
ಮಾಲೂರು,ಮಾ೧೭:ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ದೇಶವನ್ನು ಆಳಿದ ಯಾವುದೇ ಸರ್ಕಾರಗಳು ದಲಿತರು ಹಿಂದುಳಿದ, ಅಲ್ಪ ಸಂಖ್ಯಾತರ ಅಭಿವೃದ್ಧಿ ಮಾಡಲಿಲ್ಲ ಬದಲಿಗೆ ದಮಿನಿತರ ಮೇಲೆ ದೌರ್ಜನ್ಯಗಳೇ ಹೆಚ್ಚಾಗಿವೆ ಎಂದು ಕರ್ನಾಟಕ ದಲಿತ ಸಂಘಷ ಸಮಿತಿ ತಾಲ್ಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್ ಹೇಳಿದರು.
ಕೋಲಾರದ ಹಳೆ ಬಸ್ ನಿಲ್ದಾಣದಲ್ಲಿ ಕರ್ನಾಟಕ ದಲಿತ ಸಂಘಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಹೋಗಲು ಪಟ್ಟಣದ ಬಸ್ ನಿಲ್ದಾಣದಲ್ಲಿನ ಡಾ:ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವ ಸ್ವಾತಂತ್ರ್ಯದ ನಂತರವು ದೇಶವನ್ನು ಆಳಿದ ಕೇಂದ್ರ ಮತ್ತು ರಾಜ್ಯಸರ್ಕಾರಗಳು, ನಮ್ಮಿಂದ ಮತ ಪಡೆದು ಆಯ್ಕೆಯಾದ ಜನಪ್ರತಿ ನಿಧಿಗಳು ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ. ಗೆದ್ದು ಹೋದ ಮೇಲೆ ದಲಿತ ಹಿಂದುಳಿದ, ಅಲ್ಪ ಸಂಖ್ಯಾತರನ್ನು ಮರೆತು ದಲಿತ ವಿರೋಧ ನೀತಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಇಂದಿನ ಕೇಂದ್ರ ಮತ್ತು ರಾಜ್ಯ ಆಡಳಿತ ಸರ್ಕಾರಗಳು ಸಂವಿಧಾನದಡಿ ಆಯ್ಕೆಯಾದ ಪ್ರತಿನಿಧಿಗಳ ಬೆಂಬಲದಿಂದ ಸಂವಿಧಾನವನ್ನು ತಿರುಚು ಮರಚು ಮಾಡುವ ಕಾರ್ಯಕ್ಕೆ ಕೈ ಹಾಕಲು ಮುಂದಾಗಿದ್ದಾರೆ,
ಸಂವಿಧಾನದ ಮೂಲ ಆಶಯವಾದ ಸಾರ್ವಬೌಮ ಸಮಾಜವಾದಿ ಧರ್ಮನಿರಪೇಕ್ಷ ಪ್ರಜಾಪ್ರಭುತ್ವದ ಸಂರಕ್ಷಣೆ ಹಾಗೂ ಪ್ರಭುದ್ದ ಭಾರತ ನಿರ್ಮಾಣಕ್ಕಾಗಿ ದಲಿತ ಸಂಘ? ಸಮಿತಿಯಿಂದ ಬಹತ್ ಸಮಾವೇಶ ಮಾಡುವುದರ ಮೂಲಕ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ಉತ್ತಮ ನಾಯಕನನ್ನು ಆಯ್ಕೆ ಮಾಡುವಂತೆ ಮತ ದಾನ ಜಾಗೃತಿ ಮೂಡಿಸಲಾಗುವುದು ಎಂದರು. ಇದುವರೆಗೂ ನಮ್ಮಿಂದ ಆಯ್ಕೆಯಾಗಿ ಹೋಗಿ ಅಧಿಕಾರ ನಡೆಸಿದ ಆಡಳಿತ ಪಕ್ಷಗಳು ಮೀಸಲಾತಿ ವಿಚಾರದಲ್ಲಿ, ಸಂವಿಧಾನದ ವಿಚಾರದಲ್ಲಿ ಪಿಟಿಸಿಎಲ್ ಕಾಯಿದೆ ಸೇರಿದಂತೆ ದಲಿತರ ಮೇಲೆ ನಡೆಯುತಿರುವ ಶೋ?ಣೆ, ದಬ್ಬಾಳಿಕೆ, ದೌರ್ಜನ್ಯಗಳನ್ನು ತಿಳಿದು ರಾಜಕೀಯ ಬದಲಾವಣೆ ಬಯಸಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕ ಚವ್ವೆನಹಳ್ಳಿ ವಿಜಿ, ಜಿಲ್ಲಾ ಸಮಿತಿ ಸದಸ್ಯ ಸುಬ್ರಮಣಿ, ಯುವ ಘಟಕದ ಅಧ್ಯಕ್ಷ ಎಸ್.ಎಂ.ಮುರಳಿ, ಸಂಘಟಿಕರಾದ ಬಂಡಟ್ಟಿ ನಾರಾಯಣಸ್ವಾಮಿ, ಮಂಜುನಾಥ್ ನಾಯುಡು, ಶಂಕರ್, ನೀಲಕಂಠ ಅಗ್ರಹಾರ ಶಾಮಣ್ಣ, ಅಂಗ ಶೆಟ್ಟಿಹಳ್ಳಿ ನಾರಾಯಣಸ್ವಾಮಿ, ತಿರುಮಲೇಶ್, ಹೆಚ್.ವೈ.ವೆಂಕಟೇಶಪ್ಪ, ಹಾರೋಹಳ್ಳಿ ಮುನಿರಾಜು, ಗೋಪಿ, ಉಲ್ಲೆರಳ್ಳಿ ಮುನಿರಾಜು, ನಾರಾಯಣಸ್ವಾಮಿ ಇತರರು ಇದ್ದರು.