(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ನಗರದ 6ನೇ ವಾರ್ಡ್ ನ ಪಾತ ಕಂದಕಂ ಸ್ಟ್ರೀಟ್, ಲೋಹರ್ ಮೊಹಲ್ಲ , ಹಲಗೆಪ್ಪ ಸ್ಟ್ರೀಟ್ , ವಾಸುದೇವನಾಯ್ಡು ಸ್ರ್ಟೀಟ್ ಗಳಲ್ಲಿ ಇಂದು ಬಿಜೆಪಿಯ ನ್ರ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಅವರು ಚುನಾವಣಾ ಪ್ರಚಾರವನ್ನು ಮನೆ, ಮನೆಗೆ ತೆರಳಿ ಬಿಜೆಪಿಗೆ ತಮ್ಮ ಮತ ನೀಡುಬೇಕು ಎಂದು ಮನವಿ ಮಾಡಿದರು
ಬಿಜೆಪಿ ಸರ್ಕಾರದಿಂದ ಬಳ್ಳಾರಿ ನಗರದಲ್ಲಿ ಆಗಿರುವ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಅಇದ ಅವರು ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಆಗಿದೆ. ಬಿಜೆಪಿಗೆ ಮತ ನೀಡಿ ದೇಶಕ್ಕೆ ಹಿತ ತನ್ನಿ ಎಂದರು.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖ ಮುಖಂಡರಾದ ಕಿಟ್ಟಣ್ಣ, ಕೊನಂಕಿ ತಿಲಕ್, ವೀರಶೇಖರ್ ರೆಡ್ಡಿ, ಶ್ರೀನಿವಾಸ ಮೋತ್ಕರ್, ಮಲ್ಲಿಕಾರ್ಜುನ, ನಾಗರಾಜ್, ಪವನ್, ಜನಾರ್ಧನ, ಉದಯಕುಮಾರ್ ಮೊದಲಾದವರು ಇದ್ದರು.