ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

ತಿ.ನರಸೀಪುರ:ಡಿ:30: ತಾಲೂಕಿನ 36 ಗ್ರಾ.ಪಂ.ಗಳ ಚುನಾವಣಾ ಮತಗಳ ಎಣಿಕೆ ಕಾರ್ಯ ಪಟ್ಟಣದ ವಿದ್ಯೋದಯ ಕಾಲೇಜು ಕಟ್ಟಡದಲ್ಲಿ ಆರಂಭಗೊಂಡಿದ್ದು ಸಂಜೆವರೆಗೆ ಸಂಪೂರ್ಣ ಫಲಿತಾಂಶ ನಿರೀಕ್ಷಿಸಲಾಗಿದೆ.
ಇಂದು ಬೆಳಗ್ಗೆ 8 ರಿಂದ ಮತ ಎಣಿಕೆ ಪ್ರಕ್ರಿಯೆ ಬಿರುಸಾಗಿ ನಡೆಯಲಿದೆ. ಬುಧವಾರ ಮತ ಎಣಿಕೆ ಕಾರ್ಯ ನಡೆಯಲಿರುವ 36 ಗ್ರಾ.ಪಂ.ಯ 243 ಬೂತ್ ಗಳನ್ನು ಶಾಲೆಯ 4 ಕೊಠಡಿಗಳಲ್ಲಿ ಭದ್ರವಾಗಿರಿಸಲಾಗಿದೆ.ಇಂದು ಬೆಳಿಗ್ಗೆ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆಯವರೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.ಮತ ಎಣಿಕೆ ನಡೆಯುವ ಶಾಲೆಯ ಮುಂಭಾಗ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶ ನಿರ್ಭಂಧಿಸಲಾಗಿದೆ.
ಮತ ಎಣಿಕೆ ಮಾಡಲು 80 ಟೇಬಲ್ ಗಳನ್ನು ಹಾಕಲಾಗಿದ್ದು ಪ್ರತಿ ಟೇಬಲ್ ಗೆ ಒಬ್ಬರು ಸೂಪರಿಂಟೆಂಡೆಂಟ್ ಹಾಗು ಒಬ್ಬರು ಸಹಾಯಕರನ್ನು ನಿಯೋಜಿಸಿ ಎಣಿಕೆ ಸುಸೂತ್ರವಾಗಿ ಮುಗಿಯಲು ಕ್ರಮ ಕೈಗೊಳ್ಳಲಾಗಿದೆ.36 ಗ್ರಾ.ಪಂ ಯಲ್ಲಿ ಅಧೃಷ್ಟ ಪರೀಕ್ಷೆಗೆ ಮುಂದಾಗಿರುವ 1560 ಅಭ್ಯರ್ಥಿಗಳ ಭವಿಷ್ಯ ಬುಧವಾರ ಸಂಜೆ ಒಳಗೆ ನಿರ್ಧಾರವಾಗಲಿದ್ದು ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. 34 ಅವಿರೋಧ ಆಯ್ಕೆ ಆಗಿದೆ.
ಬೆಳಿಗ್ಗೆಯಿಂದಲೇ ಜನರು ಮತ ಹೆಣಿಕೆ ಆರಂಭಗೊಳ್ಳುವ ಮುನ್ನ.ಅಲ್ಲಿನ ಮರದ ಕೆಳಗಡೆ ನಿಂತು ಕಾಯುತ್ತಿದ್ದರು. ಹಾಗೆಯೇ ನಂಜನಗೂಡು ರಸ್ತೆಗೆ ಸಹಜನಸ್ತೋಮದಿಂದ ಬ್ಲಾಕ್ ಆಗಿದೆ.