ಅಭ್ಯರ್ಥಿ ಗಾದೆಪ್ಪ ಪರ ಕಾಂಗ್ರೆಸ್ ಮುಖಂಡರ ಪ್ರಚಾರ

ಬಳ್ಳಾರಿ ಏ 21 : ಇಲ್ಲಿನ ಮಹಾನಗರ ಪಾಲಿಕೆಯ ಸದಸ್ಯರ ಚುನಾವಣೆ ಅಂಗವಾಗಿ 23 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ. ಗಾದೆಪ್ಪ ಪರವಾಗಿ ಪಕ್ಷದ ಮುಖಂಡರುಗಳಾದ ಮುಂಡರಗಿ ನಾಗರಾಜ್, ಎಲ್.ಮಾರೆಣ್ಣ, ಅರ್ಜುನ್ ಹೆಗಡೆ, ದಲಿತ ಮುಖಂಡರಾದ ಪೃಥ್ವಿರಾಜ್, ವಾರ್ಡಿನ ಮುಖಂಡ ಕುರವಳ್ಳಿ ಬಾಬು, ಲಕ್ಷ್ಮಣ, ಗೋಪಾಲ, ಗೋವಿಂದರಾಜು ಮೊದಲಾದವರು ಪಾಲ್ಗೊಂಡು ಮತಯಾಚನೆ ಮಾಡಿದರು.