ಅಭಿವೃದ್ಧಿಯೆಂದರೆ ಮಾಲ್‌ಗಳು, ಹೆದ್ದಾರಿಗಳು ಮಾತ್ರವೇ ಅಲ್ಲ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಎ,17- ಅಭಿವೃದ್ಧಿಯೆಂದರೆ ಮಾಲ್‌ಗಳು, ಹೆದ್ದಾರಿಗಳು, ದೊಡ್ಡ ದೊಡ್ಡ ಮಹಲ್‌ಗಳು ಮಾತ್ರವೇ ಅಲ್ಲ. ಮನುಷ್ಯರು ಅಪೌಷ್ಠಿಕತೆಯಿಲ್ಲದೇ ಆರೋಗ್ಯದಿಂದ  ಶಿಕ್ಷಣವಂತರಾಗಿ, ಸ್ವಂತ ಮನೆ, ಬದುಕು ನಡೆಸಲು ಉದ್ಯೋಗ ಅದಕ್ಕೆ ತಕ್ಕ ವೇತನ,   ನಿವೃತ್ತಿ ನಂತರ ಕನಿಷ್ಠ ಪಿಂಚಣಿಯ ಖಾತ್ರಿಯಿರಬೇಕು.
ಆದರೆ  ಎನ್‌.ಡಿಎ ನೇತೃತ್ವದ ಸರ್ಕಾರ ಸಾಮಾನ್ಯ ಜನತೆ ಮತ್ತು ಕಾರ್ಮಿಕರಿಗೆ ಶಾಸನಬದ್ಧವಾಗಿದ್ದಂತೆ ಕಾನೂನುಗಳನ್ನು ಸುಧಾರಣೆಯ ಹೆಸರಿನಲ್ಲಿ ಬದಲಾಯಿಸಿದೆ. ಆಹಾರ, ಆರೋಗ್ಯ, ಶಿಕ್ಷಣವನ್ನು ಖಾಸಗೀಕರಿಸಿದೆ. ಖಾಯಂ ಉದ್ಯೋಗದ ಬದಲು ಗುತ್ತಿಗೆ ಹೊರ ಗುತ್ತಿಗೆ ಪದ್ಧತಿಯನ್ನು ಖಾಯಂ ಆಗಿಸಿದೆ. ಆದಾಯದ ಖಾತ್ರಿಯಿಲ್ಲದೆ ಸ್ವಯಂ ಉದ್ಯೋಗಗಳು ಹೆಚ್ಚಾಗಿ ಕಾರ್ಮಿಕರು ಮತ್ತು ಜನತೆ ಅತ್ಯಂತ ದಯನೀಯ ಬದುಕಿಗೆ ನೂಕಿದೆ.
ಅದಕ್ಕಾಗಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ ನೇತೃತ್ವದ  ಎನ್ ಡಿ ಎ ಮೈತ್ರಿಕೂಟವನ್ನು ಸೋಲಿಸಬೇಕೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕರೆ ಕೊಡುತ್ತದೆಂದು ಸಿಐಟಿಯುನ ರಾಜ್ಯ ಅಧ್ಯಕ್ಷೆ ಎಸ್‌ವರಲಕ್ಷ್ಮಿ ಹೇಳಿದ್ದಾರೆ.
ಅವರು ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ. ಶ್ರಮಿಕನಿಲ್ಲದ ಸಮಾಜವನ್ನು, ಶ್ರಮಿಕನ ದೈಹಿಕ-ಬೌದ್ಧಿಕ ಶ್ರಮವನ್ನು ಹೊರತುಪಡಿಸಿ ದೇಶದ ಮತ್ತು ವಿಶ್ವದ ಯಾವುದೇ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ.
ಬಂಡವಾಳದ ಲಾಭ ಹೆಚ್ಚು ಮಾಡಲು, ಭಾರತದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಉಪಯೋಗಿಸಿ ಪ್ರತಿರೋಧಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತದೆ. “ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎನ್ನುವ ಇವರು ಕಾಂಗ್ರೆಸ್ ನ  ಬೋಪರ್ಸ್  ಹಗರಣಕ್ಕಿಂತಲೂ 500 ಪಟ್ಟಿನ ಹೆಚ್ಚಿನ ಭ್ರಷ್ಟಾಚಾರ “ಚುನಾವಣಾ ಬಾಂಡ್‌ಗಳ” ಮುಖಾಂತರ ನಡೆಸಿದೆ.  ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನ ಎಂದು ರದ್ದುಗೊಳಿಸಿ ಭೀಮಾರಿ ಹಾಕಿದೆ. ಇದರಿಂದಾಗಿ ಸಾರ್ವಜನಿಕ ವಲಯಗಳ ಖಾಸಗೀಕರಣ, ಮೂಲಸೌಕರ್ಯಗಳ ಒಡೆತನವನ್ನು ಕೆಲವು ಖಾಸಗೀ ಕಂಪನಿಗಳಿಗೆ ಮಾತ್ರ ಕೊಡುವ ಕಾರಣವೇ ಅವರು ಪಕ್ಷಗಳಿಗೆ ಬಾಂಡ್‌ಗಳ ಮುಖಾಂತರ ಕೊಟ್ಟ ದೇಣಿಗೆ ಎಂಬುದು ಸಾಬೀತಾಗಿದೆಂದರು.
ಈ ಸರ್ಕಾರ ಅಧಿಕಾರ ನಡೆಸಲು ಕಾರಣೀಭೂತರಾದ ಮತದಾರರಿಗೆ ಕೊಟ್ಟಿದ್ದು ತೆರಿಗೆ ಹೆಚ್ಚಳ, ಪೆಟ್ರೋಲ್, ಡೀಸೆಲ್, ಗ್ಯಾಸ್ ಅಗತ್ಯ ವಸ್ತುಗಳ ದುಬಾರಿ ಹಾಗೂ ಖಾಯಂ ಕೆಲಸಗಳನ್ನು ಮಂಗಮಾಯ ಮಾಡಿ ಗುತ್ತಿಗೆ-ಹೊರಗುತ್ತಿಗೆಯನ್ನು ಶಾಶ್ವತಗೊಳಿಸಿದ್ದು, ಸಮಾನ ಕನಿಷ್ಠ ವೇತನ ಜಾರಿಗೊಳಿಸುವ ಬದಲಿಗೆ 178 ರೂ. ನೆಲಮಟ್ಟದ ಕೂಲಿ ನಿಗಧಿ ಮಾಡಿದ್ದು, 40 ಕೋಟಿಗೂ ಹೆಚ್ಚಾಗಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ 3 ಲಕ್ಷ ಕೋಟಿ ಹಣ ಕೂಡದೇ ನಿವೃತ್ತಿಯ ನಂತರ ಅಸಹಾಯಕ ಬದುಕಿಗೆ ನೂಕುತ್ತಿರುವುದಾಗಿದೆಂದರು.
 ರಾಜ್ಯದಲ್ಲಿಅಂಗನವಾಡಿ, ಬಿಸಿಯೂಟ, ಆಶಾ ನೌಕರರಿಗೆ 5-10 ವರ್ಷಗಳಾದರು  1 ರೂಪಾಯಿ ಸಂಬಳ ಹೆಚ್ಚಳ ಮಾಡಲಿಲ್ಲ ಇಂತಹ ಈ ಸರ್ಕಾರ ನಮಗೆ ಯಾಕೆ ಬೇಕು? ಇವರಿಗೆ ನಮ್ಮ ಮತ ಚಲಾಯಿಸಬೇಕೇ? ಈ ಹಿನ್ನೆಲೆಯಲ್ಲಿ ಸಿಐಟಿಯು   ಕಾರ್ಮಿಕ ಪ್ರಣಾಳಿಕೆಯನ್ನು ಹೊರತಂದಿದೆ.  ಕಾರ್ಮಿಕ ಹಕ್ಕುಗಳು ಧಮನ ಮಾಡುವ, ಕಾರ್ಪೊರೇಟರನ್ನು ರಕ್ಷಿಸುತ್ತ ದೇಶದ ಸಂಪತ್ತನ್ನು ಲೂಟಿ ಮಾಡುವವರ ವಿರುದ್ಧ ಸವಿಧಾನ ಹಾಗೂ ಧರ್ಮ ನಿರಪೇಕ್ಷೇಯ ಮೌಲ್ಯಗಳನ್ನು ನಾಶ ಮಾಡುವವರ ವಿರುದ್ಧ ಹಾಗೂ ಸದಾ ಜನತೆಯ ಹಕ್ಕುಗಳಿಗಾಗಿ ಹೋರಾಡುವ ಎಡ ಮತ್ತು ಜಾತ್ಯಾತೀತ ಶಕ್ತಿಗಳು ಗೆಲುವಿಗಾಗಿ ಮತ ಚಲಾಯಿಸಲು ಕರೆ ನೀಡಿದರು‌
 ಜೆ. ಯಂ. ಚನ್ನಬಸಯ್ಯ ಪ್ರಧಾನ ಕಾರ್ಯದರ್ಶಿ,  ಸಿ ಐ ಟಿ ಯು ಜಿಲ್ಲಾ ಸಮಿತಿ, ಬಳ್ಳಾರಿ. ತಾಯಪ್ಪ ಜಿಲ್ಲಾಧ್ಯಕ್ಷರು ಐಎನ್ಟಿಯುಸಿ ಎಂ ತಿಪ್ಪೇಸ್ವಾಮಿ  ಅಧ್ಯಕ್ಷರು ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘ ಕೆಎಂ ಗುರುಸಿದ್ಧಮೂರ್ತಿ  ಪಿಂಚಣಿ ನೌಕರರ ಸಂಘ, ಪಾಂಡುರಂಗ ಕುಡಿತಿನಿ ಎರಿಸ್ವಾಮಿ, ನವೀನ್ ಸುದ್ದಿಗೋಷ್ಠಿಯಲ್ಲಿ ಇದ್ದರು.

One attachment • Scanned by Gmail