ಅಭಿವೃದ್ಧಿ ಗೆ ಸ್ಪಂದಿಸದ ಮುಖ್ಯಾಧಿಕಾರಿ ; ವರ್ಗಾವಣೆಗೆ ಒತ್ತಾಯ

ಕುರುಗೋಡು.ನ.22 ಸಮೀಪದ ಕುಡಿತಿನಿ ಪಟ್ಟಣಪಂಚಾಯಿತಿ ಸರ್ವತೋಮುಖ ಅಭಿವ್ರುದ್ದಿಗೆ ಸ್ಪಂದಿಸದೇ ಇರುವ ಮುಖ್ಯಾಧಿಕಾರಿಗಳನ್ನು ಕೂಡಲೇ ವರ್ಗಾವಣೆಮಾಡಬೇಕೆಂದು ಕುಡಿತಿನಿ ಪಟ್ಟಣಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ ಒತ್ತಾಯಿಸಿದರು.
ಅವರು ಶನಿವಾರ ಸಮೀಪದ ಕುಡಿತಿನಿ ಪಟ್ಟಣಪಂಚಾಯಿತಿ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಡಿತಿನಿ ಪಟ್ಟಣ ಪಂಚಾಯಿತಿವ್ಯಾಪ್ತಿಯಲ್ಲಿ ಒಟ್ಟಾರೆ 19 ವಾರ್ಡುಗಳಿವೆ. ಇಂಥಹ ದೊಡ್ಡ ಪಟ್ಟಣಪಂಚಾಯಿತಿಯಲ್ಲಿ 37 ಮಂದಿ ಪೌರಕಾರ್ಮಿಕ ಅವಶ್ಯಕತೆ ಇರುವ ಜಾಗದಲ್ಲಿ ಬರೀ 21 ಪೌರಕಾರ್ಮಿಕರು ಕೆಲಸಮಾಡಲು ಕಷ್ಟಕರವಾಗಿದೆ. ಆದ್ದರಿಂದ ಕುಡಿತಿನಿ ಪ.ಪಂಚಾಯಿತಿಗೆ ಇನ್ನೂ 15 ಜನಕಾರ್ಮಿಕರ ಕೊರತೆ ಇದೆ. ಅದರಲ್ಲೂ ಒಬ್ಬ ಕಛೇರಿಯಲ್ಲಿ, ಮತ್ತೊಬ್ಬರಿಗೆ ಗಾಯಗಳಾಗಿವೆ. ಉಳಿದ 19 ಜನ ಕಾರ್ಮಿಕರು ಪಟ್ಟಣದ ಸ್ವಚ್ಚತೆ, ಕಸವಿಲೇವಾರಿ, ನೀರುಪೂರೈಕೆ ಮಾಡಲು ಹೇಗೆ ಸಾದ್ಯ ಎಂದು ಪ್ರಶ್ನಿಸಿದರು? ಆದ್ದರಿಂದ ಬಾಕಿಇರುವ ಪೌರಕಾರ್ಮಿಕರನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ತೆಗೆದುಕೊಳ್ಳೋಣ ಎಂದು ಹೇಳಿದರೆ, ಅದಕ್ಕೆ ಮುಖ್ಯಾಧಿಖಾರಿ ಅವಶ್ಯಕ ಇರುವ ಕಾರ್ಮಿಕರನ್ನು ತೆಗೆದುಕೊಳ್ಳಲಿಕ್ಕೆ ಅವಕಾಶವಿಲ್ಲ ಎಂದು ನಿರ್ಲಕ್ಷದಿಂದ ಉತ್ತರಿಸುತ್ತಾರೆ. ಆದ್ದರಿಂದ ಪಟ್ಟಣದ ಅಭಿವ್ರುದ್ದಿಗೆ ಸ್ಪಂದಿಸುವ ಮುಖ್ಯಾಧಿಕಾರಿಗಳು ನಮಗೆ ಬೇಕು. ಈರೀತಿ ನಿರ್ಲಕ್ಷ, ಬೇಜಾಬ್ದಾರಿ ಹೇಳಿಕೆ ಕೊಡುವ ಮುಖ್ಯಾಧಿಕಾರಿಗಳು ಬೇಡ, ಆದ್ದರಿಂದ ಇಂತಹ ಮುಖ್ಯಾಧಿಕಾರಿಗಳನ್ನು ಕೂಡಲೇ ವರ್ಗಾವಣೆಮಾಡಿ, ಅಭಿವ್ರುದ್ದಿ, ಸ್ವಚ್ಚತೆಗೆ ಒತ್ತುನೀಡುವ ಮುಖ್ಯಾಧಿಕಾರಿಗಳನ್ನು ನಿಯೋಜನೆಮಾಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪ.ಪಂಚಾಯಿತಿ ಸದಸ್ಯ ಜಿಎಸ್.ವೆಂಕಟರಮಣಬಾಬು ಮಾತನಾಡಿ, ಅಬಿವ್ರುದ್ದಿಗೆ ಹೆಚ್ಚು ಮಹತ್ವನೀಡಿ ಎಂದು ಅಲವುಬಾರಿ ಎಲ್ಲರೂ ಅವರಿಗೆ ಹೇಳಿದರೂ, ಮುಖ್ಯಾಧಿಕಾರಿ ಸರಿಯಾಗಿ ಸ್ವಂದಿಸುತ್ತಿಲ್ಲ ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಪಟ್ಟಣದಪಂಚಾಯಿತಿ ಸದಸ್ಯ ಸಿಡಿ.ದುಗ್ಗೆಪ್ಪ, ಲೆನಿನ್,ಜಯಕರ್ನಾಟಕ ಸಂಘಟನೆಯ ಅದ್ಯಕ್ಷ ಐ.ಲೋಕೇಶ್, ಟಿ.ಪೊಂಪಾಪತಿ, ಉಪ್ಪಾರುವೆಂಕಟೇಶ್ ಇದ್ದರು