ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ


ಗದಗ,ಮಾ.8: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ಪ್ರವಾಹದಂತಹ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಸರ್ಕಾರಕ್ಕೆ ಈ ಭಾರಿ ಪ್ರವಾಹ, ಕೋವಿಡ್ ಮಹಾಮಾರಿಹಂತಹ ಅನೇಕ ಸಂಕಷ್ಟುಗಳನ್ನು ಎದುರಿಸಿದ್ದರು ಕೂಡ ನರಗುಂದ ಮತಕ್ಷೇತ್ರದಲ್ಲಿ ಅತೀಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ನಮ್ಮ ಸರ್ಕಾರ ಮತ್ತ ನಾನು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ನನ್ನ ಗೆಲುವಿನ ಶ್ರೀರಕ್ಷೆಯಾಗಲಿವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಹೊಂಬಳ ಗ್ರಾಮದಲ್ಲಿ ವಿವಿಧ ಇಲಾಖೆಗಳ ಒಟ್ಟು 1130.30 ಲಕ್ಷ ರೂ, ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಯಾಗಿ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜತೆಗೆ ಜಿಲ್ಲೆಯಲ್ಲಿರುವ ರಾಷ್ಟ್ರೀಯ, ರಾಜ್ಯ ಸೇರಿದಂತೆ ಪ್ರಮುಖ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ರಾಜ್ಯ ಸರಕಾರದಿಂದ ಮೂಡಿಬರುತ್ತಿರುವ ವಿವಿಧ ಜನಪರ ಯೋಜನೆಗಳ ಕಾರ್ಯಗಳು ಕ್ಷೇತ್ರದ ಕಟ್ಟಕಡೆಯ ಮನುಷ್ಯನಿಗೂ ತಲುಪಬೇಕು. ಅಭಿವದ್ಧಿಯ ದಷ್ಟಿಯಿಂದ ಆಡಳಿತ ಯಂತ್ರ ಜನತೆಯ ಸನಿಹದಲ್ಲಿ ಕೆಲಸ ಮಾಡುವಂತೆ ನಿರ್ಧರಿಸಿರುವುದರಿಂದ ಮತಕ್ಷೇತ್ರದಲ್ಲಿ ಅಭಿವದ್ಧಿಯನ್ನು ಕಾಣಬಹುದು ಎಂದರು.
ಕ್ಷೇತ್ರದಲ್ಲಿ ಮೊಟ್ಟ ಮೊದಲು ಜನತೆಗೆ ಅವಶ್ಯಕತೆಗನುಗುಣವಾಗಿ ಕುಡಿಯುವನೀರು, ರಸ್ತೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನುಮಾಡಿರುವೆ ಎಂದರು.
ಈವೇಳೆ ತೆರದ ವಾಹನದ ಮೂಲಕ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭ, ಡೊಳ್ಳು ಕುಣಿತ ಪಾಲ್ಗೊಂಡಿದ್ದವು.
ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಬಳ್ಳಾರಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸಿದ್ದಣ್ಣ ಪಲ್ಲೇದ, ವಸಂತ ಮೇಟಿ, ಉಮೇಶಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.