ಅಮರಶಿಲ್ಪಿ ಜಕಣಾಚಾರಿಯ ಜಯಂತಿ ಆಚರಣೆ

ಸಿರುಗುಪ್ಪ, ಜ.02: ನಗರದ ತಹಶಿಲ್ದಾರ್ ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿಯ ಅಂಗವಾಗಿ ಜಕಣಾಚಾರಿ ಭಾವಚಿತ್ರಕ್ಕೆ ತಹಶೀಲ್ದಾರ್ ಬಿ.ಎಸ್.ಕೂಡಲಗಿ ಅವರು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಎ.ಕಾಳನಗೌಡ, ತಾಲೂಕು ವಿಶ್ವಕರ್ಮ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಮೌನೇಶ ಆಚಾರಿ, ಮುಖಂಡರಾದ ಗಂಗಾಧರ ಆಚಾರಿ, ಮನೋಹರ, ಬಸವರಾಜ, ಬಿ.ಮೌನೇಶ ಆಚಾರಿ, ಮರೆಗೌಡ, ಮಲ್ಲಮ್ಮ, ಇದ್ದರು.