ಅಭಿಷೇಕ್ ಐಶ್ವರ್ಯ ರೈ ಅಭಿನಯದ ’ಗುರು’ ಫಿಲ್ಮ್ ಗೆ ೧೪ ವರ್ಷ : ಫಿಲ್ಮ್ ಗೆ ಅವಾರ್ಡ್ ಸಿಗದ್ದಕ್ಕೆ ಅಮಿತಾಭ್ ಗೆ ಬೇಸರ ಆಗಿತ್ತು!

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅಭಿನಯದ ಫಿಲ್ಮ್ ’ಗುರು’ ರಿಲೀಸ್ ಆಗಿ ೧೪ ವರ್ಷ ಪೂರ್ಣಗೊಂಡಿತು.
ಈ ಫಿಲ್ಮ್ ೨೦೦೭ರಲ್ಲಿ ರಿಲೀಸ್ ಆಗಿತ್ತು. ಫಿಲ್ಮ್ ನ ಡೈರೆಕ್ಟರ್ ಮಣಿರತ್ನಂ ಆಗಿದ್ದರು. ಈ ಫಿಲ್ಮ್ ನ ಕತೆ ಉದ್ಯಮಿ ಧೀರೂಬಾಯಿ ಅಂಬಾನಿಯವರ ಬದುಕಿನ ಆಧಾರಿತವಾಗಿತ್ತು.


ಈ ಫಿಲ್ಮ್ ಅಭಿಷೇಕ್ ಮತ್ತು ಐಶ್ವರ್ಯರೈ ಅವರಿಗೆ ಬಹಳ ಮಹತ್ವವಾಗಿತ್ತು. ಯಾಕಂದ್ರೆ ಈ ಫಿಲ್ಮಿನ ಮೂಲಕವೇ ಇವರಿಬ್ಬರ ಸ್ನೇಹ ವೃದ್ಧಿಯಾಗಿತ್ತು.ಇನ್ನಷ್ಟು ಸಮೀಪಕ್ಕೆ ಬಂದಿದ್ದರು. ಫಿಲ್ಮಿನ ಶೂಟಿಂಗ್ ಸಮಯ ನಕಲಿ ಉಂಗುರ ನೀಡಿ ಅಭಿಷೇಕ್ ರು ಐಶ್ವರ್ಯರಿಗೆ ಪ್ರಪೋಸ್ ಮಾಡಿದ ದೃಶ್ಯವೊಂದಿತ್ತು.


ಅಭಿಷೇಕ್ ಬಚ್ಚನ್ ರು ಅಮೆರಿಕ ಟಿವಿ ಆಂಕರ್ ಓಪ್ರಾ ವಿನ್ಫ್ರೇ ಅವರ ಶೋದಲ್ಲಿ ಈ ಹಿಂದೆ ಫಿಲ್ಮಿನ ಶೂಟಿಂಗ್ ಗಾಗಿ ನ್ಯೂಯಾರ್ಕಿನ ಹೋಟೆಲ್ ನಲ್ಲಿ ಇದ್ದಾಗ ಬಾಲ್ಕನಿಯಲ್ಲಿ ನಿಂತು ಐಶ್ವರ್ಯ ರೈ ಅವರ ಜೊತೆ ವಿವಾಹವಾಗುವ ಬೇಡಿಕೆಯನ್ನು ದೇವರಲ್ಲಿ ಇಟ್ಟಿದ್ದರಂತೆ. ವಿಶೇಷ ಅಂದರೆ ಗುರು ಫಿಲ್ಮ್ ನ ಪ್ರೀಮಿಯರ್ ಶೋದಿಂದ ಹಿಂತಿರುಗಿದ ನಂತರ ನ್ಯೂಯಾರ್ಕ್ ನ ಅದೇ ಹೋಟೆಲಲ್ಲಿ ಅದೇ ಬಾಲ್ಕನಿಯಲ್ಲಿ ಐಶ್ವರ್ಯರಿಗೆ ಪ್ರಪೋಸ್ ಮಾಡಿದ್ದರು. ಇದು ಫಿಲ್ಮ್ ರಿಲೀಸಾದ ಎರಡು ದಿನಗಳ ನಂತರದ ಸಂಗತಿ.


ಗುರು ಫಿಲ್ಮ್ ನಲ್ಲಿ ಅಭಿಷೇಕ್ ಬಚ್ಚನ್ ಅವರ ಅಭಿನಯಕ್ಕೆ ಬಹಳಷ್ಟು ಪ್ರಶಂಸೆ ಬಂದಿತ್ತು. ಬೆಸ್ಟ್ ಫಿಲ್ಮ್ ಎಂದು ವಿಮರ್ಶಕರಿಂದ ಹೇಳಲಾಗಿತ್ತು. ಆ ವರ್ಷ ಅವರಿಗೇ ಅವಾರ್ಡ್ ಸಿಗಬಹುದು ಎಂದೂ ನಂಬಲಾಯಿತು. ಆದರೆ ಅಭಿಷೇಕ್ ಗೆ ಅವಾರ್ಡ್ ಸಿಗದಿದ್ದಾಗ ಅಮಿತಾಭ್ ಬಚ್ಚನ್ ರಿಗೂ ತೀವ್ರ ಬೇಸರವಾಗಿತ್ತು.
ಆ ದಿನಗಳಲ್ಲಿ ಅಮಿತಾಭ್ ಬಚ್ಚನ್ ಟ್ವಿಟರ್ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿದ್ದರು. ಫಿಲ್ಮ್ ಗಳಲ್ಲಿ ಅವಾರ್ಡ್ ಅಭಿನಯದ ಬದಲು ಉತ್ತಮ ಸಂಬಂಧದಿಂದ ಸಿಗುತ್ತದೆ ಎಂದು ಟೀಕಿಸಿದ್ದರು.


“ನಾನು ದೂರದರ್ಶನದಲ್ಲಿ ’ಗುರು’ ನೋಡಿದ್ದೆ. ಅಭಿಷೇಕ್ ಅಭಿನಯ ಬಹಳಷ್ಟು ಚೆನ್ನಾಗಿತ್ತು .ಆದರೆ ಗುರು ಫಿಲ್ಮ್ ಗಾಗಿ ಅವರಿಗೆ ಒಂದೂ ಅವಾರ್ಡ್ ಸಿಗಲಿಲ್ಲ. ನನ್ನ ಪ್ರಕಾರ ಇದು ಅವರ ಉತ್ತಮ ಫಿಲ್ಮ್ ಆಗಿದೆ .ನಾನು ಅಭಿಷೇಕ್ ಗೆ ಹೇಳಿದೆ – ದೀವಾರ್ ಫಿಲ್ಮ್ ನ ಅಭಿನಯಕ್ಕಾಗಿ ನನಗೆ ಒಂದು ಕೂಡ ಅವಾರ್ಡ್ ಸಿಕ್ಕಿರಲಿಲ್ಲ. ಅಂತಯೇ ಗಂಗಾ ಜಮುನಾ ಫಿಲ್ಮ್ ನ ಅಭಿನಯಕ್ಕಾಗಿ ದಿಲೀಪ್ ಸಾಹೇಬರಿಗೆ ಕೂಡಾ ಅವಾರ್ಡ್ ಸಿಕ್ಕಿರಲಿಲ್ಲ. ಅಭಿನಯಕ್ಕಾಗಿ ಅಲ್ಲ.ಕೆಲವೊಮ್ಮೆ ಉತ್ತಮ ಸಂಬಂಧವೂ ಮುಖ್ಯವಾಗುವುದೇನೊ……” ಮಗನ ಕುರಿತು ಇದು ತಂದೆಯ ಪ್ರಶಂಸೆ ಅನ್ನೋಣವೇ ಅಥವಾ ಅವಾರ್ಡ್ ನ ಹಿಂದಿರುವ ಸತ್ಯವೇ?

ಟಾಕೀಸುಗಳಲ್ಲಿ ಬರಲಿದೆ ದೊಡ್ಡ ಬಜೆಟ್ ನ ೨ ಫಿಲ್ಮ್ ಗಳು: ಅಕ್ಷಯಕುಮಾರ್ ರ ’ಸೂರ್ಯವಂಶಿ’ ಮತ್ತು ರಣವೀರ್ ಸಿಂಗ್ ರ ’೮೩’

ಲಾಕ್ಡೌನ್ ಅನಂತರ ಟಾಕೀಸುಗಳಲ್ಲಿ ದೊಡ್ಡ ಫಿಲ್ಮ್ ನ ನಿರೀಕ್ಷೆ ಮಾಡುತ್ತಿರುವ ಪ್ರೇಕ್ಷಕರಿಗೆ ಒಂದು ಖುಷಿಯ ಸಂಗತಿ ಇದೆ.


ರಿಲಯನ್ಸ್ ಎಂಟರ್ಟೈನ್ಮೆಂಟ್ ತನ್ನ ಎರಡು ದೊಡ್ಡ ಫಿಲ್ಮ್ ಗಳಾದ ಅಕ್ಷಯಕುಮಾರ್ ಅಭಿನಯದ ಸೂರ್ಯವಂಶಿ ಮತ್ತು ರಣವೀರ್ ಸಿಂಗ್ ಅಭಿನಯದ ’೮೩’ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಬಿಡುಗಡೆಗೊಳಿಸುವ ತಯಾರಿ ನಡೆಸುತ್ತಿದೆ.


ಫಿಲ್ಮ್ ಮೂಲಗಳ ಅನುಸಾರ ರಿಲಯನ್ಸ್ ಎಂಟರ್ಟೈನ್ಮೆಂಟ್ ಈ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಸೂರ್ಯವಂಶಿ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ.


ಈಗಾಗಲೇ ಈ ಫಿಲ್ಮ್ ಒರಿಜಿನಲ್ ರಿಲೀಸ್ ತಾರೀಖಿನಿಂದ ಒಂದು ವರ್ಷ ಹಿಂದಿದೆ. ಹೀಗಾಗಿ ಇನ್ನಷ್ಟು ನಿರೀಕ್ಷೆ ಮಾಡುವುದು ಕಷ್ಟವಾಗುತ್ತಿದೆ .ಅವರಿಗೆ ಧೈರ್ಯ ಏನೆಂದರೆ ಅಕ್ಷಯಕುಮಾರ್ ಪ್ರೇಕ್ಷಕರನ್ನು ಟಾಕೀಸ್ ಗೆ ಕರೆತರಬಹುದು ಎನ್ನುವುದು. ಅಕ್ಷಯ್ ಕುಮಾರ್ ನಂತರ ರಣವೀರ ಸಿಂಗ್ ರ ಫಿಲ್ಮ್ ತರಲಿದ್ದಾರೆ.


’೮೩’ ಫಿಲ್ಮ್ ನ ಪೋಸ್ಟರ್ ಲಾಂಚ್ ಆಗಿದೆ. ಇದರ ಟ್ರೈಲರ್ ಲಾಂಚ್ ಆಗಿಲ್ಲ. ಪ್ರಮೋಷನಲ್ ಆಕ್ಟಿವಿಟೀಸ್ ನಲ್ಲಿ ೧೯೮೩ ರ ವಿಶ್ವಕಪ್ ಗೆ ಸಂಬಂಧಿಸಿದ ಕ್ರಿಕೆಟ್ ಆಟಗಾರರನ್ನು ಕರೆತರುವ ಇಚ್ಛೆಯಲ್ಲಿ ಇದ್ದಾರೆ.
ಹೀಗೆ ಮಾರ್ಚ್ ನಲ್ಲಿ ಸೂರ್ಯವಂಶಿ ಮತ್ತು ಏಪ್ರಿಲ್ ನಲ್ಲಿ ’೮೩’ ರಿಲೀಸ್ ಆಗುವ ತಯಾರಿ ಕಂಡುಬಂದಿದೆ.


ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ೨೪ ಮಾರ್ಚ್ ೨೦೨೦ಕ್ಕೆ ರಿಲೀಸ್ ಆಗುವುದಿತ್ತು. ಅದರಲ್ಲಿ ಅಕ್ಷಯ್ ಕುಮಾರ್ , ಕತ್ರಿನಾ ಕೈಫ್ , ಅಜಯ್ ದೇವಗನ್, ರಣವೀರ್ ಸಿಂಗ್ ಮತ್ತು ಗುಲ್ಶನ್ ಗ್ರೋವರ್ ತಾರಾಗಣದಲ್ಲಿದ್ದಾರೆ.
ಫಿಲ್ಮ್ ೮೩ ಮೊದಲು ೧೦ ಎಪ್ರಿಲ್ ೨೦೨೦ ಕ್ಕೆ ಬಿಡುಗಡೆಯಾಗುವುದಿತ್ತು. ಫಿಲ್ಮ್ ನಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ… ಮೊದಲಾದವರು ಇದ್ದಾರೆ.