ಅಮರೇಶ್ವರನಿಗೆ ಪೂಜೆ ಸಲ್ಲಿಸಿದ ಶಾಸಕ ಚವ್ಹಾಣ

ಔರಾದ್ : ಮಾ.9:ಮಹಾ ಶಿವರಾತ್ರಿ ಅಂಗವಾಗಿ ನಡೆಯುವ ಐತಿಹಾಸಿಕ ಹಿನ್ನೆಲೆಯ ಉದ್ಭವಲಿಂಗ ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಬೆಳಿಗ್ಗೆ ನಡೆದ ಅಗ್ನಿಪೂಜೆಯಲ್ಲಿ ಶಾಸಕ ಪ್ರಭು ಚವ್ಹಾಣ ಪಾಲ್ಗೊಂಡಿದ್ದರು.

ಪಟ್ಟಣದ ಪಶು ಆಸ್ಪತ್ರೆ ಎದುರಿಗೆ ಇರುವ ಅಗ್ನಿಕುಂಡದಲ್ಲಿ ರಾತ್ರಿಯಿಂದಲೆ ಧಾರ್ಮಿಕ ಸಂಪ್ರದಾಯದ ಪೂಜಾ ಕಾರ್ಯಕ್ರಮ ಜರುಗಿದವು. ಇಂದು ಬೆಳಿಗ್ಗೆ ಅಮರೇಶ್ವರ ದೇವರು ಅಗ್ನಿ ತುಳಿದ ನಂತರ ಶಾಸಕ ಪ್ರಭು ಚವ್ಹಾಣ ಅವರು ಅಗ್ನಿ ತುಳಿದು ಉತ್ಸವ ಮೂರ್ತಿಗೆ ಹಾಗೂ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಕಿರಣ ಉಪ್ಪೆ, ಪ್ರತಿಕ ಚವ್ಹಾಣ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಶಿವರಾಜ ಅಲ್ಮಾಜೆ, ಶ್ರೀಕಾಂತ ಅಲ್ಮಾಜೆ, ಕೇರಬಾ ಪವಾರ, ಶಿವಾನಂದ ಕನಕೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.