ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ

ಹರಿಹರ.ಏ.೨೦; ಸಿದ್ದಿಕ್ ಎಂಬ ವ್ಯಕ್ತಿಯು ನಾಲ್ಕು ಜಿಲ್ಲೆಗಳಲ್ಲಿ ಮರಳು ಹಾಗೂ ಮಣ್ಣಿನ ಮಾಫಿಯಾವನ್ನು ನಿಯಂತ್ರಣ ಮಾಡುತ್ತಿದ್ದಾನೆ. ಕಂಡೂ ಕಾಣದೆ ಜಾಣ ಕುರುಡರಂತೆ ಅಧಿಕಾರಿ ವರ್ಗ ವರ್ತಿಸುತ್ತಿದೆ ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು. ನಗರದ ಗಾಂಧಿ ಮೈದಾನದಲ್ಲಿ  ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಅವ್ಯಾವತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂದೆಯ ಹಿಂದೆ ಸಿದ್ದಿಕ್ ಎಂಬ ವ್ಯಕ್ತಿ ಇದ್ದಾನೆ. ಈತನ ಅಣತೆಯಂತಿಯೇ ಎಲ್ಲಾ ಚಟುವಟಿಕೆ ನಡೆಯುತ್ತಿರುವುದು ಅಧಿಕಾರಿ ಹಾಗೂ ಜನ ಪ್ರತಿನಿಧಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನೀಸಿದರು.ಬಡವರು ಸ್ವಂತ ಮನೆಯನ್ನು ಕಟ್ಟಲು ನದಿಯಿಂದ ಒಂದು ಚೀಲದಲ್ಲಿ ಮರಳನ್ನು ತಂದರು ಪೊಲೀಸ್ ಇಲಾಖೆ ಅಂತವರ ಮೇಲೆ ಪ್ರಕರಣ ದಾಖಾಲಿಸುತ್ತಾರೆ. ಅಲ್ಲದೆ ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಟ್ರಾö್ಯಕ್ಟರ್ ಬಳಸಿ ಮರಳನ್ನು ಸಾಗಿಸಿದರು ತಕ್ಷಣವೇ ಬಂದು ಜಪ್ತಿ ಮಾಡುವ ಇಲಾಖೆಗಳು ದಂಡ ವಸೂಲಿ ಮಾಡುತ್ತಾರೆ ಎಂದು ಹರಿಹಾಯ್ದರು.ಸರ್ಕಾರಿ ವ್ಯವಸ್ಥೆಯನ್ನೆ ಬುಡಮೇಲು ಮಾಡಿ, ತನ್ನ ಅಕ್ರಮ ಚಟುವಟಿಕೆಯನ್ನು ನಡೆಸುತ್ತಿದ್ದಾನೆ ಎಂದರೆ ಅವನು ಸಮಾನ್ಯ ನಾಗಿರಲೂ ಸಾಧ್ಯವೇ ಇಲ್ಲ, ಅವನ ಹಿಂದೆ ಯಾರಾರಿದ್ದಾರೆ ಮತ್ತು ಅವನ ಮೂಲ ಯಾವುದು ಅಲ್ಲದೆ ಅವನು ಭಾರತೀಯನೇ ಅಥವಾ ಬೇರೆ ದೇಶದವನೇ ಎನ್ನುವ ಅನುಮಾನ ಹುಟ್ಟು ಹಾಕಿದೆ ಎಂದರು.ಮರಳಿನ ಪ್ರತಿಯೊಂದು ಕೇಂದ್ರದಲ್ಲಿ ತನ್ನ ವ್ಯಕ್ತಿಯನ್ನಿಟ್ಟು ನಿಯಂತ್ರಿಸುವ ಮಟ್ಟದಲ್ಲಿ ತನ್ನ ಜಾಲವನ್ನು ಬೆಳಸಿಕೊಂಡಿದ್ದಾನೆ ಎಂದರೆ ಇವನ ಹಿಂದೆ ಯಾರೋ ಉನ್ನತ ಮಟ್ಟದ ವ್ಯಕ್ತಿಗಳು ಬೆಂಬಲ ವಿಲ್ಲದೆ ಸಾಧ್ಯವಿಲ್ಲ. ಈ ರೀತಿಯಲ್ಲಿ ಕತ್ತಲಲ್ಲಿ ಕುಳಿತು ಕೊಂಡು ಈ ಅಕ್ರಮ ಚಟುವಟಿಕೆಯನ್ನು ನಿಯಂತ್ರಣ ಮಾಡುತ್ತಿರುವ ಈ ವ್ಯಕ್ತಿಯನ್ನು ಕೂಡಲೇ ಬಂದಿಸಬೇಕು ಎಂದು ಒತ್ತಾಯಿಸಿದರು.ಬಡವರಿಗೆ ನಿವೇಶನ ನೀಡುತ್ತೇನೆ ಎಂದು ಸುಳ್ಳು ಭರವಸೆಯನ್ನು ನೀಡಿ ಹಣ ಮಾಡಿಕೊಂಡ ವ್ಯಕ್ತಿಯಿಂದ ನಾನೇನು ಕಲಿಯ ಬೇಕಾಗಿಲ್ಲ, ಶಾಸಕ ಎಸ್.ರಾಮಪ್ಪ ನನ್ನ ಮೇಲೆ ಆರೋಪ ಮಾಡುವುದಕ್ಕಿಂತ ಮುಂಚೆ ಬಡವರಿಗೆ ನಿವೇಶನ ನೀಡುವ ಬದ್ದತೆಯನ್ನು ಮೊದಲು ತೋರಿಸಲಿ ಎಂದು ಸಾವಲು ಹಾಕಿದರು.ದರ್ಗಾದ ನಿವೇಶವನ್ನು ಉಳಿಸಲು ಮೂಲ ಸರ್ವೇಯನ್ನೇ ಬದಲಿಸಿ ಸರ್ಕಾರ ಜಾಗದಲ್ಲಿನ ಗುಡ್ಡವನ್ನು ಅಗೆದು ರಾತ್ರೋರಾತ್ರಿ ಮಣ್ಣನ್ನು ಮಾರಾಟ ಮಾಡಿದವರಿಂದ ನಾವೇನು ನಿರೀಕ್ಷಿಸಲು ಸಾಧ್ಯ ಎಂದ ಅವರು ಕಾನೂನಾತ್ಮಕವಾಗಿ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಿ ಎನ್ನುವುದೇ ನಮ್ಮ ಆಶಯವಾಗಿದೆ. ಇದನ್ನೆ ಅವರು ಅಡ್ಡಿ ಪಡಿಸುತ್ತಾರೆ ಎಂದರೆ ಹೇಗೆ ಎಂದರು.ಶಿವಮೊಗ್ಗ ರಸ್ತೆಯಲ್ಲಿರುವ ರಾಜಕಾಲುವೆ ಮೇಲೆ ಬೀದಿಬದಿ ವ್ಯಾಪಾರಸ್ಥರಿಗೆ ಮಳಿಗೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ತಡೆಗೊಡೆಯನ್ನು ನಿರ್ಮಿಸಿದ್ದಾರೆ. ಆದರೆ ಈ ಯೊಜನೆಯಲ್ಲಿ ಸಂಪೂರ್ಣವಾಗಿ ಅವೈಜ್ಞಾನಿಕ ಹಾಗೂ ದೂರ ದೃ಼ಷ್ಠಿಯ ಕೊರತೆ ಎದ್ದು ಕಾಣುತ್ತದೆ.ಬಿಜೆಪಿ ಸರ್ಕಾರವು ತಾಲೂಕಿನ ಅಭಿವೃದ್ದಿಗಾಗಿ ಬಿಡುಗಡೆ ಮಾಡಿದ್ದ ಅನುದಾನವನ್ನು ಹಿಂಪಡೆಯುವ ಮೂಲಕ ಅಭಿವೃದ್ದಿಗೆ ಕುಂಠಿತವಾಗಿದೆ ಎಂದು ಶಾಸಕರು ಆರೋಪಿಸುತ್ತಾರೆ. ಆದರೆ ಸರ್ಕಾರವು ಬಳಕೆಯಾಗದ ಅನುದಾನವನ್ನು ಮಾತ್ರ ವಾಪಸ್ಸು ಪಡೆದಿದೆ ಇದರ ಬಗ್ಗೆ ಜ್ಞಾನವಿಲ್ಲದೆ ವಿನಾಕಾರಣ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು. ಕೋವಿಡ್ ರೋಗಣುವಿನಿಂದ ವಿಶ್ವವೇ ತಲ್ಲಣ್ಣವಾಗಿದ್ದು ಇದರ ನಿಯಂತ್ರಣಕ್ಕಾಗಿ ರಾಷ್ಟç, ರಾಜ್ಯಗಳು ಶ್ರಮಿಸುತ್ತಿವೆ. ಇದರ ನಿರ್ವಹಣೆ ಕಾರ್ಯಕ್ಕೆ ಹಣ ನಿಯೋಜನೆ ಮಾಡುತ್ತಿರುವುದುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿರುವುದು ಸತ್ಯ. ಕಾರಣ ಜನರು ಜೀವನ್ಮರಣದ ನಡುವೆ ಹೋರಾಡುತ್ತಿರುವಾಗ ಸರ್ಕಾರ ಜನರ ಜೀವದ ರಕ್ಷಣೆ ಮಾಡಬೇಕಾಗುತ್ತದೆ. ಆದ್ದರಿಂದ ಶಾಸಕರು ಇದನ್ನ ಅರಿತು ಮಾತನಾಡಬೇಕು ಎಂದರು. ನನ್ನ ಅವದಿಯಲ್ಲಿ ಆದಷ್ಟು ಅಭಿವೃದ್ಧಿ ಕೆಲಸವಾಗಿಲ್ಲ ಇದರಿಂದ ಭ್ರಮ ನಿರಸರಾಗಿರುವ ಶಾಸಕರು ನಾನು ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಅಡ್ಡಿ ಪಡಿಸುತ್ತಿದ್ದೇನೆ ಎಂದು ಹೇಳುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾನೇಂದೂ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.