ಅಭಿವೃದ್ಧಿ ಕಡೆ ಹೆಚ್ಚು ಗಮನಹರಿಸಿ-ನಾರಾಯಣಸ್ವಾಮಿ

ವಿಜಯಪುರ, ನ.೧೪-ಪಕ್ಷದ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮರೆತು ತಮ್ಮ ತಮ್ಮ ವಾರ್ಡಗಳ ಅಭಿವೃದ್ದಿಯ ಕೆಲಸದ ಕಡೆ ಹೆಚ್ಚು ಗಮನಹರಿಸಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ೧೫ನೇ ವಾರ್ಡಿನ ಇತಿಹಾಸ ಪ್ರಸಿದ್ದ ಸತ್ಯಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ಚಕ್‌ನ್ನು ವಿತರಿಸಿ ಅವಶ್ಯಕತೆಗನುಗುಣವಾಗಿ ಹೆಚ್ಚಿನ ಸಹಾಯ ನೀಡುವುದಾಗಿ ತಿಳಿಸಿ ಮಾತನಾಡಿದರು.
ಕಾರ್ಯಕರ್ತರು ತಮ್ಮ ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಬೇಕು ಪಕ್ಷ ಯಾರದು ಅಲ್ಲ ಪಕ್ಷವನ್ನು ನಾವು ಬೆಳೆಸಿದರೆ ನಮ್ಮನ್ನು ಅದು ಬೆಳೆಸುತ್ತದೆ . ಕಾರ್ಯಕರ್ತರು ಮುಂಬರುವ ಪುರಸಭಾ ಚುನಾವಣೆಗಳ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಇದುವರೆಗೂ ಶಾಸಕರ ಅನುಧಾನದಲ್ಲಿ ದೊರೆಯುತ್ತಿರುವ ಸರಕಾರದ ಹಣವನ್ನು ವಿಜಯಪುರ ಹಾಗೂ ದೇವನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಯಾವುದೇ ತಾರತಮ್ಯ ಎಣಿಸದೇ ಕಾಮಗಾರಿ ಕೆಲಸಗಳಿಗೆ ಹಣ ನೀಡಲಾಗುತ್ತಿದೆ ಎಂದರು.
ಈಗಾಗಲೇ ಶಾಸಕರ ನಿಧಿಯಲ್ಲಿ ಪಟ್ಟಣದ ಶಾಲಾ ಕಾಲೇಜುಗಳ ಕಟ್ಟಡಗಳ ನಿರ್ಮಾಣ, ಗುಡುವನಹಳ್ಳಿ ಬಳಿ ಸಾರ್ವಜನಿಕ ಸ್ಮಶಾನಕ್ಕಾಗಿ ೩ ಎಕರೆ ಜಮೀನನ್ನು ಸರಕಾರದಿಂದ ಮಂಜೂರು ಮಾಡಿಸಲಾಗಿದೆ. ಅಲ್ಪಸಂಖ್ಯಾಂತರ ಅಭಿವೃದ್ದಿಗಾಗಿ ಖಬರಸ್ತಾನ್‌ಗೆ ಕಾಂಪೌಂಡ ನಿರ್ಮಾಣ ಮತ್ತಿತರೆ ಕಟ್ಟಡ, ಅಂಗನವಾಡಿ ಕಟ್ಟಡ, ಕೆ.ಎಸ್.ಆರ್.ಟಿ.ಸಿ ಡಿಪೋ ಕಾಂಪೌಂಡ ನಿರ್ಮಾಣ, ದೇವನಹಳ್ಳಿ_ಕೋಲಾರ ಬೈಪಾಸ್ ರಸ್ತೆ ನಿರ್ಮಾಣ, ವಿಜಯಪುರ-ಶಿಡ್ಲಘಟ್ಟ ರಸ್ತೆಯ ವಿಸ್ತರಣೆ ಅಭಿವೃದ್ದಿ ಕಾಮಾಗಾರಿ, ಶಾಸಕರ ನಿಧಿ ಮಾತ್ರವಲ್ಲದೇ ಹಲವಾರು ದೇವಾಲಯಗಳು ಹಾಗೂ ಸಂಘ ಸಂಸ್ಥೆಗಳ ಅಭಿವೃದ್ದಿಗಾಗಿ ವಯಕ್ತಿಕವಾಗಿಯೂ ಹಣ ಸಹಾಯ ನೀಡಲಾಗಿದ್ದು, ಟೌನ್ ಕಾರ್ಯಕರ್ತರು ನಾನು ಮಾಡಿದ ಯೋಜನೆಗಳು ಜನರಿಗೆ ತಿಳಿಸುವಂತಹ ಕೆಲಸ ಮಾಡುವುದರೊಂದಿಗೆ ಮುಂದಿನ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೆಚ್ಚಿನ ಸಂಖ್ಯೆಯ ಸದಸ್ಯರಗಳನ್ನು ಗೆಲ್ಲಿಸಿಕೊಳ್ಳುವಂತಹ ಕೆಲಸವಾಗಬೇಕು ಎಂದರು.
ಜೆ.ಡಿ.ಎಸ್.ಟೌನ್ ಅಧ್ಯಕ್ಷ ಭಾಸ್ಕರ್, ಮಾಜಿ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಕಾರ್ಯದರ್ಶಿ ಬುಜೇಂದ್ರ, ಮುಖಂಡರಾದ ನಂದಗೋಕುಲ ಶಾಮಣ್ಣ, ಮುನಿರಾಜು, ರಿಯಾಜ್, ಗುರುಪ್ಪನ ಮಠ ನಾರಾಯಣಸ್ವಾಮಿ, ಪ್ರಕಾಶ್, ಎಚ್.ಎಂ.ಕೃಷ್ಣಪ್ಪ, ಮುನಿವೀರಣ್ಣ, ಮಹಬೂಬ್ ಸಾಬ್, ಚಂದ್ರಕಲಾ ವುಡ್ ಕೃಷ್ಣಪ್ಪ, ಇತರರು ಹಾಜರಿದ್ದರು.