ಅಭ್ಯುದಯ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಜೀವನಾಡಿ:ಡಾ ಸದಾನಂದ ಪೆರ್ಲ

ಮಂಗಳೂರು:ಜು.5: ಪ್ರಜಾತಂತ್ರದ ಹಕ್ಕುಗಳನ್ನು ಜನರಿಗೆ ತಲುಪಿಸಿ ಕರ್ತವ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಅಭ್ಯುದಯ ಪತ್ರಿಕೋದ್ಯಮ ಜೀವನಾಡಿಯಾಗಿದೆ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ತಿಳಿಸಿದರು.
ಮಂಗಳೂರಿನಲ್ಲಿ ಜುಲೈ ಒಂದರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ “ಅಭ್ಯುದಯ ಪತ್ರಿಕೋದ್ಯಮ” ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಅವರು ಕಾಯಾರ್ಂಗ, ಶಾಸಕಾಂಗ ನ್ಯಾಯಾಂಗ ಇವುಗಳ ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುವ ನಾಲ್ಕನೇ ಅಂಗ ಪತ್ರಿಕೆಯಾಗಿದ್ದು ಸತ್ಯ ಮತ್ತು ಕರಾರು ವಾಕ್ ಮಾಹಿತಿ ಮೂಲಕ ವಿಶ್ವಾಸಾರ್ಹತೆಯನ್ನು ಉಳಿಸಿ ಸತ್ಯನಿಷ್ಠವಾಗಿ ಮತ್ತು ಪಾರದರ್ಶಕವಾಗಿ ಪತ್ರಿಕೋದ್ಯಮದ ಕೆಲಸ ಮಾಡಲು ಅಭ್ಯುದಯ ಪತ್ರಿಕೋದ್ಯಮ ಅತ್ಯಂತ ಸೂಕ್ತವಾಗಿದೆ. ಆಗ ಸಮುದಾಯದ ಬದುಕು ಸಬಲೀಕರಣ ಗೊಳ್ಳುತ್ತದೆ ಎಂದು ತಿಳಿಸಿದರು. ಜಗತ್ತಿನ ಅತಿ ದೊಡ್ಡ ಮಾಹಿತಿದಾರರಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಯ ನಿರ್ವಹಿಸಿದವರು ಮಹಾತ್ಮ ಗಾಂಧೀಜಿಯವರಾಗಿದ್ದು ತ್ರಿ ಭಾಷಾ ಪತ್ರಿಕೆಗಳನ್ನು ಆರಂಭಿಸಿದ ಅವರು ಮೂಲ ಪಾಠವಾಗಿ
ಅಭ್ಯು ದಯ ಪತ್ರಿಕೋದ್ಯಮವನ್ನು ನೆಚ್ಚಿಕೊಂಡಿದ್ದರು ಎಂದು ಹೇಳಿದರು. ಸಮಗ್ರ ಆರ್ಥಿಕ, ಸಾಮಾಜಿಕ ವ್ಯವಸ್ಥೆ, ಪುನರ್ ಸಂಘಟನೆ ಮತ್ತು ಪುನರ್ ನೆಲೆಗೊಳ್ಳಲು ಅಭ್ಯುದಯ ಸಂವಹನ ಅತ್ಯಂತ ಪೂರಕವಾಗಿದೆ. ಸಮಾಜ ಒಂದರ ತ್ವರಿತ ರೂಪಾಂತರಕ್ಕೆ ಅಂದರೆ ತಾರತಮ್ಯ ರಹಿತ ,ಸಮಾನತೆ ಮತ್ತು ಬದುಕಿನ ಸಾರ್ಥಕ್ಯಕ್ಕೆ ಅವಕಾಶ ಇರುವಂತ ಪರಿಸರ ಸೃಷ್ಟಿಗೆ ಬಳಸುವ ಕಲೆ, ಅಭ್ಯುದಯವಾಗಿದ್ದು ಭಾರತವು ಹಳ್ಳಿಗಳ ದೇಶವು ಅನಕ್ಷರಸ್ಥರನ್ನು ಹೊಂದಿರುವುದರಿಂದ ಅಭ್ಯುದಯ ಪತ್ರಿಕೋದ್ಯಮ ಸಶಕ್ತವಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದರು. ಅಭ್ಯುದಯ ಪತ್ರಿಕೋದ್ಯಮವು ಕೇವಲ ಓದುಗ, ಕೇಳುಗ ಮತ್ತು ನೋಡುಗನ ಕುತೂಹಲ ತಣಿಸುವ ಕ್ರಿಯೆಯಲ್ಲ. ಅದೊಂದು ರೀತಿಯಲ್ಲಿ ಬಾಳು ಬದುಕಿನ ಗತಿಯ ದಾಖಲೆಯಾಗಿದೆ ಎಂದು ತಿಳಿಸಿದರು. ಅಪರಾಧ, ರಾಜಕೀಯ, ಕ್ರೀಡೆ ಸಿನಿಮಾ ಲೈಂಗಿಕ ವಿಷಯಗಳಿಗೆ ಮಾತ್ರ ಒತ್ತುಕೊಡದೆ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪತ್ರಕರ್ತರು ಕೆಲಸ ಮಾಡಿದರೆ ನಾಡಿನ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯ . ರಾಜಕಾರಣಿಗಳನ್ನು ಜನರಿಗೆ ತೋರಿಸುವ ಕೆಲಸ ಮಾತ್ರ ಮಾಡದೆ ಜನಸಾಮಾನ್ಯರನ್ನು ರಾಜಕಾರಣಿಗಳಿಗೆ ತೋರಿಸುವ ಕೆಲಸ ಜರೂರಾಗಿ ಈಗ ಆಗಬೇಕಾಗಿದೆ. ಆ ನೆಲೆಯಲ್ಲಿ ಆತ್ಮ ಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಮಂಗಳೂರು ಪೆÇೀಲಿಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಅವರು ಮಾತನಾಡಿ ಮಾಧ್ಯಮಗಳು ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಿದರೆ ಸಮಸ್ಯೆಗಳು
ಉದ್ಭವಿಸುವುದಿಲ್ಲ ಕಾರ್ಯ ನಿರತ ಪತ್ರಕರ್ತರು ಕೊಡಮಾಡುವ “ಬ್ರಾಂಡ್ ಮಂಗಳೂರು” ಪ್ರಶಸ್ತಿ ನಿಜಕ್ಕೂ ಮೆಚ್ಚುವಂಥದ್ದು. ಕೋಮು ಸೂಕ್ಷ್ಮತೆಯ ಕುರಿತು ಜನಜಾಗೃತಿಯ ಸುದ್ದಿಗಳನ್ನು ಬಿತ್ತರಿಸಿದವರನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಹಲವು ವಿಚಾರಗಳಲ್ಲಿ ಬೆಳಕು ಚೆಲ್ಲುವಂಥದ್ದು ಎಂದು ಶ್ಲಾಘಿಸಿದರು. ಪತ್ರಕರ್ತರಾದ ಸುರೇಶ್ ಡಿ. ಪಳ್ಳಿ ಮತ್ತು ಭರತ್ ರಾಜ್ ಸನಿಲ್ ಅವರಿಗೆ ಈ ಸಂದರ್ಭದಲ್ಲಿ ಬ್ರಾಂಡ್ ಮಂಗಳೂರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕಬ್ ಅಧ್ಯಕ್ಷರಾದ ಪಿ .ಬಿ ಹರೀಶ್ ರೈ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಭಾಸ್ಕರ್ ರೈ ಕಟ್ಟಾ, ಇಬ್ರಾಹಿಂ ಅಡ್ಕಸ್ಥಳ, ರಾಮಕೃಷ್ಣ ಆರ್, ಪುಷ್ಪರಾಜ್ ಶೆಟ್ಟಿ ಮತ್ತಿತರ ಅನೇಕರು ಉಪಸ್ಥಿತರಿದ್ದರು. ಮೊಹಮ್ಮದ ಆರಿಫ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ಧನ್ಯವಾದವಿತ್ತರು. ಇದೇ ಸಂದರ್ಭದಲ್ಲಿ ಡಾ. ಸದಾನಂದ ಪೆರ್ಲ ಅವರಿಗೆ ಪೆÇಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಅವರು ಶಾಲು ಹಾಗೂ ಸ್ಮರಣಕೆ ನೀಡಿ ವಿಶೇಷ ಸನ್ಮಾನ ಮಾಡಿದರು. ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಗುರುವಪ್ಪ ಬಾಳೆಪುಣಿ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸರ್ಕಾರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.