
ಸಂಡೂರು:ಜ:4: ಅಮರಶಿಲ್ಪಿ ಜಕಣಾಚಾರಿಗಳು ಐತಿಹಾಸಿಕ ಕಲೆಗಾರರು, ಅವರ ಕಲೆಯನ್ನು ಮೀರಿಸುವಂತಹ ಮತ್ತೋಬ್ಬ ಕಲೆಗಾರ ಇನ್ನೂ ಸಹ ನಾವು ಕಾಣೇವು, ಅಂತಹ ಕಲಾವಿದನ ಸಂಸ್ಮರಣಾ ದಿನಾಚರಣೆಯನ್ನು ಸಮಾಜ ಬಾಂಧವರು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಧ್ಯಕ್ಷ ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಪುರೋಹಿತ ವೀರೇಶ ಶರ್ಮ ಅವರ ನೇತೃತ್ವದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ಶಿಲ್ಪಿಯೂ ಸಹ ತನ್ನದೇ ಅದ ಕೌಶಲ್ಯತೆಯನ್ನು ಹೊಂದಿರುತ್ತಾನೆ, ಅದರಂತೆ ಜಕಣಾಚಾರಿಗಳು ಎಲ್ಲಾ ಶಿಲ್ಪಿಗಳಿಗೂ ಸಹ ಗುರುವಾದಂತಹವರು, ಅವರ ನಿಷ್ಠೆ, ಭಕ್ತಿ, ಶ್ರದ್ದೇಯನ್ನು ಪ್ರತಿಯೊಬ್ಬರೂ ಅನುಸರಿಸಿದಾಗ ಉತ್ತಮ ಕಲಾಕಾರರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಅದ್ದರಿಂದ ನಾವು ಉತ್ತಮ ಕಲೆಗಾರರಾಗಿ ಶಿಕ್ಷಣ ಪಡೆದು ಅಧುನಿಕ ಸೌಲಭ್ಯಗಳನ್ನು ಸರ್ಕಾರದಿಂದ ಪಡೆದುಕೊಳ್ಳಲು ನಾವು ಮುಂದಾಗಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಷಣ್ಮುಖಪ್ಪ ಪತ್ತಾರ್, ರವೀಂದ್ರ ಅಚಾರ್, ರಾಘವೇಂದ್ರಾಚಾರ್, ಕಾರ್ತಿಕೇಶ್ ಅಚಾರ್, ಕೆ.ವಿವೇಕಾನಂದಾಚಾರ್, ರಾಕೇಶ್ ಪತ್ತಾರೆ, ರಾಜೇಶ್ ಪತ್ತಾರೆ, ಗಿರೀಶ್ ಪತ್ತಾರ್, ರಾಘವೇಂದ್ರ, ಪರೀಕ್ಷಿತ್, ಎ.ಪಂಪಾಪತಿ, ರಾಜಶೇಖರ್, ಪ್ರವೀಣ್, ಎ.ಕುಮಾರಸ್ವಾಮಿ, ಎ.ಬಿ. ಶಿವಕುಮಾರ್, ವೀಣಾ, ವಿವೇಕಾನಂದ, ಸುಮನ್ ಪತ್ತಾರ್ ಇತರ ಗಣ್ಯರು ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮ ನೆರವೇರಿಸಿದರು.