ಅಭಿವೃದ್ಧಿಯಲ್ಲಿ “ಶೂನ್ಯ” ಸಾಧನೆಯ ಉತ್ಸವಕ್ಕೆ ಮೇಲುಗೈ: ಜ್ಞಾನೇಶ್ವರ ಸಿಂಗಾರೆ

ಬೀದರ್: ಮಾ.14:ಬೀದರ್ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಸುಮಾರು 18 ಲಕ್ಷಕ್ಕೂ ಹೆಚ್ಚು ಗುಡಿಸಲು ಮನೆಗಳು ಯಥಾಸ್ಥಿತಿಯಲ್ಲಿವೆ, ಲಕ್ಷಾಂತರ ವಿದ್ಯಾವಂತ ಯುವಕ/ಯುವತಿಯರು ನಿರುದ್ಯೋಗಿಳಾಗಿದ್ದಾರೆ, ಬಡ ಕುಟುಂಬದ ಬದುಕು ಆರ್ಥಿಕವಾಗಿ ಸಮಾಜದಲ್ಲಿ ಹೀನಾಯವಾಗಿ ಬದುಕುವಂತಹ ಸ್ಥಿತಿ ಬಂದೂದಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಗಾಗಿ ಕೋಟ್ಯಂತರ ರೂಪಾಯಿ ಬಜೆಟ್ ನೀಡಿದರು ಖರ್ಚು ಮಾಡದೇ 7ಡಿ ಮೂಲಕ ಲೂಟಿ ಮಾಡಿ ಬಹುಜನರನ್ನು ಯಥಾಸ್ಥಿತಿಗೆ ತರಲು ಯಶಸ್ವಿಯಾಗಿದ್ದಾರೆ, ಕೇಲವು ರಾಜಕೀಯ ನಾಯಕರು ತಮ್ಮ ಬಡತನ ನಿರ್ಮೂಲನೆ ಮಾಡಬಹುದು,ಯುವಕ/ಯುವತಿಯರಿಗೆ ಉದ್ಯೋಗ ನೀಡಬಹುದು, ಸಮಾಜದಲ್ಲಿ ಸ್ವಾಭಿಮಾನದಿಂದ,ಸ್ವಾವಲಂಬಿಯಾಗಿ ಬದುಕುವ ಸಮಾಜವನ್ನು ರೂಪಿಸುತ್ತಾರೆ ಎಂಬ ಕನಸು ಹೆuಟಿಜeಜಿiಟಿeಜತ್ತು ಮತದಾನ ಮಾಡುವ ಮೂಲಕ ಆಯ್ಕೆಮಾಡಿ ಪ್ರಚಂಡ ಬಹುಮತದಿಂದ ಆರಿಸಿದ ಪ್ರಜ್ಞಾವಂತ ಮತದಾರರಿಗೆ ಯಾವ ಬಗೆಯ ನ್ಯಾಯ ಸಿಕ್ಕಿದೆ?
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಿಲ್ಲೆಗಳ, ತಾಲೂಕುಗಳ ಉತ್ಸವ ಮಾಡುವುದರಿಂದ ಅಧಿಕಾರದಲ್ಲಿರುವ ಸರಕಾರಕ್ಕೆ ಪಕ್ಷದ ಪ್ರಗತಿ ಬೆಳೆಸಲು ಉನ್ನತ ಮಟ್ಟದ ಅಭಿವೃದ್ಧಿ ಮಾಡಿರುತ್ತಾರೆ ಎಂಬ ಸಂದೇಶ ಸಾರುವುದು, ಪಕ್ಷದ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ ಪ್ರಶಂಸೆಗೆ ಪಾತ್ರರಾಗುತ್ತಾರೆ, ಪಕ್ಷದಲ್ಲಿ ಹಿರಿಮೆ ಸಾಧಿಸಲು ಮಾಡುವ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುವ ಹುನ್ನಾರ ಎನ್ನಬಹುದು.
ಶರಣರ ಕ್ರಾಂತಿಯ ನಾಡು ಕಲ್ಯಾಣದ ಉತ್ಸವ ನಿಮಿತ್ತವಾಗಿ ಹೆಲಿಕಾಪ್ಟರ್ ಒಂದರಲ್ಲಿ ಜನ ಪ್ರಯಾಣಿಸುವ ಸಂದರ್ಭದಲ್ಲಿ ಸುತ್ತಮುತ್ತಲಿನ ತಮ್ಮ ಗುಡಿಸಲು ಮನೆಗಳನ್ನು ನೋಡಿ ಕಣ್ಣೀರಿಟ್ಟ ನೈಜ ಸಂಗತಿಯಾಗಿದೆ. ದಿನಗೂಲಿ ಕೆಲಸ ಸಿಗದೆ ದಾರಿಯಲ್ಲಿ ಸಾಲಾಗಿ ನಿಂತಿರುವ ದಿನಗೂಲಿ ಕೂಲಿಕಾರರು, ಸ್ತಳೀಯ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗದೆ ಅಡ್ಡಾಡುತಿರುವ ಯುವಕರು, ಒಂದೂತ್ತಿನ ಊಟ ಸಿಗದೆ ಪರದಾಡುತ್ತಿರುವ ವೃದ್ಧರು, ಮನೆಯ ಗೆuಟಿಜeಜಿiಟಿeಜಡೆ ಕುಸಿದು ಬಿದ್ದು ವಲಸೆ ಹೋದ ನಿರ್ಗತಿಕರಿಗೆ ಯಥಾಸ್ಥಿತಿಯಲ್ಲಿಟ್ಟು ಉತ್ಸವ ಮಾಡುತ್ತಿರುವುದು ತುಂಬಾ ದುಃಖಕರ ಸಂಗತಿ. ಕೇಲವು ರಾಜಕೀಯ ನಾಯಕರಿಗೆ ಲಕ್ಷಾಂತರ ಮತದಾರರ ನೋವು ಆಲಿಸುವ ಸಮಯ ಕೂಡ ಸಿಗುತ್ತಿಲ್ಲ ಹಾಗಿದ್ದರೆ ಮತದಾರರ ಅಂತಹ ರಾಜಕೀಯ ನಾಯಕರನ್ನು ರಾಜಕೀಯದಿಂದ ನಿವೃತ್ತಗೆuಟಿಜeಜಿiಟಿeಜಳಿಸುವುದು ಉತ್ತಮ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿಯ ಬಜೆಟ್ ಜಾರಿಯಾದರೂ ಸುಮಾರು ಸಾವಿರಾರು ಪೂರ್ಣಗೆuಟಿಜeಜಿiಟಿeಜಳ್ಳದ ಕಾಮಗಾರಿಗಳು, ಅಪೂರ್ಣವಾದ ಕಾಮಗಾರಿಯ ಹಣವು ಬಿಡುಗಡೆಯಾದ ಘಟನೆ, ಇಂತಹ ಕೋಟ್ಯಂತರ ರೂಪಾಯಿ ಹಗರಣ ಮಾಡುತ್ತಿರುವ ಕೇಲವು ರಾಜಕೀಯ ನಾಯಕರ ಬಣ್ಣದ ಮುಖ ಜನತೆಯ ಕಣ್ಣಿಗೆ ಕಾಣದಂತಾಗಿ ಸೋಲ ಕಂಡ ಸೂರರು ನಮ್ಮ ಮತದಾರರು ಎನ್ನಬಹುದು.
ಘಟನಾಗಟಿ ಶಾಸಕರು, ಸಚಿವರು,ಮಂತ್ರಿಗಳು, ನಿಗಮ ಮಂಡಳಿ ಅಧ್ಯಕ್ಷರು ಇದ್ದರು, ಸ್ಥಳೀಯ ಕೈಗಾರಿಕಾ ವಲಯದಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಯಾವ ವಲಯದಲ್ಲೂ ಕೆಲಸ ಸಿಗುತ್ತಿಲ್ಲ, ಇಂದು ಮತದಾನ ಮಾಡಿದ ಕೈ ಬದುಕಲು ಆರ್ಥಿಕವಾಗಿ,ಉದ್ಯೋಗಕ್ಕಾಗಿ ಕೈ ಚಾಚುತ್ತಿದೆ.
ನಮ್ಮ ಬೀದರ್ ಭಾಗದಲ್ಲಿರುವ ಹಲವಾರು ಖಾಸಗಿ ಕಂಪನಿಗಳಲ್ಲಿ ನೇರ ರಾಜ್ಯದವರೇ ಹೆಚ್ಚಿನ ಉದ್ಯೋಗದಲ್ಲಿದ್ದಾರೆ ಇಲ್ಲಿನ ಯುವಕ/ಯುವತಿಯರು ಹೋರ ರಾಜ್ಯ ವಲಸೆ ಹೋಗುವ ಸಂದರ್ಭ ಬಂದಿದೆ. ಹಾಗಾಗಿ ಸ್ತಳೀಯ ರಾಜಕೀಯ ನಾಯಕರು ನಿರುದ್ಯೋಗ ಯುವ ಸಮೂಹದ ಸಮೀಕ್ಷೆ ನಡೆಸಿ ಸೂಕ್ತವಾದ ಸ್ವಾಭಿಮಾನದ, ಸ್ವಾವಲಂಬಿಯಾಗಿ ಬದುಕುವ ವಾತಾವರಣ ನಿರ್ಮಿಸುವುದು ಸೂಕ್ತ. ಇದು ಅಭಿವೃದ್ಧಿಯ ಉತ್ಸವವಲ್ಲ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆಯ ಉತ್ಸವೆಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಬಸವಕಲ್ಯಾಣ ಉಸ್ತುವಾರಿ ಶ್ರೀ ಜ್ಞಾನೇಶ್ವರ ಸಿಂಗಾರೆ ಪತ್ರಿಕಾ ಮಾಧ್ಯಮಗಳ ಮೂಲಕ ಬಹುಜನರಿಗೆ ಉತ್ಸವದ ಮನದಾಳದ ಮಾತು ವ್ಯಕ್ತಪಡಿಸಿದರು.