
ದಾವಣಗೆರೆ.ಮೇ.೭: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ ಪುತ್ರ ಅಭಿ ನಾಗರಾಜ್ ಲೋಕಿಕೆರೆ ಅವರು ತಂದೆ ಪರ ಬಿರುಸಿನ ಮತ ಪ್ರಚಾರ ನಡೆಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಸಿಎಂ ಟೌನ್ ಶಿಪ್, ರಾಜೇಂದ್ರ ಬಡಾವಣೆ ಮತ್ತು ವಿವಿಧ ಬಡಾವಣೆಗಳಲ್ಲಿ ಹಾಗೂ ಸಂಜೆ ಆಂಜನೇಯ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ತಂಡದ ಜೊತೆಗೂಡಿ ಮತದಾರರ ಪ್ರತಿ ಮನೆಗಳಿಗೆ ಭೇಟಿ ನೀಡಿ ಮನೆ ಮನೆ ಸಂಪರ್ಕ ನಡೆಸಿ, ತಂದೆ ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸುವಂತೆ ಮತಯಾಚಿಸಿದರು.ಮತದಾರರ ಬಳಿ ತೆರಳಿದಾಗ, ಯುವ ಮೋರ್ಚಾ ತಂಡವು ನಾಗರಾಜ್ ಲೋಕಿಕೆರೆ ಅವರ ಪುತ್ರ ಅಭಿ ಅವರನ್ನು ಪರಿಚಯಿಸಿ, ಸಮಾಜ ಸೇವಕರಾಗಿ ಅನೇಕ ಆಟೋ ಚಾಲಕರಿಗೆ ಆಟೋ ಕೊಡಿಸಿ ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿದ್ದು ಮತ್ತು ಕೋವಿಡ್ ಸಮಯದಲ್ಲಿ ಆಹಾರ ಕಿಟ್ ನೀಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಸಾಧನೆ ತಿಳಿಸಿದರು.ನಾಗರಾಜ್ ಲೋಕಿಕೆರೆ ಅವರಿಗೆ ಮತ ನೀಡಿ ಬೆಂಬಲಿಸುವಂತೆ ಪುತ್ರ ಅಭಿ ಮತದಾರರಲ್ಲಿ ಮನವಿ ಮಾಡಿದರು. ಇದಕ್ಕೆ ಮತದಾರರು ಸ್ಪಂದನೆ ವ್ಯಕ್ತಪಡಿದರು.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವರ್ಣೇಕರ್, ಕಿಶೋರ್, ಅರವಿಂದ್, ಕಿರಣ್, ರಮೇಶ್ ಸೇರಿದಂತೆ ಯುವ ಮೋರ್ಚಾ ತಂಡ ಸಾಥ್ ನೀಡಿ ಮತಯಾಚಿಸಿತು.