ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಮತ ಪಡೆಯಲು ಪ್ರಯತ್ನಿಸಬೇಕು.

ಚಿತ್ರದುರ್ಗ. ಏ.11; ಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಹ ಪ್ರಾಮಾಣಿಕವಾಗಿ ಮತಗಳಿಸಿ, ಗೆಲ್ಲಲು ಪ್ರಯತ್ನಿಸಬೇಕೇ ಹೊರತು ಒಳಮಾರ್ಗಗಳನ್ನು ಅಳವಡಿಸಿಕೊಂಡು, ಮತದಾರರಿಗೆ ಆಮಿಷ ಒಡ್ಡಿ, ಮತ ಪಡೆಯುವುದನ್ನು ಸ್ವಯಿಚ್ಛೆಯಿಂದ  ನಿಯಂತ್ರಿಸಿಕೊಳ್ಳಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿ ತಿಳಿಸಿದರು.ಅವರು ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಅಹಲ್ಯ ವಿದ್ಯಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಚಿನ್ನರ ಬೇಸಿಗೆ ಶಿಬಿರದಲ್ಲಿ ಮತ ಜಾಗೃತಿ ಮೂಡಿಸುತ್ತಾ ಮಾತನಾಡುತ್ತಿದ್ದರು.ಸರ್ಕಾರ ಸಾಕಷ್ಟು ಶ್ರಮಪಟ್ಟು ಮತದಾನವನ್ನ ಶಿಸ್ತುಭದ್ಧವಾಗಿ ನಡೆಸಲು ನಿಯಂತ್ರಣಗಳನ್ನು ಹಾಕಿಕೊಂಡು, ಹಗಲು ರಾತ್ರಿ ಕಷ್ಟಪಡುತ್ತಿದ್ದು, ಅದನ್ನ ಅಭ್ಯರ್ಥಿಗಳು ಅರ್ಥ ಮಾಡಿಕೊಂಡು, ಪ್ರಾಮಾಣಿಕವಾಗಿ ಮತಗಳಿಸಲು ಪ್ರಯತ್ನಿಸಬೇಕು ಎಂದರು.ಸರ್ಕಾರ ಹಾಕುವ ಕಟ್ಟುನಿಟಿನ ಕ್ರಮಗಳನ್ನು ಅಭ್ಯರ್ಥಿಗಳು ಒಳಮಾರ್ಗಗಳಿಂದ, ರಂಗೋಲಿ ಕಳಗೆ ನುಸಿಳಿದಂತೆ ನುಸುಳಿ, ವಾಮ ಮಾರ್ಗಗಳ ಮುಖಾಂತರ ಮತ ಗಳಿಸುವ ಹವ್ಯಾಸವನ್ನು ತೊರೆದಷ್ಟು, ನಿಜವಾದ ಪ್ರಜಾಪ್ರಭುತ್ವ ದೇಶದಲ್ಲಿ ಜಾಗೃತಗೊಳ್ಳುತ್ತದೆ ಎಂದರು.ಅನರಕ್ಷತೆ ಹೆಚ್ಚಾಗಿರುವ ದೇಶದಲ್ಲಿ, ಬಡತನ ತಾಂಡವವಾಡುತ್ತಿರುವ ಗ್ರಾಮೀಣ ಜನರನ್ನು, ಆಮೀಷಗಳ ಪಡಿಸಿ, ಮತ ಗಳಿಸುವುದು ಯಾವುದೇ ದೊಡ್ಡ ಸಾಧನೆಯಾಗುವುದಿಲ್ಲ, ಪ್ರಾಮಾಣಿಕತೆಯಿಂದ ಅಭ್ಯರ್ಥಿಗಳು ಮತಗಳಿಸುವುದರ ಬಗ್ಗೆ ಪ್ರಯತ್ನಗಳನ್ನ ಪಟ್ಟು ಸೋತರೂ ಸಹ, ಚಿಂತಿಸದೇ ಬೇರೆಯವರಿಗೆ ದಾರಿದೀಪವಾಗಬೇಕು ಎಂದರು.