ಅಭಿವೃದ್ಧಿ ಕಾರ್ಯ ಮುಂದಿಟ್ಟು ವರ್ತೂರು ಮತಯಾಚನೆ

ಕೋಲಾರ, ಮೇ 2:ನಾನು ಅಧಿಕಾರದಲ್ಲಿದ್ದಾಗ ಈ ಭಾಗಕ್ಕೆ ಉತ್ತಮ ರಸ್ತೆಗಳನ್ನು ಕಲ್ಪಿಸಿ ಕೊಟ್ಟಿದ್ದೇವೆ ಮಳೆ ನೀರು ಶೇಖರಣೆಗೆ ದೊಡ್ಡ ದೊಡ್ಡ ಚೆಕ್ ಡ್ಯಾಮ್ ನಿರ್ಮಿಸಿದ್ದೇನೆ ಇವುಗಳ ನಿರ್ಮಾಣದಿಂದ ಈ ಭಾಗದ ರೈತರಿಗೆ ಉಪಯೋಗವಾಗುತ್ತಿದೆ ಬಿಜೆಪಿ ಪಕ್ಷಕ್ಕೆ ನಾನು ಸೇರ್ಪಡೆಗೊಂಡ ಮೇಲೆ ಈ ಭಾಗದ ಹಳ್ಳಿಗಳಲ್ಲಿ ಸಿಸಿ ರಸ್ತೆಗಳು ಕೆಲಸ ನಡೆಯುತ್ತಿದೆ.ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ ತಿಳಿಸಿದರು
ತಾಲೂಕಿನ ವೇಮಗಲ್ ಹೋಬಳಿ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೇವರಹಳ್ಳಿ – ಇರಗಸಂದ್ರ ಗ್ರಾಮದ ೨೦ಕ್ಕೂ ಹೆಚ್ಚು ಯುವಕರು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿ ಮದ್ದೇರಿ ಗ್ರಾಮ ಪಂಚಾಯಿತಿಯ ಹಳ್ಳಿಗಳು ತೀರ ಹಿಂದುಳಿದಿದ್ದು ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದೇನೆ ಎಂದರು,
ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ ನಾನು ಶಾಸಕನಾದ ಕ್ಷಣವೇ ಈ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಿಸುತ್ತೇನೆ ನಾನು ಎಂದು ದ್ವೇಷ ರಾಜಕಾರಣ ಮಾಡಿದವನಲ್ಲ ನಾನು ಈ ಭಾಗದಲ್ಲಿ ಕೆಲವರನ್ನು ರಾಜಕಾರಣದಲ್ಲಿ ಬೆಳೆಸಿದೆ ಅವರು ತಿಂದ ಮನೆಗೆ ದ್ರೋಹ ಬಗೆದು ಹೋದರು ಆದರೆ ಕಾರ್ಯಕರ್ತರು ಮಾತ್ರ ನನ್ನ ಹಿಂದೆ ಇದ್ದಾರೆ ಅದಕ್ಕೆ ನಾನು ನಿಮಗೆ ಚಿರುಋಣಿಯಾಗಿ ಇರುತ್ತೇನೆ ಎಂದು ಹೇಳಿದರು
ಬೆಗ್ಲಿ ಸೂರ್ಯ ಪ್ರಕಾಶ್, ಮದ್ದೇರಿ ತಾಲೂಕು ಪಂಚಾಯಿತಿ ಸದಸ್ಯರಾದ ಮಂಜುಳಾ ರಾಜಣ್ಣ, ಕದರಿಪುರ ನಾರಾಯಣಪ್ಪ, ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರಾದ,ರಮೇಶ್,ರಾಮ್ ಮೂರ್ತಿ,ಮುನಿರಾಜು, ವೆಂಕಟೇಶ್, ಕುಮಾರ್, ರವಿಕುಮಾರ್, ಈರಪ್ಪ, ದೇವರಾಜ್, ಗಂಗಾಧರ್, ಶಿವಣ್ಣ, ಶ್ರೀನಿವಾಸ್, ಸುರೇಶ್, ಹಾಗೂ ಇದ್ದರು.