ಅಭ್ಯರ್ಥಿ ಬದಲಾವಣೆ ವೈಯಕ್ತಿಕ ಅಭಿಪ್ರಾಯ

ವಿಜಯಪುರ.ಮಾ೨೯: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರ ಕೇವಲ ಆಸೆ ದುರಾಸೆಯಿಂದ ನೀಡುವ ವ್ಯಾಖ್ಯಾನ ಅದು ಕೆಲವರ ವೈಯಕ್ತಿಕ ಅಭಿಪ್ರಾಯಷ. ಭಾರತೀಯ ಜನತಾ ಪಕ್ಷ ವಿಶ್ವದಲ್ಲಿ ದೊಡ್ಡ ಕಾರ್ಯಕರ್ತರನ್ನು ಹೊಂದಿರುವ ರಾಷ್ಟ್ರೀಯ ಪಕ್ಷವಾಗಿದೆ. ಸದಾ ಯೋಚಿತವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರೋಕ್ಷವಾಗಿ ಶಾಸಕ ಎಸ್.ಆರ್.ವಿಶ್ವನಾಥ್ ಗೆ ಟಾಂಗ್ ನೀಡಿದ್ದಾರೆ.
ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಪಕ್ಷದಲ್ಲಿರುವ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ,
ಮಗನಿಗೆ ಟಿಕೇಟ್ ತಪ್ಪಿರುವುದಕ್ಕೆ ವಿಶ್ವನಾಥ್ ರವರಿಗೆ ಬೇಸರವಿರಬಹುದು. ನನ್ನ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಕೋಪದಿಂದ ಮಾತಾಡಿದ್ದಾರೆ ಅವು ರಾಜಕೀಯದಲ್ಲಿ ಮಾಮೂಲಿ ಮುಂದೆ ಅವರು ಸಮಯ ಕೊಟ್ಟಾಗ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತೇನೆ. ಪಕ್ಷದ ಕಟ್ಟಾಳಾಗಿ ವರ್ತಿಸುತ್ತಾರೆ ಎಂಬ ಆಶಾ ಭಾವನೆಯಲ್ಲಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರು ಗಳಾದಪಿಳ್ಳಮುನಿಶಾಮಪ್ಪ ಮತ್ತು ಜಿ .ಚಂದ್ರಣ್ಣ ಮುಖಂಡರುಗಳಾದ ಎಕೆಪಿ ನಾಗೇಶ್, ಓಬದ್ದೇನಹಳ್ಳಿ ಮುನಿಯಪ್ಪ, ನಂಜೇಗೌಡ ,ದೇಸು ನಾಗರಾಜು,ಜಿಲ್ಲಾ ಉಪಾಧ್ಯಕ್ಷ ಬೂದಿಗೆರೆ ನಾರಾಯಣಸ್ವಾಮಿ ,ಪ್ರಧಾನ ಕಾರ್ಯದರ್ಶಿ ಎಚ್. ಎಂ ರವಿಕುಮಾರ್ ,ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಪ್ರಧಾನ ಸಂಚಾಲಕ ಅಂಬರೀಶ್ ಗೌಡ, ತಾಲೂಕು ಅಧ್ಯಕ್ಷ ಸುಂದರೇಶ್(ಸುನೀಲ್) ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಬೂತ್ ಮಟ್ಟದ ಸದಸ್ಯರುಗಳು,ಕಾರ್ಯಕರ್ತರು ಇದ್ದರು.