ಅಭಿವೃದ್ಧಿಯ ಪರ ಸಿಎಂ ಬಜೆಟ್: ಓಂಕಾರ

ಕಲಬುರಗಿ:ಜು.9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಕೂಡಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ) ಅವರು ಬಣ್ಣಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಕೆಕೆಆರ್ ಡಿಬಿಗೆ ಐದು ಸಾವಿರ ರೂಪಾಯಿ ಮೀಸಲಿಡಲಾಗಿದೆ.ಐದು ಗ್ಯಾರಂಟಿ ಘೋಷಣೆ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಆರೋಗ್ಯ ಇಲಾಖೆ ಮೂಲಕ ಹೊಸ ಯೋಜನೆ ಬಂದಿರುವುದು ಜಿಲ್ಲೆಗೆ ಹೊಸ ರೂಪ ಸಿಗಲಿದೆ.ಹೆಚ್ಚು ಆಸ್ಪತ್ರೆ ಬರುವುದರಿಂದ ಆರೋಗ್ಯ ಸೇವೆ ಸುಧಾರಣೆಯಾಗಲಿದೆ.ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಅನುದಾನ ಮೀಸಲಿಡುವ ಮೂಲಕ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರಾದೇಶಿಕವಾಗಿ ನೋಡಿದರು, ಇಲಾಖಾವಾರು ನೋಡಿದರು ಎಲ್ಲಾ ದೃಷ್ಟಿಯಿಂದಲೂ ಬಜೆಟ್ ಅತ್ಯಂತ ಸಮತೋಲಿತವಾಗಿದೆ.ಎಲ್ಲಾ ಜಿಲ್ಲೆಗಳಿಗೂ,ಎಲ್ಲಾ ಇಲಾಖೆಗಳಿಗೂ ಹೇರಳವಾಗಿ ಹಣ ಒದಗಿಸಲಾಗಿದೆ.ಈ ಬಜೆಟ್ ಅನುಷ್ಠಾನದೊಂದಿಗೆ ಮುಂದಿನ ಐದು ವರ್ಷದಲ್ಲಿ ರಾಜ್ಯ ಅತ್ಯಂತ ವೇಗವಾಗಿ,ಸಮೃದ್ಧವಾಗಿ ಬೆಳವಣಿಗೆ ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.