
ಭಾಲ್ಕಿ:ಮಾ.15: ತಾಲೂಕಿನ ವಿವಿಧೆಡೆ ರೈತ ಸಮುದಾಯ ಭವನ ಮತ್ತು ಸಿಸಿ ರಸ್ತೆ ಮತ್ತು ಚರಂಡಿ ಸೇರಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಕರ್ನಾಟಕ ನೀರಾವರಿ ನಿಗಮದ ವತಿಯಿಂದ 4.61 ಕೋಟಿ ರೂ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮರೂರ ಗ್ರಾಮದ ರೈತ ಸಮುದಾಯ ಭವನ 50 ಲಕ್ಷ ರೂ, ಗೊರನಾಳ ರೈತ ಸಮುದಾಯ ಭವನ 50 ಲಕ್ಷ ರೂ, ಸಾಯಿಗಾಂವ ರೈತ ಸಮುದಾಯ ಭವನ 50 ಲಕ್ಷ ರೂ, ವಾಂಜರಖೇಡ ರೈತ ಸಮುದಾಯ ಭವನ 50 ಲಕ್ಷ ರೂ, ಹಲ್ಸಿ ತೂಗಾಂವ ರೈತ ಸಮುದಾಯ ಭವನ 50 ಲಕ್ಷ ರೂ ಹಾಗೂ ಮುರಾಳ, ದಾಡಗಿ, ಅಂಬೆಸಾಂಗವಿ ಗ್ರಾಮದಲ್ಲಿ ತಲಾ 25 ಲಕ್ಷ ರೂ, ಕಾರಂಜಾ ಆರ್ ಬಿಸಿ ರಸ್ತೆ ಸುಧಾರಣೆಗೆ 36 ಲಕ್ಷ ರೂ ಮತ್ತು ದಾಡಗಿ-ರಾಮತೀರ್ಥ ರಸ್ತೆ ನಿರ್ಮಾಣಕ್ಕೆ 1 ಕೋಟಿ ರೂ ಅನುದಾನ ಒದಗಿಸಲಾಗಿದೆ.
ಎಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದು ಪ್ರಗತಿಯಲ್ಲಿವೆ. ಪ್ರಕ್ರಿಯೆ ಪೂರ್ಣಗೊಳ್ಳುತ್ತಲೇ ಕಾಮಗಾರಿ ಪ್ರಾರಂಭವಾಗಲಿವೆ ಎಂದು ತಿಳಿಸಿದರು.