ಅಭಿಷೇಕ್ – ಅವಿವಾ ಆರತಕ್ಷತೆ: ಎಸ್ ಎಂ ಕೃಷ್ಣ ಸೇರಿ ಗಣ್ಯರು ಭಾಗಿ

ಬೆಂಗಳೂರು,ಜೂ.7- ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಷ್ ಅವರ ವಿವಾಹ ಆರತಕ್ಷತೆ ನಗರದಲ್ಲಿಂದು ನಡೆಯಿತು.

ನಗರದ ಅರಮನೆ ಮೈದಾನದಲ್ಲಿ ನಡೆದ ಆರತಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಸಂಸದ ಬಿ.ಎನ್ ಬಚ್ಚೇಗೌಡ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಗಣ್ಯತು ಆರತಕ್ಷತೆಯಲ್ಲು ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.

ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಲ್ಲಿ ಸ್ಟೇಜ್ ನಿರ್ಮಾಣ ಮಾಡಲಾಗಿತ್ತು. 300 ಶಾಗ್ಲೀಯರ್ಸ್.. ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಅವಳಡಿಕೆ ಮಾಡಲಾಗಿತ್ತು.ಭಾರತದಲ್ಲೇ ಪ್ರಥಮ್ ಬಾರಿಗೆ ಈ ಡಿಸೈನ್ ನಿರ್ಮಾಣ ದೆಹಲಿಸ ಮೋರದಾ ಬಾದ್ ನಿಂದ ತರಿಸಲಾಗಿದೆ

ಶಿವರಾಜ್ ಕುಮಾರ್ ಮಗಳ ಹಾಗೂ ಯಶ್, ಜನರ್ದಾನ ರೆಡ್ಡಿ ಮಗಳ , ಯದುವೀರ್ ಮಹರಾಜರು ಸೇರಿದಂತೆ ಎಲ್ಲಾ ರಾಜಕೀಯ ಗಣ್ಯರ ಮದುವೆ ಡಿಸೈನ್ ಮಾಡಿದ್ದಾರೆ ಅಭಿಷೇಕ್ ಅರತಕ್ಷತೆಗೆ 3 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಮಡಲಾಗಿತ್ತು.

25ಸಾವಿರ ಜನಕ್ಕೆ ಊಟ

ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಗುಲಾಮ್ ನವಿ ಆಜಾದ್ ಹಿರಿಯ ಕಾಂಗ್ರೆಸ್ ಮುಖಂಡ, ಶತ್ರು ಜ್ಞಾನ್ನ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.