ಅಮರೇಶ್ವರನ ಸನ್ನಿಧಿಯಲ್ಲಿ ಡಾ. ಹೆಬ್ಬಾಳೆಗೆ ಅಭೂತಪೂರ್ವ ಬೆಂಬಲ

ಔರಾದ್:ಎ.21: ತಾಲ್ಲೂಕಿನ ವಿವಿಧೆಡೆ ತೆರಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ರಾಜಕುಮಾರ ಹೆಬ್ಬಾಳೆ ಅವರಿಗೆ ಮತ ನೀಡುವಂತೆ ಅವರ ಬೆಂಬಲಿಗರು ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರ ಬಸವರಾಜ ಶೇಟಕಾರ ಮಾತನಾಡಿ ಈ ಬಾರಿ ಹೆಬ್ಬಾಳೆ ಪರ ಮತದಾರರು ಒಲವು ತೋರುತಿದ್ದು ಈ ಬಾರಿ ಹೆಬ್ಬಾಳೆ ಯವರ ಗೆಲುವು ಖಚಿತ ಎಂದು ಹೇಳಿದರು.
ಕಾಯಕಯೋಗಿ ಟ್ರಸ್ಟ್ ಕಾರ್ಯದರ್ಶಿ ಅನೀಲ ಜಿರೋಬೆ ಮಾತನಾಡಿ ಡಾ,ರಾಜಕುಮಾರ ಹೆಬ್ಬಾಳೆ ಸರ್ವರ ಲೇಸನ್ನು ಬಯಸುವ ಹೃದಯವಂತ, ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳ ಆದರ್ಶ ವ್ಯಕ್ತಿಯಾಗಿದ್ದು ಅವರಿಗೆ ಕಸಾಪ ಅಜೀವ ಸದಸ್ಯರು ಹೆಚ್ಚು ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗನಾಥ ಪಾಟೀಲ್, ಪ್ರದೀಪ್ ಸೇರಿದಂತೆ ಹಲವರು ಇದ್ದರು.