ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹುಬ್ಬಳ್ಳಿ,ಮಾ23: ಬಡವರ ಶ್ರೇಯೋಭಿವೃದ್ಧಿಗಾಗಿ ಕಳೆದ 10ವರ್ಷದಲ್ಲಿ ಕ್ಷೇತ್ರದಾದ್ಯಂತ ವಿವಿಧ ಬಡಾವಣೆಗಳಲ್ಲಿ 38.62 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಅವರು, ವಾರ್ಡ್ ಸಂಖ್ಯೆ 81ರಲ್ಲಿ ಬರುವ ಸೆಟ್ಲಮೆಂಟ್ ಖಂಜರ್‍ಭಾಟ್ ಸಮಾಜದ ಶ್ರೀಕೃಷ್ಣ ಮಂದಿರದ 50ಲಕ್ಷ ರೂ. ವೆಚ್ಚದ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿಗೆ ಮತ್ತು ಸೆಟ್ಲಮೆಂಟ್ ಮುಖ್ಯರಸ್ತೆಯಲ್ಲಿ ಬಸ್ ತಂಗುದಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮದುವೆ, ನಿಶ್ಚಿತಾರ್ಥ ಸಭೆ ಸಮಾರಂಭಗಳಿಗೆ ಸಭಾಭವನವಕ್ಕಾಗಿ ಲಕ್ಷಾಂತರ ರೂ. ವ್ಯಯಿಸುವ ಅನಿವಾರ್ಯತೆ ಎದುರಾಗಿದೆ. ಬಡವರು, ಮಧ್ಯವ ವರ್ಗದ ಜನರೇ ಹೆಚ್ಚಿರುವ ಪೂರ್ವ ಕ್ಷೇತ್ರದಲ್ಲಿ ಜನರು ಅನುಕೂಲಕ್ಕಾಗಿ ಕ್ಷೇತ್ರದ ಹತ್ತಾರು ಬಡಾವಣೆಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಆರ್ಥಿಕ ಹೊರೆ ಇಳಿಸಲಾಗಿದೆ ಎಂದು ಹೇಳಿದರು.
ಇಲ್ಲಿನ ಸೆಟ್ಲಮೆಂಟ್ ಗಂಗಾಧರ ನಗರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಮುದಾಯವನ್ನು ನಿರ್ಮಾಣ ಮಾಡಲಾಗಿದ್ದು, ಜಿಲ್ಲೆಯಲ್ಲೇ ಮಾದರಿ ಭವನವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಕಾಲೋನಿ ಬಡಾವಣೆಗಳಲ್ಲೂ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರು, ಪಾಲಿಕೆ ಸದಸ್ಯರಾದ ಮಂಜುಳಾ ಶಾಮ ಜಾಧವ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಪಂಪಣ್ಣ ಅಂಬಿಗೇರ, ಶರೀಫ್ ಅದ್ವಾನಿ, ಕಾಂಗ್ರೆಸ್ ಮುಖಂಡರಾದ ಶಾಮ ಜಾಧವ, ಪರಶುರಾಮ ಕೊರವರ, ಪಾಲಿಕೆ ಮಾಜಿ ಸದಸ್ಯರಾದ ಯಮನೂರು ಗುಡಿಹಾಳ, ಮುಖಂಡರಾದ ಸುಭಾನಿ ಮಲ್ಲಾಡ, ಸಿದ್ದು ನವಲೆ, ರಾಜೇಶ ಕೊರವರ, ರಾಜೇಶ ಕೊರವರ, ರವಿ ಬಿಜವಾಡ ಹಾಗೂ ಶಾಮ ಜಾಧವ ಗೆಳೆಯರ ಬಳಗ ಸೇರಿದಂತೆ ಮೊದಲಾದವರು ಇದ್ದರು.