ಅಭ್ಯರ್ಥಿ ಆಯ್ಕೆ ಅಂತಿಮ ತೀರ್ಮಾನ ನನ್ನದೇ

ಹಾಸನ.ಮಾ೧೪:ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ ಅವರನ್ನು ಜೆಡಿಎಸ್‌ಗೆ ವಾಪಸ್ ಕರೆತರುವ ವಿಚಾರದಲ್ಲಿ ತಪ್ಪು ಹೇಳಿಕೆ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಭ್ಯರ್ಥಿ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು. ಅಕಸ್ಮಾತ್ ಸಿ ಎಂ ಇಬ್ರಾಹಿಂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ಅದರಿಂದ ಕಾರ್ಯಕರ್ತರು ಗೊಂದಲಕ್ಕೀಡಾಗುತ್ತಾರೆ. ನನ್ನ ಗಮನಕ್ಕೆ ಬಾರದೆ ಯಾರು ಯಾವುದೇ ಹೇಳಿಕೆಯನ್ನು ಕೊಡಬಾರದು ಎಂದರು.ಈ ಕುರಿತು ಏನಾದರೂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ನಾನು ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ, ಕಳೆದ ಒಂದು ವರ್ಷದಿಂದ ನಾಗರಾಜ್ ಎಂಬ ಅಭ್ಯರ್ಥಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಯೋಚಿಸಿ ಹೇಳಿಕೆ ಕೊಡಬೇಕು ಇಂತಹ ವಿಚಾರದಲ್ಲಿ ಹುಡುಗಾಟ ಆಡಬಾರದು ಎಂದು ಬಹಳ ಖಾರವಾಗಿಯೇ ಹೆಚ್ಡಿಕೆ ನುಡಿದರು.
ಕಾರ್ಯಕರ್ತರ ಪರವಾಗಿ ಈಗಾಗಲೇ ನಾಗರಾಜ್ ಕೆಲಸ ಕೆಲಸ ಮಾಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಬಾರಪ್ಪ ಅಂತ ಯಾರು ಅರ್ಜಿ ಹಾಕಿ ಶ್ರೀನಿವಾಸ್ ಅವರನ್ನು ಕರೆದಿಲ್ಲ. ಹಾಗಾಗಿ ಇಂಥ ಹೇಳಿಕೆ ಕೊಡುವಾಗ ಯೋಚನೆ ಮಾಡಿ ಕೊಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಹೆಚ್‌ಡಿಕೆ ಸಲಹೆ ನೀಡಿದರು.ಇನ್ನು, ಹಾಸನ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಕಾರ್ಯಕರ್ತರ ಆಶಯದಂತೆಯೇ ಅಭ್ಯರ್ಥಿ ಪ್ರಕಟವಾಗುತ್ತದೆ. ಕೆಲವೊಂದು ಅನುಕಂಪದ ಆಧಾರದ ಮೇಲೆ ಗೆಲುವು ಪಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿನ್ನೆ ಸ್ವರೂಪದಲ್ಲಿ ವಿದ್ಯಾಭ್ಯಾಸ ಮಾಡಿರುವುದರಿಂದ ಅವರ ಸ್ನೇಹಿತರು ಟಿಕೆಟ್ ಕೊಡಿ ಅಂತ ಕೇಳಿದರು. ಎಲ್ಲವನ್ನು ದೇವೇಗೌಡರು ತೀರ್ಮಾನ ಮಾಡುತ್ತಾರೆ. ಹಾಸನದ ರಾಜಕೀಯ ನನಗಿಂತ ದೇವೇಗೌಡರಿಗೆ ಚೆನ್ನಾಗಿ ಗೊತ್ತಿದೆ. ಅಂತಿಮವಾಗಿ ದೇವೇಗೌಡರು ಹಾಸನ ಕ್ಷೇತ್ರವನ್ನು ಘೋಷಣೆ ಮಾಡುತ್ತಾರೆ ಎಂದರು.