ಅಮರೇಶ್ವರಿಗೆ ಭಕ್ತರಿಂದ ಹೊದಿಕೆ ಅರ್ಪಣೆ

ಔರಾದ್ :ಮಾ.8: ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಶ್ರಿ ಅಮರೇಶ್ವರ ಜಾತ್ರಾ ನಿಮಿತ್ತ ಶ್ರಿ ಅಮರೇಶ್ವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಟ್ಟಣದ ನಿವಾಸಿಗಳು ದೇವರಿಗೆ ವಿಶೇಷ ಪೂಜೆ ಹಾಗೂ ಹೊದಿಕೆ ಅರ್ಪಿಸಿ ಭಕ್ತಿ ಭಾವ ಮೆರೆದರು.

ಸತತ ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪಟ್ಟಣದ ವಿವಿಧ ಬಡಾವಣೆಗಳ ಮೂಲಕ ಉತ್ಸವ ಮೂರ್ತಿಯ ಮೆರವಣಿಗೆ ಸಾಗುತ್ತದೆ. ಪಟ್ಟಣದ ಮುಖ್ಯದ್ವಾರ, ಚಿದ್ರೆ ಗಲ್ಲಿ, ಚ್ಯಾರೆ ಗಲ್ಲಿ, ದೇಶಮುಖ ಗಲ್ಲಿ, ಖೂಬಾ ಗಲ್ಲಿ, ಶೆಟಕಾರ್ ಗಲ್ಲಿ ಮೂಲಕ ದೇವಸ್ಥಾನ ತಲುಪುವ ದೇವರಿಗೆ ಓಣಿಯ ನಿವಾಸಿಗಳು ವಿಶೇಷ ಪೂಜೆ, ಕಾಯಿ ಕರ್ಪೂರ, ಹೊದಿಕೆ ಅರ್ಪಿಸಿ ತಮ್ಮ ಹರಕೆ ತೀರಿಸುವರು.