾಮಾ, ಅಮಿತ ಶಿವಪೂಜೆ, ಸಿದ್ದು ಚ್ಯಾರೆ, ಅನಿಲ ದೇವಕತೆ, ಶಿವು ನಿರ್ಮಳೆ, ಸುದೀಪ ಸಿಂಧೆ, ರಾಜಕುಮಾರ ಶೆಟಕಾರ, ವಿವೇಕ ನಿರ್ಮಳೆ, ರಜನಿ ದಾಮಾ, ಆದಿತ್ಯ ಕೇದಾರೆ, ವಿಶಾಲ ಕೋಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.