ಅಭಿವೃದ್ಧಿ ಹೆಸರಿನಲ್ಲಿ ಲೂಟಿ

ಲಿಂಗಸುಗೂರು,ಜ.೧೯- ಲಿಂಗಸುಗೂರು ತಾಲೂಕಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡದೆ ಕೇವಲ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುವ ಮೂಲಕ ಗುತ್ತಿಗೆದಾರಿಕೆ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ ಮತ್ತು ನಾರಾಯಣ ಪುರ ಬಲದಂಡೆ ಕಾಲುವೆ ಆಧುನೀಕರಣಕ್ಕೆ ಬಂದ ಅನುದಾನವನ್ನು ಲೂಟಿ ಮಾಡಿ ಕ್ಷೇತ್ರದ ಜನರಿಗೆ ಮರಳು ಮೊಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರ ವಿರುದ್ಧ ಇಂದು ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡರವರು ವಾಗ್ಧಾಳಿ ನಡೆಸಿದರು.
ಮಾಜಿ ಶಾಸಕರೆ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಆದ ನಂತರ ನಿಮ್ಮ ಅವಧಿಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರ ಮುಂದೆ ಇಡಿ ಹಾಗೂ ಹಿಂದೆ ಹತ್ತು ಆಡಳಿತದ ಅವಧಿಯಲ್ಲಿ ಬಂದ ಅನುದಾನ ಯೋಜನೆ ಬಿಡುಗಡೆಯಾದ ಅನುದಾನವನ್ನು ಯಥಾವತ್ತಾಗಿ ಅಭಿವೃದ್ಧಿ ಕ್ಷೇತ್ರದ ಜನರಿಗೆ ಶ್ವೇತ ಪತ್ರ ಹೊರಡಿಸಿ ಎಂದು ನೇರವಾಗಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರಿಗೆ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡರವರು ಸವಾಲು ಹಾಕಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಿಷ್ಕ್ರಿಯಗೊಂಡ ಆಡಳಿತವಿದೆ ಆಡಳಿತ ದಿವಾಳಿ ಅಂಚಿನಲ್ಲಿ ಬಿಜೆಪಿ ಸರ್ಕಾರ ಇದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ಸಂಪೂರ್ಣವಾಗಿ ಕಲುಷಿತಗೊಂಡ ರಾಜಕಾರಣವಾಗಿದೆ ಎಂದರು. ಮುದಗಲ್ ಹಟ್ಟಿ ಜನರಿಗೆ ಕುಡಿಯಲು ನೀರು ಕೊಡಲು ಆಗದೆ ಹಾಲಿ ಶಾಸಕ ಡಿ ಎಸ್ ಹೂಲಗೇರಿ ಇವರ ಮೇಲೆ ಬೊಟ್ಟು ಮಾಡಿ ತೋರಿಸಿ ರಾಜಕೀಯ ಮಾಡುವ ಮಾಜಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ
ಹರಿಹಾಯ್ದಿದ್ದಾರೆ.
ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಗಂಧ ಗಾಳಿ ಇಲ್ಲದ ನಾಯಕರು ಬರುತ್ತಿರುವದು ನೋಡಿದರೆ ಕ್ಷೇತ್ರವನ್ನು ಹಾಳುಗೆಡವಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಖೆದಕರ ಸಂಗತಿಯಾಗಿದೆ ತಪ್ಪಾಗಲಾರದು ಎಂದು ಹೇಳಿದರು. ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ವಲಸೆ ರಾಜಕಾರಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿರುವ ಹಾಲಿ ಮಾಜಿ ಶಾಸಕರು ವಲಸೆ ರಾಜಕಾರಣಿಗಳು ಹಾಗು ಸಿದ್ದು ವೈ ಬಂಡಿ ಇವರು ಕೂಡ ಪಕ್ಕದ ಜಿಲ್ಲೆಯ ಇಲಕಲ್ ರಾಜಕಾರಣಿ ಈ ಮೂವರು ರಾಜಕಾರಣಿಗಳಲ್ಲಿ ಇಬ್ಬರು ಗಣಿಗಾರಿಕೆ ನಡೆಸುವ ಪಾಳೆಗಾರರು ಹಾಗೂ ಇನ್ನೊಬ್ಬರು ಪಕ್ಕದ ಜಿಲ್ಲೆಯ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದವರು ಇವರ ಮೂಲ ಹುದ್ದೆ ಗುತ್ತಿಗೆದಾರಿಕೆ ಕೆಲಸವಾಗಿದೆ. ಕ್ಷೇತ್ರದಲ್ಲಿ ಇವರ ರಾಜಕೀಯ ತಮ್ಮ ಗುತ್ತೆದಾರಿಕೆ ಹಾಗೂ ಗಣಿ ಗಾರಿಕೆ ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಇಬ್ರಾಹಿಂ ಗ್ಯಾರಂಟಿ ಪ್ರಕಾಶ್ ದೇವರಾಜ್ ದೊರೆ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.