
-ಸಿದ್ದು ಬಿರಾದಾರ
ಆಲಮೇಲ,ಏ.28-2023ನೇ ಸಾರ್ವತಿಕ ಚುನಾವಣೆ ಆಲಮೇಲ ತಾಲೂಕಿಗೆ ಪ್ರಥಮ ಚುನಾವಣೆಯಾಗಿದೆ. ಈ ಚುನಾವಣೆ ಹೊತ್ತಲ್ಲಿ ಆಲಮೇಲ ನಗರಕ್ಕೆ ಅನೇಕ ಅಭಿವೃದ್ದಿಯ ಕೇಲಸಗಳು ಆಗಬೇಕಿದೆ. ಆಲಮೇಲ ಪಟಣ್ಣ ಈಗ ಅನೇಕ ಕುಂದು ಕೋರತೆಗಳು ಎದ್ದು ಕಾಣುತ್ತಿರುವ ತಾಲೂಕು ಆಗಿದೆ.
ಮೊನ್ನೆ ನಡೆÀದ ಉಪಚುನಾವಣೆಯಲ್ಲಿ 3 ಪಕ್ಷದ ರಾಜ್ಯ ನಾಯಕರು ಭರವಸೆಗಳ ಸುರಿಮಳೆಗೈದು ಹೋದರು ಆದರೆ ಅದರಲ್ಲಿ ಪ್ರಮುಖವಾದ ಯೋಜನೆಗಾಳದ ತೋಟಗಾರಿಕೆ ಕಾಲೇಜು, ಕಡಣಿ ಬ್ರೀಜ್, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಹೀಗೆ ಅನೇಕ ಯೋಜನೆ ಆಗಬೆಕಿತ್ತು ಅವು ಯಾವವು ಆಗಲಿಲ್ಲ .
ಆಲಮೇಲ ಪಟ್ಟಣವು ದಿನೆ ದಿನೆ ಬೇಳೆಯುತ್ತಿರುವ ಪಟ್ಟಣವಾಗಿದೆ ಮತ್ತು ಇದರ ಸುತ್ತ-ಮುತ್ತಲಿನ ಹಳ್ಳಿಗಳಿಗೆ ವ್ಯಾಪರ ಕೇಂದ್ರವಾಗಿದೆ. ಇಲ್ಲಿ ಮೂರು ಸಕ್ಕರೆ ಕಾರ್ಖಾನೆ ಇರುವುದರಿಂದ ಈಗ ಸಕ್ಕರೆ ತಾಲೂಕು ಎಂದು ಹೇಸರು ವಾಸಿಯಾಗುತ್ತಿರುವ ತಾಲೂಕು ಆದರೆ ಈ ತಾಲೂಕಿಗೆ ಈಗ ಅಭಿವೃದ್ದಿಯ ಕೇಲಸಗಳು ಆಗಬೇಕಿದೆ.
ತೋಟಗಾರಿಕೆ ಕಾಲೇಜು: ಅಂದು 2018ರಲ್ಲಿ ಶಾಸಕರಾದ ದಿ||ಎಮ್.ಸಿ.ಮನಗೂಳಿ ಅವರು ಘೋಷಣೆಮಾಡಿದ ತೋಟಗಾರಿಕೆ ಕಾಲೇಜು ಈ ಭಾಗದ ಜನರಿಗೆ ಮಹತ್ವವಾದ ಕಾಲೇಜು ಆಗಿತ್ತು ಮತ್ತು ಈ ಭಾಗದ ಅಭಿವೃದ್ದಿಗೆ ಅದು ಒಂದು ಮಹತ್ವದ ಯೋಜನೆಯಾಗಿತ್ತು ಉಪಚುನಾವಣೆಯಲ್ಲಿ ಬಂದ ಎಲ್ಲಾ ರಾಜಿಕೀಯ ಮುಖಂಡರು ತೋಟಗಾರಿಕೆ ಕಾಲೇಜು ಮಾಡೇ ತೀರುತ್ತವೆಯೆಂದು ಹೇಳಿ ಹೋದವರು ಈ ಕಡೆ ಬರಲೆ ಇಲ್ಲ ಈ ಕಾಲೇಜು ಆಗಲೆ ಇಲ್ಲ.
ಕಡಣಿ ಬ್ರೀಜ್: ಈ ಕಡಣಿ ಬ್ರಿಜ್ ಮಹಾರಾಷ್ಟ್ರ ಮತ್ತು ಕರ್ನಾಟಕ್ಕೆ ದಾರಿ ಕಲ್ಪಿಸುವ ಬಿಜ್ರ್ ಆಗಿರುವುದರಿಂದ ಈ ಬ್ರಿಜ್ ಆದರೆ ಆಲಮೇಲದ ವ್ಯಾಪರಸ್ಥರಿಗೆ ಮತ್ತು ಮಹರಾಷ್ಟ್ರÀಕ್ಕೆ ಸಂಪರ್ಕ ಕಲ್ಪಿಸಲು ಮತ್ತು ವ್ಯಾಪಾರ ವ್ಯವಹಾರ ಮಾಡಲು ಅನೂಕಲಕರ ವಾಗಲಿದೆ.
ಪದವಿ ಪೂರ್ವ ಪದವಿ ಕಾಲೇಜು: ಆಲಮೇಲ ತಾಲೂಕು ಕೇಂದ್ರವಾಗಿದ್ದರು ಈ ಪಟಣ್ಣದಲ್ಲಿ ಒಂದು ಸರಕಾರಿ ಗಂಡು ಮಕ್ಕಳ ಪ್ರೌಢ ಶಾಲೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಲೇಜು ಇಲ್ಲದ್ದಿರುವದು ಬಹಳ ವಿಷಾದದ ಸಂಗತಿ ಇಲ್ಲಿನ ಹೆಣ್ಣು ಮಕ್ಕಳು ಪಿಯುಸಿ ವಿಜ್ಞಾನ ವಿಭಾಗದ ಶಿಕ್ಷಣಕ್ಕೆ ಇಲ್ಲಿಂದ 20ಕಿಲೋಮೀಟರ ದೂರ ಹೋಗಬೇಕಾಗುತ್ತದೆ ಆದರೆ ವಿದ್ಯಾವಂತ ಬಡ ಹೆಣ್ಣುಮಕ್ಕಳಿಗೆ ಇದು ಆಗುತ್ತಿಲ್ಲ
ಇನ್ನು ಆಲಮೇಲ ತಾಲೂಕು ಕೇಂದ್ರವಾದರು ಆಲಮೇಲ ನಗರದಲ್ಲಿ ತಹಶೀಲ್ದಾರ ಕಚೇರಿ ಮತ್ತು ತಾಲೂಕು ಪಂಚಾಯತಿ ಕಚೇರಿ ಬಿಟ್ಟರೆ ಇನ್ನೂ ಉಳಿದ ಯಾವುದೇ ತಾಲೂಕ ಕಚೇರಿಗಳು ಪ್ರಾರಂಭವಾಗದೆ ಇರುವದು ಆಲಮೇಲ ಅಭಿವೃದ್ದಿ ಆಗದೆ ಇರುವದಕ್ಕೆ ಕೈಗನ್ನಡಿಯಾಗಿದೆ.
ಇನ್ನು ಆಲಮೇಲ ಪಟಣ್ಣದಲ್ಲಿ ಒಳ ಚರಂಡಿ ವ್ಯವಸ್ಥೆ ಮತ್ತು ರಸ್ತೆಗಳ ಅಭಿವೃದ್ದಿ ಆಗಬೇಕಿದೆ ಮತ್ತು ಈ ಆಲಮೇಲ ಪಟಣ್ಣದಲ್ಲಿ ಒಂದೇ ಒಂದು ಗ್ರಂಥಾಲಯ ವಿಲ್ಲದಿರುವದು ವಿಷಾದದ ಸಂಗತಿ ಈ ಎಲ್ಲಾ ಕಾರ್ಯಗಳು ಯಾರು ಮಾಡುವವರೋ ಅವರಿಗೆ ನಮ್ಮ ಮತ ಎಲ್ಲರೂ ಚುನಾವಣೆ ಸಮಿಪ ವಿದ್ದಾಗ ಬಂದು ಆಶ್ವಾವಾಸನೆ ಮಹಾಪೂರವೆ ಹರಿಸುತ್ತಾರೆ ಆದರೆ ಅಭಿವೃದ್ದಿಯ ಬಗ್ಗೆ ಯಾರು ಒತ್ತುಕೊಡುವವರೋ ಅವರಿಗೆ ನಮ್ಮ ಮತ ಎಂದು ಆಲಮೇಲದ ಮತದಾರರು ಹೇಳುತ್ತಿದ್ದಾರೆ.