ಅಭಿವೃದ್ಧಿ ಹೆಸರನಲ್ಲಿ ಹಣ ಲೂಟಿ

ರಾಯಚೂರು,ಮಾ.೦೩- ಜೆಡಿಎಸ್ ಪಕ್ಷದ ಮನೆ ಮನೆಗ ಪಂಚರತ್ನ ಯೋಜನೆಯ ಕಾರ್ಯಕ್ರಮ ರಾಯಚೂರ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. ೨ ರಲ್ಲಿ ವಾರ್ಡ್‌ನ ಜಿಲ್ಲಾ ಜನತಾದಳದ ಪಕ್ಷದ ಕಾರ್ಯಾಲಯ ಉದ್ಘಾಟಿಸಿದ ರಾಯಚೂರ ನಗರ ಕ್ಷೇತ್ರದ ಅಭ್ಯರ್ಥಿಯಾದ ಈ ವಿನಯಕುಮಾರ ಮಾತನಾಡಿ, ನಗರದಲ್ಲಿ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕರು ಹೇಳುತ್ತಾರೆ.
ಆದರೆ ಶಾಸಕ ಸ್ಥಾನ ಸ್ವಾಧಿಸುವ ವ್ಯಕ್ತಿಯೊಬ್ಬರು ವಾರ್ಡ್‌ಗಳಲ್ಲಿ ಖಾಸಗಿಯಾಗಿ ರಸ್ತೆ, ಲೈಟ್ ಕಾರ್ಯಗಳು ಮಾಡುತ್ತಿದ್ದಾರೆ. ಈ ಬಗ್ಗೆ ಶಾಸಕರು ಯಾಕೆ ಮೌನ ವಹಿಸಿದ್ದಾರೆ. ಅಂದರೆ ಶಾಸಕ, ಜಿಲ್ಲಾಡಳಿತ, ನಗರಸಭೆ ಯಾವುದು ಕೆಲಸ ಮಾಡುತ್ತಿಲ್ಲವೆ ಜನತೆ ಕೇಳುತ್ತಿದ್ದಾರೆ. ಕಾಂಗ್ರೆಸ್‌ನ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ, ಏಕ ವ್ಯಕ್ತಿತ್ವ ನಿರಂಕುಶತ್ವ ಇದೆ, ಮುಖಂಡರ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಇಲ್ಲ ಎಂದರು.
ಜಿಲ್ಲಾ ಅಧ್ಯಕ್ಷ ಎ. ವಿರುಪಾಕ್ಷಿ ರಾಯಚೂರು ನಗರದಲ್ಲಿ ನೂರಾರು ಕೋಟಿ ಅನುದಾನ ತಂದಿದ್ದು, ಶಾಸಕ ಶಿವರಾಜ ಪಾಟೀಲ ಹೇಳುತ್ತರೆ. ಆದರೆ ಪ್ರತಿ ವಾರ್ಡ್‌ಗಳಲ್ಲಿ ಯಾವದೇ ಅಭಿವೃದ್ಧಿಯ ಕಾಣುತ್ತಿಲ್ಲ. ಹಿಂಬಾಲಕರಿಗೆ ಹಣ ಲೂಟಿ ಮಾಡಲು ಅನುದಾನ ತಂದಿದ್ದಾರೆ. ಕೇವಲ ಅವರು ಅಭಿವೃದ್ಧಿಯಾಗಿದರೆ ನಗರ ಅಲ್ಲ ಎಂದರು.
ರಾಜ್ಯ ಉಪಾಧ್ಯಕ್ಷ ಮಹಾಂತೇಶಪಾಟೀಲ ಮಾತನಾಡಿ ಎರಡು ರಾಷ್ಟ್ರೀಯ ಪಕ್ಷಗಳು ಧರ್ಮ ಧರ್ಮಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರೈತರ, ಜನಸಾಮಾನ್ಯರ, ಸಂಕಷ್ಟ ಚಿಂತನೆ ಮಾಡುವದಿಲ್ಲ ಜೆಡಿಎಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲಾಕಾರ್ಯಧ್ಯಕ್ಷ ಎನ್. ಶಿವಶಂಕರ ವಕೀಲರು ಮಾತನಾಡಿ ಕುಮಾರಣ್ಣ ಅವರು ೭೫ ದಿನಗಳಿಂದ ರಾಜ್ಯ ಮೂಲೆ ಮೂಲೆಗೂ ಪ್ರವಾಸ ಮಾಡಿ ಜನಸಾಮಾನ್ಯರ ಕಷ್ಟ ಸುಖಗಳನ್ನು ತಿಳಿಯುತ್ತಿದ್ದಾರೆ. ಪಂಚರತ್ನ ಯೋಜನೆಯ ಸೌಲಭ್ಯ ಕಲ್ಪಿಸುವ ಸ್ಪಷ್ಟ ಸಂದೇಶ ನೀಡುತಿದ್ದಾರೆ ಎಂದರು.
ಗೌರವ ಅಧ್ಯಕ್ಷ ಯೂಫಸ್ ಖಾನ್ ನಗರ ಅಧ್ಯಕ್ಷ ಬಿ. ತಿಮಾರೆಡ್ಡಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ವಿಶ್ವನಾಥ ಪಟ್ಟಿ ಈರಣ್ಣ ಯಾದವ, ಆದಿರಾಜಾ, ಬಬಲೂ, ನರಸಪ್ಪ ಆಶಾಪೂರ, ಪಾರ್ಥ, ನರಸಿಂಹಲು, ಕೆ. ಅಂಜಿನಯ್ಯ, ನರಸಿಂಹಲು ಇಂದಿರಾನಗರ, ಅವಿಲ್ ಅಮಿತ್ ಸುಂಕಾರಿ, ಕುಮಾರಸ್ವಾಮಿ, ಮಾರೆಪ್ಪ , ಪ್ರಕಾಶ ಉಪಸ್ಥಿತರಿದ್ದರು.