ಅಮರೇಶ್ವರ ಕನ್ಯಾ ಪ್ರೌಢ ಶಾಲೆಯಲ್ಲಿ ಭಾಷಣ ಸ್ಪರ್ಧೆ

(ಸಂಜೆವಾಣಿ ವಾರ್ತೆ)
ಔರಾದ: ನ.19:ನೆಹರು ಯುವ ಕೇಂದ್ರ ಬೀದರ್, ಹಾಗೂ ಸುಭಾಷಚಂದ್ರ ಭೋಸ್ ಯುವಕ ಸಂಘ ಔರಾದ(ಬಾ) ವತಿಯಿಂದ ಇಂದು ಔರಾದನ ಅಮರೇಶ್ವರ ಕನ್ಯಾ ಪ್ರೌಢ ಶಾಲೆಯಲ್ಲಿ “ರಾಷ್ಟ್ರ ಪ್ರೇಮ ಮತ್ತು ದೇಶ ಭಕ್ತಿ” ಈ ವಿಷಯದ ಮೇಲೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಅನೇಕ ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿದ್ದರು.ಅದರಲ್ಲಿ ಶ್ರೀ ಬಸವೇಶ್ವರ ಡಿ.ಎಡ್ ಕಾಲೇಜು ಔರಾದ(ಬಾ)ನ ಪ್ರಥಮ ವರ್ಷದ ಶಿಕ್ಷಕ ವಿದ್ಯಾರ್ಥಿನಿಯಾದ ಕುಮಾರಿ ಅಶ್ವಿನಿ ತಂ.ಪಂಡಿತ್ ತುರೆಯವರು ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಹೇಳಲು ಹರ್ಷಿಸುತ್ತೇವೆ. ಅಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಕೊಟ್ಟು ಗೌರವಿಸಿದ್ದಾರೆ.ಇದರ ಹಿಂದೆ ಭಾಲ್ಕಿ ಶ್ರೀಮಠದ ಹಿರಿಯ ಪರಮ ಪೂಜ್ಯರು ಹಾಗೂ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು,ಹಾಗೂ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಗುರುಬಸವ ಪಟ್ಟದೇವರ ಆಶೀರ್ವಾದ ಹಾಗೂ ಅಡಳಿತಾಧಿಕಾರಿಗಳಾದ ಶ್ರೀ ಮೋಹನರೆಡ್ಡಿ ಸರ್ ಅವರ ಪ್ರೇರಣೆ,ನಮ್ಮ ಕಾಲೇಜಿನ ಸಿಬ್ಬಂದಿ ವರ್ಗದವರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿನಿಯ ಪರಿಶ್ರಮ ಅಡಗಿದೆ,ಎಂದು ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ನೌಬಾದೆಯವರು ತಿಳಿಸಿದ್ದಾರೆ.