ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ‌ಸಲ್ಲದು : ಶರಣಬಸಪ್ಪಗೌಡ ದರ್ಶನಾಪೂರ

ಕೆಂಭಾವಿ:ಜ.12: ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೆಂಭಾವಿ ಪಟ್ಟಣವನ್ನು ದತ್ತು‌ತಗೆದುಕೊಳ್ಳತ್ತೆನೆ ಎಂದು ಹೇಳಿದ್ದ ಸಿಎಂ ಬಿಎಸ್ ವೈ ಆಡಳಿತಕ್ಕೆ‌ ಬಂದಾಗ ಕೊಟ್ಟ ಮಾತು ಮರೆತಂತಿದೆ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ತಾರತಮ್ಯ ಸಲ್ಲದು ಎಂದು ಶಾಸಕ‌ ಶರಣಬಸಪ್ಪಗೌಡ ದರ್ಶನಾಪೂರ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದರು ಸೋಮವಾರ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದ‌ ಉದ್ಘಾಟನಾಗೆ‌ ಆಗಮಿಸಿದ ಸಂದರ್ಭದಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಸರ್ಕಾರ ಅನುದಾನ‌ ಬಿಡುಗಡೆಯಲ್ಲಿ‌ ದ್ವಂದ್ವ ನೀತಿ ಅನುಸರಿಸುತ್ತಿದೆ ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ‌ ನೀಡುತ್ತಿದ್ದಾರೆ ಅನ್ಯ ಪಕ್ಷದ ಶಾಸಕರನ್ನು ಕಡಗಣನೆ‌ ಮಾಡುತ್ತಿದ್ದು ಇದು ಅನ್ಯಾಯದ ಪರಮಾವಧಿಯಾಗಿದೆ ಈ ಸರ್ಕಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಇದನ್ನು ಕಂಡು ಕಾಣದಂತಿರುವ ಸರ್ಕಾರ ಗಾಢ ನಿದ್ರೆಯಲ್ಲಿದೆ ಎಂದು ಆರೋಪಿಸಿದರು