ಅಮರನಾಥ ಯಾತ್ರಿಕರ ಸುರಕ್ಷತೆಗೆ ಕ್ರಮ

ವಿಜಯಪುರ, ಜು.11-ವಿಜಯಪುರ ಜಿಲ್ಲೆಯ ಯಾರಾದರು ಅಮರನಾಥ ಗುಹಾ ದೇವಾಲಯ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರೆ ಅವರ ಸಂಬಂಧಿಕರು ಕರ್ನಾಟಕ ರಾಜ್ಯದ ತುರ್ತು ಸಹಾಯವಾಣಿ ಸಂಖ್ಯೆ 080-1070, 22340676 ಅಥವಾ ಇನ್ನೀತರ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎನ್‍ಡಿಆರ್‍ಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್‍ಪಿಎಎಫ್, ಬಿಎಎಸ್‍ಎಫ್, ಎಸ್ಡಿಆರ್‍ಎಫ್ ಸೇರಿದಂತೆ ವಿವಿಧ ಪಡೆಗಳಿಂದ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿ ಸಿಕ್ಕಿಬಿದ್ದವರಿಗೆ ಸಹಾಯ ಒದಗಿಸಲು ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ.
ಅಮರನಾಥ ಪ್ರದೇಶದ ಬಳಿ ಕರ್ನಾಟಕದ ಯಾವುದೇ ಸಿಕ್ಕಿಬಿದ್ದ ವ್ಯಕ್ತಿ ಸಹಾಯಕ್ಕಾಗಿ ಕರ್ನಾಟಕ ರಾಜ್ಯದ ತುರ್ತು ಸಹಾಯವಾಣಿ ಸಂಖ್ಯೆ 080-1070, 22340676 ಅಥವಾ ಎನ್‍ಡಿಆರ್‍ಎಫ್ ಸಹಾಯವಾಣಿ ಸಂಖ್ಯೆ 011-23438252 ಅಥವಾ 011-23438253, ಕಾಶ್ಮೀರ ವಿಭಾಗೀಯ ಸಹಾಯವಾಣಿ ಸಂಖ್ಯೆ: 0194-2469240, ದೇಗುಲ ಮಂಡಳಿಯ ಸಹಾಯವಾಣಿ 0194-2313149 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಅನಂತನಾಗ್ ಸಂಖ್ಯೆ 9596777669, 9419051940, 01932225870 ಅಥವಾ ಪೆÇಲೀಸ್ ನಿಯಂತ್ರಣ ಕೊಠಡಿ ಪಹಲಗಮ್ 9596779039, 9797796217,01936243233 ಅಥವಾ ರೆಸಿಡೆಂಟ್ ಕಮಷನರ್ ಆಫೀಸ್ 011-24103701, 24103702 ಅಥವಾ ಕರ್ನಾಟಕ ಭವನ ನವದೆಹಲಿ ಸಂಖ್ಯೆ 011-26115515, 011-26117666 ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರಾದ ಮನೋಜ ರಾಜನ್ ಮಾಹಿತಿ ನೀಡಿದ್ದಾರೆ. ಈ ಸಹಾಯವಾಣಿ ಸಂಖ್ಯೆ ಬಳಸಿ ಮಾಹಿತಿ ನೀಡಿದಲ್ಲಿ ಅವರ ಸುರಕ್ಷತೆ ಮತ್ತು ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.