ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆ

ಕಲಬುರಗಿ ಜ 2: ನಗರದ ಭಾರತಿಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಅಮರ ಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ದಲ್ಲಿ ಬಿಜೆಪಿ ನಗರಜಿಲ್ಲಾ ಅಧ್ಯಕ್ಷ ಸಿದ್ಧಾಜಿ ಪಾಟೀಲ, ಬಿಜೆಪಿ ಓಬಿಸಿ ಮೋರ್ಚಾ ನಗರ ಜಿಲ್ಲಾ ಅಧ್ಯಕ್ಷ ಅರವಿಂದ್ ಎಮ್ ಪೆÇೀದ್ದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ವರ್ಷದಿಂದ ರಾಜ್ಯ ಸರ್ಕಾರ ದಿಂದಲೇ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಮಾಡುವುದಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ಅಭಿನಂದನೆ ತಿಳಿಸಿದರು.
ಅಮರ ಶಿಲ್ಪಿ ಜಕಣಾಚಾರ್ಯ ಹೆಸರು ಜಗತ್ತು ಇರುವವರೆವಿಗೂ ಅಮರ.ಅಮರ ಶಿಲ್ಪಿ ಜಕಣಾಚಾರಿ ಯವರ ಜನ್ಮಸ್ಥಳ ತುಮಕೂರು ಜಿಲ್ಲೆ ಹತ್ತಿರ ಇರುವ ಕ್ರೀಡಾಪುರ ವೆಂಬ ಹೆಸರಿತ್ತು ನಂತರ ಕೈದಾಳ ವಾಗಿದೆ.ಅಲ್ಲಿ ನಾಗಲಿಂಗ ಸ್ಥಪತಿ ಎಂಬ ವಿಶ್ವಕರ್ಮ ವಂಶೀಯ ಅವರ ತಂದೆಗೆ ಏಕಮಾತ್ರ ಪುತ್ರ ರೇ ಜಕಣಾಚಾರ್ಯ.ಜಕಣಾಚಾರ್ಯರ ಮಗ ಡಕಣಾಚಾರಿ , ಬೇಲೂರು ಚೆನ್ನಿಗರಾಯ ಮೂರ್ತಿಯಲ್ಲಿ ದೋಷವನ್ನು ಕಂಡು ಅದನ್ನು ತೋರಿಸಿದಾಗ ಜಕಣಾಚಾರ್ಯ ಇನ್ನೂ ಮುಂದೆ ತನ್ನ ಕೈಗಳಿಂದ ಶಿಲ್ಪ ದ ಕೆಲಸವನ್ನೇ ಮಾಡುವುದಿಲ್ಲ. ಇನ್ನು ತನ್ನ ಕೈಯನ್ನು ಕತ್ತರಿಸಿಕೊಂಡಂತೆ ಎಂದು ಪ್ರತಿಜ್ಞೆ ಮಾಡುತ್ತಾನೆ.ಅಲ್ಲಿಂದ ತನ್ನ ಹುಟ್ಟೂರಿಗೆ ಬಂದು ಸುಮ್ಮನಿರಲಾರದೆ.ಮಾಡಿದ ತಪ್ಪಿಗೆ ಪಶ್ಚಾತ್ತಾಪಕ್ಕಾಗಿ ತನ್ನ ಮೊಂಡು ಕೈಗಳಿಂದ ಸುತ್ತಿಗೆಯನ್ನು ಕಟ್ಟಿಕೊಂಡು ಒಂದು ವಿಶೇಷವಾದ ಚೆನ್ನಕೇಶವನ ವಿಗ್ರಹ ಒಂದನ್ನು ಕೆತ್ತುತ್ತಾನೆ. ಆ ವಿಗ್ರಹ ವನ್ನು ಇಂದಿಗೂ ನೋಡಬಹುದಾಗಿದೆ. ಕೈದಾಳದಲ್ಲಿ ಆದ್ದರಿಂದಲೇ ಈ ಊರಿಗೆ ಕೈದಾಳ ಎಂಬ ಹೆಸರಾಯಿತು ಎಂಬ ಐತಿಹ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾದೇವ ಬೆಳಮಗಿ, ಬಸವರಾಜ ಇಂಗಿನ, ಅಂಬು ಡಿಗ್ಗಿ, ಶರಣು ಸಜ್ಜನ್, ಅರುಣ್ ಕುಲಕರ್ಣಿ, ವಿಠ್ಠಲರಾವ್ ಸುತಾರ, ವಿಜಯಕುಮಾರ್ ಹುಲಿ , ಶ್ರೀ ಕಾಂತ ಆಲೂರ, ರಮೇಶ್ ಗುತ್ತೇದಾರ್, ವಿಜಯ ಕೊಂಡಂಪಳ್ಳಿ , ಬಿರಣ್ಣಾ ಪೂಜಾರಿ, ಶ್ರೀ ಕಾಳಪ್ಪ ಪಂಚಾಳ, ನಾಗರಾಜ ಪತ್ತಾರ, ಇಂದಿರಾ ಶಕ್ತಿ, ಸುಂದರ ಕುಲಕರ್ಣಿ, ಕವಿತಾ ಚವ್ಹಾಣ, ಜ್ಯೋತಿ ಶರ್ಮಾ, ಸುಜ್ಞಾನಿ ಪೆÇೀದ್ದಾರ ,ಕೆಹೇರಸಿಂಗ,ಅಜಯ್ ಕುಲಕರ್ಣಿ, ಜಾವೇದ್ ಪಟೇಲ್, ಅಬ್ದುಲ್ ಸತ್ತಾರ, ಕ್ರಷ್ಣಾ ಮಾಡ್ಯಳ , ಪ್ರಶಾಂತ್ ನಿಂಬಾಳ್ಕರ್, ಜಗದೀಶ್ ವರ್ಮಾ, ಅಭಯ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು