ಅಮರೇಶ್ವರ ಜಾತ್ರಾ ಸಂಚಿಕೆ ಬಿಡುಗಡೆ

ಔರಾದ : ಮಾ.9:ಮಹಾ ಶಿವರಾತ್ರಿ ಪ್ರಯುಕ್ತ ನಡೆಯುವ ಐತಿಹಾಸಿಕ ಔರಾದ ಸುಕ್ಷೇತ್ರ ಉದ್ಭವಲಿಂಗ ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವದ ಸಂಜೆವಾಣಿ ಪತ್ರಿಕೆ ಹೊರ ತಂದ ವಿಶೇಷ ಸಂಚಿಕೆಯನ್ನು ಇಂದು ಶಾಸಕ ಪ್ರಭು ಚವ್ಹಾಣ ಅವರು ಬಿಡುಗಡೆಗೊಳಿಸಿದರು.

ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆವಾಣಿ ಹೊರತಂದ ವಿಶೇಷ ಸಂಚಿಕೆಯಲ್ಲಿ ಅಮರೇಶ್ವರ ಇತಿಹಾಸ ಚನ್ನಾಗಿ ಮೂಡಿ ಬಂದಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಸೂರ್ಯಕಾಂತ ಅಲ್ಮಾಜೆ, ಶಿವಾಜಿರಾವ ಪಾಟೀಲ ಮುಂಗನಾಳ, ಅಮೃತರಾವ ಪಾರಾ ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ರಮೇಶ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.