ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಚನ್ನಮ್ಮನ ಕಿತ್ತೂರ- 26: ಗಡಾದ ಮರಡಿಯ ಕಿತ್ತೂರ ಪ್ರಾಧಿಕಾರದಿಂದ 1.80 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮತ್ತು ಐತಿಹಾಸಿಕ ಧ್ವಜಸ್ಥಂಭ ಕಾಮಗಾರಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ಭೂಮಿ ಪೂಜೆ ನೆರೆವೇರಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದಡಿಯಲ್ಲಿ ಐತಿಹಾಸಿಕ ಸ್ಥಳ ಗಡಾದ ಮರಡಿಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು. ಮರಡಿಯ ಮೇಲೆ 25ಮೀ. ಎತ್ತರದ ಧ್ವಜಸ್ಥಂಭ ನಿರ್ಮಾಣ, ದ್ವಾರ ಬಾಗಿಲ ನಿರ್ಮಾಣ, ಸಿಸಿ ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಯೆತ್ತಿಕೊಳ್ಳಲಾಗುವುದೆಂದರು.

ಅಭಿವೃದ್ಧಿ ಪ್ರಾಧಿಕಾರದಿಂದ ಹಂತ-ಹಂತವಾಗಿ ಕಾಮಗಾರಗಳನ್ನು ಪ್ರಾರಂಭಿಸಿಲಾಗುವುದು. ಚೌಕಿಮಠದಲ್ಲಿ ಅರಮನೆ ಮತ್ತು ಸಭಾಭವನ ನಿರ್ಮಿಸುವ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭವಾಗುವುದೆಂದರು.
27 ಕೋಟಿ ರೂ. ವೆಚ್ಚದಲ್ಲಿ ಅರಮನೆ ವಸ್ತು ಸಂಗ್ರಹಾಲಯ ನವೀಕರಿಸುವುದು ಮತ್ತು ಕೋಟೆ ಆವರಣದಲ್ಲಿ ಶಿಥಿತಗೊಂಡ ಗೋಡೆ ಸರಿಪಡಿಸುವುದು. ಇದನ್ನು ಸುಂದರ ಪ್ರವಾಸಿ ಸ್ಥಳವನ್ನಾಗಿ ಮಾರ್ಪಡಿಸಲಾಗುವುದು. ಈಗಾಗಲೇ ಪ್ರಾಚ್ಯವಸ್ತು ಇಲಾಖೆ ಕಾಮಗಾರಿಗೆ ಸಿದ್ದತೆ ನಡೆಸಿದೆ ಎಂದು ಹೇಳಿದರು.
ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳರಾಜಯೊಗೀಂದ್ರ ಸ್ವಾಮಿಜೀ, ನಿಚ್ಚಣಕಿ ಮಡಿವಾಳ ಮಠದ ಪಂಚಾಕ್ಷರಿ ಸ್ವಾಮಿಜೀ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಸೋಮಲಿಂಗಪ್ಪ ಹಲಗಿ, ಅಭಿಯಂತರ ಪ್ರವೀಣ ಹುಲಜಿ, ಸಿಪಿಆಯ್ ಮಹಾಂತೇಶ ಹೊಸಪೇಟ, ಇಂಜೀನಿಯರ್ಗಳು ಜಿ.ಎಸ್.ಪಾಟೀಲ್, ಸುಧಾಕರ ಬಾಗೇವಾಡಿ, ಮುಖಂಡರುಗಳಾದ ಉಳವಪ್ಪ ಉಳ್ಳಾಗಡ್ಡಿ, ಚನ್ನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಚಿನ್ನಪ್ಪ ಮುತ್ನಾಳ, ಜಗದೀಶ ವಸ್ತ್ರದ, ಸಂದೀಪ ದೇಶಪಾಂಡೆ, ಅಪ್ಪಣ್ಣಾ ಪಾಗಾದ, ನ್ಯಾಯವಾದಿ ಜಗದೀಶ ಬಿಕ್ಕಣ್ಣವರ, ಬಸನಗೌಡ ಶಿದ್ರಾಮನಿ, ಸರಸ್ವತಿ ಹೈಬತ್ತಿ, ಉಮಾದೇವಿ ಬಿಕ್ಕಣ್ಣವರ, ಪ.ಪಂ. ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.