ಅಭೂತಪೂರ್ವ ಗೆಲುವು ಸಾಧಿಸಿದ ಪಾಟೀಲ್

ಔರಾದ :ಜ.1: ಗ್ರಾಮ ಪಂಚಾಯ್ತಿ ಚುನಾವಣೆ ಪಲಿತಾಂಶ ಬುಧವಾರ ಹೊರ ಬೀಳುತ್ತಿದ್ದಂತೆ ಗೆಲುವು ಸಾಧಿಸದ ಅಭ್ಯರ್ಥಿಗಳು ಸಂಭ್ರಮದಿಂದ ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದರು.

ಔರಾದ ತಾಲೂಕಿನ 39 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದು ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಸಮಾಜಿಕ ಕಾರ್ಯಗಳಿಂದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

ಔರಾದ ತಾಲೂಕಿನ ಚಾಂದೋರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶ್ರೀ ದೀಪಕ್ ಪಾಟೀಲ ಚಾಂದೋರಿ ಅವರು 598 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 1278 ಮತಗಳ ಪೈಕಿ 925 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿಯನ್ನು 598 ಮತಗಳು ಪಡೆದು ಜನಸೇವಕರಾಗಿ ಹೊರಹೊಮ್ಮಿರುತ್ತಾರೆ. ಈ ಹಿಂದಿನ ಚುನಾವಣೆಯಲ್ಲಿ ಕೂಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದರು.

ದೀಪಕ ಪಾಟೀಲ ಅವರು ಸದಾ ಸಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವವರು. ಉತ್ತಮ ಆಡಳಿತ ಜನಪರ ಕಾರ್ಯಗಳನ್ನು ಅತಿ ಉತ್ಸಾಹದಿಂದ ಕೆಲಸ ಮಾಡುವ ಇವರ ಈ ಕಾರ್ಯ ಜನರಲ್ಲಿ ಹೊಸ ಆಶಯ ಸೃಷ್ಟಿಸಿತ್ತು. ಅದರಂತೆಯೇ ಪಾಟೀಲರವರು ತಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಜನನಾಯಕರಾಗಿ ಮಿಂಚಿದ್ದಾರೆ. ಪಾಟೀಲ ಅಧ್ಯಕ್ಷರಿಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿಯೆ ಚಾಂದೋರಿ ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮವನ್ನಾಗಿ ಮಾಡಿದರು. ಪ್ರತಿ ಮನೆ ಮನೆಗೂ ಶೌಚಾಲಯ ನಿರ್ಮಾಣ ಮಾಡಿಸಿದ್ದರು.

2020ರ ವರ್ಷ ಇಡಿ ಜಗತ್ತಿಗೆ ಕಂಟಕವಾಗಿತ್ತು ಇಡಿ ಜಗತ್ತೆ ಮಹಾಮಾರಿ ಕೋರೋನಾ ಸಂಕಟದಿಂದ ನಲುಗಿ ಹೋಗಿತ್ತು. ಅದು ಬೆಂಬಿಡದೆ ಭಾರತಕ್ಕೂ ಕಾಲಿಟ್ಟು ಆವಾಂತರ ಸೃಷ್ಟಿಸಿತ್ತು. ಮಾರ್ಚ್ ತಿಂಗಳಲ್ಲಿ ಭಾರತ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ದಿನಗೂಲಿ ಮಾಡಿ ಜೀವಿಸುವ ಬಡವರು ಕೆಲಸ ಕಳೆದುಕೊಂಡು ಹಸಿವಿನಿಂದ ಪರಿತಪಿಸುವಂತಾಗಿತ್ತು. ಅಂತಹ ಸಮಯದಲ್ಲಿ ಏಕತಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ರವೀಂದ್ರ ಸ್ವಾಮಿ ಅವರೊಂದಿಗೆ ಕೈಜೋಡಿಸಿ ಇಡೀ ತಾಲ್ಲೂಕಿನಲ್ಲಿ ಜೋಡೆತ್ತುಗಳಾಗಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ರೇಷನ ಕಿಟ್ಸ್ ಗಳನ್ನು ವಿತರಿಸುವ ಮೂಲಕ ಬಡವರ ಹಸಿವನ್ನು ನೀಗಿಸಿ ಮನೆಮಾತಾದವರು.

ಇವರ ಈ ಸಾಮಾಜಿಕ ಕಾರ್ಯಗಳು ಸದಾ ನಿರಂತರವಾಗಿ ನಡೆಯಲಿ ಎಂಬುವುದು ಜನಗಳ ಆಶಯ ಭಗವಂತ ಅವರಿಗೆ ಇನ್ನಷ್ಟು ಆಯುರಾರೋಗ್ಯ ಕೊಟ್ಟು ಸಮಾಜ ಸೇವೆ ಮಾಡಲು ಶಕ್ತಿ ನೀಡಲಿ ಎಂಬುವುದು ಎಲ್ಲರ ಆಶಯ.

ಇವತ್ತಿನ ಭೃಷ್ಟ ವ್ಯವಸ್ಥೆಯಲ್ಲಿ ಜನರಿಂದ ಆರಿಸಿ ಬಂದು ನಂತರ ಮುಂದಿನ ಚುನಾವಣೆಯಲ್ಲಿಯೆ ಮುಖ ತೋರಿಸುವ ರಾಜಕಾರಣಿಗಳ ನಡುವೆ ಸದಾ ಜನಗಳ ನಡುವೆ ಇದ್ದು ಜನರ ಕಾಳಜಿ ವಹಿಸಿ ಜನಸ್ನೇಹಿಯಾಗಿರುವ ಪಾಟೀಲರು ಅಪರೂಪದ ವ್ಯಕ್ತಿಗಳು.
-ಅಮರಸ್ವಾಮಿ ಸ್ಥಾವರಮಠ ಔರಾದ